ಹೆಚ್.ಡಿ.ಕೋಟೆ/ ಸರಗೂರು: ಮೈಸೂರು ಜಿಲ್ಲೆಯ ಚರ್ಮ ರೋಗ ತಜ್ಞರ ಸಂಘದ ವತಿಯಿಂದ ಚರ್ಮ ರೋಗ ತಪಾಸಣೆ ಶಿಬಿರವನ್ನು ಭಾನುವಾರ ಹೆಚ್.ಡಿ.ಕೋಟೆ ತಾಲೂಕಿನ ಎನ್.ಬೆಳ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರನಹಾಡಿಯಲ್ಲಿ ಆಯೋಜಿಸಲಾಗಿತ್ತು.
ಶಿಬಿರದಲ್ಲಿ ಕೆ.ಆರ್.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದಯಾನಂದ್, ಡಾ.ನಂಜುಂಡ ಸ್ವಾಮಿ, ಡಾ.ಬಂಗಾರು, ಡ.ಸುರೇಂದ್ರನಾಥ, ಡಾ.ಸತೀಶ್, ಡಾ.ನವೀನ್ ಹಾಗೂ ಕೆ.ಆರ್.ಆಸ್ಪತ್ರೆಯ ಇತರ ವೈದ್ಯರು, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿ ಕುಮಾರ್ ಹಾಜರಿದ್ದರು.
ಇದೇ ಸಂದರ್ಭದಲ್ಲಿ ಮಕ್ಕಳಿಗೆ ಚರ್ಮ ರೋಗ ತಪಾಸಣೆ ನಡೆಸಿ ಎಲ್ಲರಿಗೂ ಔಷಧಿ, ಪೆನ್ನು, Ointments, Shampoo, ಪ್ರೋಟೀನ್ ಪೌಡರ್ ವಿತರಿಸಲಾಯಿತು. ಇದರ ಜೊತೆಗೆ ಹಿರಿಯರಿಗೆ ರಕ್ತದೊತ್ತಡ(BP) ಮತ್ತು ರಕ್ತ ಪರೀಕ್ಷೆ ಮಾಡಲಾಯಿತು.
ಮಾರನಹಾಡಿ ಮತ್ತು ದಮ್ಮನಕಟ್ಟೆ ಹಾಡಿಯಲ್ಲಿ ಸುಮಾರು 250ರಿಂದ 300 ಜನರಿಗೆ ತಪಾಸಣೆ ನಡೆಸಿ ಸ್ಥಳದಲ್ಲೇ ಔಷಧಿಗಳನ್ನು ವಿತರಿಸಲಾಯಿತು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy