ಚಿಕ್ಕೋಡಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಉಗಾರ ಹಾಗೂ ಭೋಜ ಗ್ರಾಮಗಳಲ್ಲಿ ಜೈನ ಮಹಿಳೆಯರಿಗೆ ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಉಚಿತ ಹೊಲಿಗೆ ಯಂತ್ರ ತರಬೇತಿ ಕೇಂದ್ರ ಪ್ರಾರಂಭಿಸಲಾಯಿತು.
ಅದರ ಜೊತೆಗೆ ಉಗಾರ ಗ್ರಾಮದಲ್ಲಿ ರೇಶನ್ ಕಿಟ್ ವಿತರಣೆ ಮಾಡಲಾಯಿತು. ವರ್ಧಮಾನ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಜೈನ ಮಹಿಳೆಯರಿಗೆ ಆರ್ಥಿಕ ಸಶಕ್ತಿ ಕರಣದ ಅಂಗವಾಗಿ ಉಗಾರ ಹಾಗೂ ಭೋಜ ಗ್ರಾಮಗಳಲ್ಲಿ ಉಚಿತವಾಗಿ ಹೊಲಿಗೆ ತರಬೇತಿ ಕೇಂದ್ರ ಪ್ರಾರಂಭಿಸಲಾಯಿತು.
ಈ ಕೇಂದ್ರಗಳಲ್ಲಿ ಬಡ ಮಹಿಳೆಯರಿಗೆ ಉಚಿತ ತರಬೇತಿ ನೀಡಿ, ಅವರಿಗೆ ಹೊಲಿಗೆ ಯಂತ್ರಗಳನ್ನು ಉಚಿತವಾಗಿ ಕೊಡಲಾಗುವುದು.
ಉಗಾರ ಮತ್ತು ಭೋಜ ಗ್ರಾಮಗಳಲ್ಲಿ ಶ್ರಾವಕ- -ಶ್ರಾವಕಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು
ವರದಿ: ಜೆ.ರಂಗನಾಥ– ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4