ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬು ತೂಕ ಮಾಡುವಾಗ ರೈತರನ್ನು ವಂಚಿಸುತ್ತಿದ್ದಾರೆ ಎಂದು ಆಡಳಿತ ಪಕ್ಷದ ಶಾಸಕ ಲಕ್ಷ್ಮಣ ಸವದಿ ವಿಧಾನಸಭೆಯಲ್ಲಿ ಆರೋಪಿಸಿದ್ದಾರೆ. ನಿಯಮ 69ರರಡಿ ವಿಷಯ ಪ್ರಸ್ತಾಪಿಸಿದ ಅವರು, ಕಬ್ಬು ಬೆಳೆಗಾರರಿಗೆ, ಸಾಗಣೆದಾರರಿಗೆ, ಕಟಾವು ಮಾಡುವವರಿಗೆ ಕೆಲವು ಸಕ್ಕರೆ ಕಾರ್ಖಾನೆಗಳಿಂದ ವಂಚನೆಯಾಗುತ್ತಿದೆ.
ಇದನ್ನು ತಪ್ಪಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಹಿಂದಿನ ಸಕ್ಕರೆ ಸಚಿವರು ಏಕಕಾಲದಲ್ಲಿ 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ಮಾಡಿದ್ದರು. ಆದರೆ, ಏನು ಪ್ರಯೋಜನ ಆಗಿಲ್ಲ. ತೂಕದಲ್ಲಿ ವ್ಯವಸ್ಥಿತವಾಗಿ ಮೋಸ ಮಾಡಲಾಗುತ್ತಿದೆ. ಈ ವ್ಯವಹಾರವನ್ನೂ ಒಬ್ಬ ವ್ಯಕ್ತಿ ನಿರ್ವಹಿಸುತ್ತಿದ್ದಾರೆ. ಆತನನ್ನು ಭೂಗತ ದೊರೆ ಎನ್ನಬಹುದು.
ರೈತರ ಮೇಲೆ ಗೂಂಡಾಗಳಿಂದ ಹಲ್ಲೆ:
ಮಹಾರಾಷ್ಟ್ರದಲ್ಲಿ ದೊಡ್ಡ ಜಾಲವೇ ಇದೆ. ತೂಕ ಮಾಡುವ ಸಾಪ್ಟವೇರ್ ಅಳವಡಿಸಿದರೆ, ಖಾಸಗಿ ವೇಬ್ರಿಡ್‌ಜ್‌ನಲ್ಲಿ ಒಂದು ತೂಕವಾದರೆ, ಕಾರ್ಖಾನೆಗಳಲ್ಲಿ ಕಡಿಮೆ ತೂಕ ಬರಲಿದೆ. ಅದನ್ನು ಪ್ರಶ್ನಿಸಿದ ರೈತರ ಮೇಲೆ ಗೂಂಡಾಗಳಿಂದ ಹಲ್ಲೆ ಮಾಡಿಸಿರುವ ಉದಾಹರಣೆಗಳಿವೆ. ಒಂದೊಂದು ಕಾರ್ಖಾನೆಯಲ್ಲೂ 40-50 ಸಾವಿರ ಟನ್ ಕಬ್ಬನ್ನು ಈ ರೀತಿ ವಂಚಿಸಲಾಗುತ್ತಿದೆ.
ಮೋಸದ ಹಣದಲ್ಲಿ ಹೊಸ ಸಕ್ಕರೆ ಕಾರ್ಖಾನೆ ಖರೀದಿಗೆ ಮುಂದಾಗಿದ್ದಾರೆ. ಎಲ್ಲ ಕಾರ್ಖಾನೆಗಳು ತೂಕದಲ್ಲಿ ವಂಚಿಸುತ್ತಿಲ್ಲ. ಕೆಲವೊಂದು ಬೆರಳಣಿಕೆಯಷ್ಟು ಕಾರ್ಖಾನೆಗಳು ಮಾತ್ರ ತೂಕವನ್ನು ನಿಖರವಾಗಿ ಮಾಡುತ್ತವೆ ಎಂದು ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


