ಬೆಂಗಳೂರಿನಲ್ಲಿ ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದಲ್ಲಿ ಚಾತುರ್ಮಾಸ್ಯ ಯತಿ ಸಮ್ಮೇಳನ ನಡೆಸಲಾಯಿತು. ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದಲ್ಲಿ ಚಾತುರ್ಮಾಸ್ಯ ಯತಿ ಸಮ್ಮೇಳನದಲ್ಲಿ ಶಾಸಕ ಕೆ ಗೋಪಾಲಯ್ಯ ಭಾಗವಹಿಸಿದರು. ಈ ವೇಳೆ ಶ್ರೀಗಳ ಆಶೀರ್ವಾದ ಪಡೆದರು.
ಹರಿಹರಪುರ ಮಠದ ಪೂಜ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ರವರು ಇಲ್ಲಿ 90 ದಿನಗಳ ಚಾತುರ್ಮಾಸ್ಯ ವ್ರತ ಕೈಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂಜ್ಯ ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ತುಮಕೂರು ಆಶ್ರಮದ ಪೂಜ್ಯ ಶ್ರೀ ವೀರೇಶಾನಂದ ಸರಸ್ವತೀ ಸ್ವಾಮೀಜಿ, ಓಂಕಾರ ಆಶ್ರಮದ ಪೂಜ್ಯ ಶ್ರೀ ಶಾಂತಾನಂದ ಸ್ವಾಮೀಜಿ, ಇತರೆ ಮಠಗಳ ಶ್ರೀಗಳು, ಮಾಜಿ ಶಾಸಕ ನೆ. ಲ. ನರೇಂದ್ರ ಬಾಬು, ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ, ಎಸ್. ಹರೀಶ್, ಚಾತುರ್ಮಾಸ್ಯ ಸಮಿತಿಯ ರಾಘವೇಂದ್ರ ಭಟ್, ಕ್ಷೇತ್ರ ಬಿಜೆಪಿ ಮಂಡಲ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಎನ್. ಜಯರಾಮಣ್ಣ, ವೆಂಕಟೇಶ್ ಮೂರ್ತಿ, ಎನ್. ವೆಂಕಟೇಶ್, ನಿಸರ್ಗ ಜಗದೀಶ್, ಗಂಗ ಹನುಮಯ್ಯ, ಶಿವಾನಂದ್ ಮೂರ್ತಿ, ಜಯಸಿಂಹ ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


