ಬೀದರ್: ಜಿಲ್ಲೆಯ ಔರಾದ ತಾಲೂಕಿನ ಎಕಂಬಾ ಗ್ರಾಮದಲ್ಲಿ ಶಾಲಾ ಬಸ್ ಚಕ್ರದಡಿ ಸಿಲುಕಿ ಆರು ವರ್ಷದ ಮಗುವೊಂದು ಮೃತಪಟ್ಟಿದೆ.
ಕಾವೇರಿ ಆಕಾಶ ಶಿಂಧೆ ಮೃತ ಕಂದಮ್ಮ. ಎಂದಿನಂತೆ ಊರಲ್ಲಿರುವ ಪಬ್ಲಿಕ್ ಶಾಲೆಗೆ ಹೋಗಿದ್ದ ಮಗು ಬಸ್ ಹಿಂಬದಿಯಿಂದ ತರಗತಿ ಕೋಣೆಯತ್ತ ಹೋಗುತ್ತಿದ್ದಾಗ ಚಾಲಕ ಬಸ್ ಹಿಂದಕ್ಕೆ ತೆಗೆದಿದ್ದು ಈ ವೇಳೆ ಮಗು ಚಕ್ರಕ್ಕೆ ಸಿಲುಕಿದೆ.
ಮಗುವನ್ನು ತಕ್ಷಣವೇ ಔರಾದ್ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮಗು ಕೊನೆಯುಸಿರೆಳೆದಿದೆ. ಘಟನೆ ಸಂಬಂಧ ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
ಮಗುವಿನ ಸಾವಿಗೆ ಸಂಬಂಧ ಪಟ್ಟಂತೆ ಬಸ್ ಚಾಲಕ ಹಾಗೂ ಆಡಳಿತ ಮಂಡಳಿ ವಿರುದ್ಧವೂ ಕೇಸ್ ದಾಖಲಿಸುವಂತೆ ಮಗುವಿನ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಆಸ್ಪತ್ರೆ ಎದುರು ಪಾಲಕರು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


