ದಾವಣಗೆರೆ: ಭರತ ಖಂಡದ ಸಂಸ್ಕೃತಿ– ಸಂಸ್ಕಾರದ ಪ್ರತೀಕವಾಗಿರುವ ಜಾನಪದ ಸಂಸ್ಕಾರದ ಮೂಲ ಬೇರಾಗಿರುವ ಜಿನಭಜನೆಯ ಸಂಸ್ಕೃತಿ- -ಸಂಸ್ಕಾರದಿಂದ ಮಕ್ಕಳು ಸುಸಂಸ್ಕೃತರಾಗಲು ಸಹಕಾರಿಯಾಗಲಿದೆ ಎಂದು ಜಿನ ಭಜನೆಯ ಪ್ರಧಾನ ರೂವಾರಿಗಳು, ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ತ್ಯಾಗಿ ಸೇವಾ ಸಮಿತಿ ಅಧ್ಯಕ್ಷರಾದ ಅನಿತಾ ಸುರೇಂದ್ರ ಕುಮಾರ್ ಅಭಿಪ್ರಾಯಪಟ್ಟರು.
ಅವರಿಂದು ದಾವಣಗೆರೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಭವನದಲ್ಲಿ ನಡೆದ ಭಾರತೀಯ ಜೈನ್ ಮಿಲನ್ ವಲಯ –8, ದಾವಣಗೆರೆ ಜೈನ್ ಮಿಲನ್, ಶ್ರೀ ಆದಿನಾಥ ಜೈನ್ ಮಿಲನ್, ಸಮಸ್ತ ದಿಗಂಬರ ಜೈನ ಸಮಾಜದ, ದಾವಣಗೆರೆ ವಿಭಾಗ ಮಟ್ಟದ ಹಿರಿಯ ಹಾಗೂ ಹಿರಿಯರ ಜಿನಭಜನ ಸ್ಪರ್ಧೆ ಎಂಟನೇ ಆವೃತ್ತಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿನ ಭಜನೆ ಸಂಸ್ಕಾರ ನೀಡುವವರು ಯೋಚನೆ –ಯೋಜನೆ ಮಾಡುವುದು ಅಗತ್ಯ, ಇದರಿಂದ ಹಲವಾರು ಕುಟುಂಬಗಳು ಜೂಜು, ಕುಡಿತ ದಂತಹ ದುಶ್ಚಟಗಳನ್ನು ಬಿಟ್ಟು ಶಿಸ್ತು ಬದ್ಧ ಜೀವನ ನಡೆಸುತ್ತಿದ್ದಾರೆ, ಇದಕ್ಕೆ ಹೆಗ್ಗಡೆ ಕುಟುಂಬ ಕಾರಣವಾಗಿದೆ ಎಂದು ಅವರು, ಗಾಳಿ ಕಾಣುವುದಿಲ್ಲ ಅದರ ಚಲನ ಶಕ್ತಿ ಹಾಗೂ ದೈವ ಶಕ್ತಿಯಿಂದ ಪ್ರಕೃತಿ ನಿರಂತರವಾಗಿದೆ ಭಗವಂತನ ಸ್ಮರಣೆಯಿಂದ ಶಾಂತಿ ಹೆಚ್ಚುತ್ತದೆ ಎಂದರು.
ದೇವರ ಸ್ಮರಣೆ ಭಜನೆ ನಿತ್ಯ ಪಾಠವಾಗಬೇಕು. ಸಂಸ್ಕಾರ ಸಿಗಲು ಭಜನೆ ಹೆಚ್ಚಾಗಬೇಕು, ಅದರಿಂದ ಭಜನೆಗೆ ಪ್ರೋತ್ಸಾಹ ನೀಡಬೇಕು ಎಂದರು.
ಸ್ಪರ್ಧಾ ಮನೋಭಾವಕ್ಕೆ ಹಣ ಮುಖ್ಯವಲ್ಲ ನಮ್ಮ ಕೆಲಸದಿಂದ ಶಾಶ್ವತವಾದ ಕಾರ್ಯ ವಾಗಬೇಕು ಬಹುಮಾನಕ್ಕಿಂತ ದೈವಸ್ಮರಣೆ ಅಗತ್ಯ ಎಂದರು.
ದಾವಣಗೆರೆ ಮಹಾವೀರ ಸಂಘದ ಅಧ್ಯಕ್ಷ .ಡಿ ಸುನಿಲ್ ಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಜಿನಭಜನೆ ಫೈನಲ್ ಅನ್ನು ಯಶಸ್ವಿಯಾಗಿ ದಾವಣಗೆರೆಯಲ್ಲಿ ನಡೆಸಲು ಚಿಂತನೆ ನಡೆದಿದೆ ಎಂದರು.
ಜಿತೇಂದ್ರ ಬೇಸೂರು ಮಾತನಾಡಿ, ಜೈನ ಧರ್ಮದಲ್ಲಿ ಜಿನ ಭಜನೆ ಕಾರ್ಯಕ್ರಮ ಹೆಚ್ಚು ಹೆಚ್ಚು ನಡೆಯಲಿ ಎಂದು ಆಶಿಸಿದರು.
ಭಾರತೀಯ ಜೈನ್ ಮಿಲನ್ ವಲಯ –8. ರ ಪ್ರಧಾನ ಕಾರ್ಯದರ್ಶಿ ವಿ.ರತ್ನ ರಾಜು ಪ್ರಾಸ್ತಾವಿಕ ನುಡಿಗಳನ್ನಾಡಿ ಈ ಮೊದಲು ತ್ರಿವೇಣಿ ಸಂಗಮ ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಜೈನ ಸ್ಥಾಪಿತವಾಗಿ ಈಗ 60 ವರ್ಷ ಕಳೆದಿದೆ, ದೇಶಾದ್ಯಂತ 19 ವಲಯಗಳಲ್ಲಿ 1,000 ಶಾಖೆಗಳಿವೆ, ಕರ್ನಾಟಕವನ್ನು ವಲಯ — 8 ಎಂದು ಗುರುತಿಸಲಾಗಿದೆ, 6 ವಲಯಗಳು ಕಾರ್ಯನಿರ್ವಹಿಸುತ್ತಿವೆ, ದಾವಣಗೆರೆ ವಿಭಾಗದಲ್ಲಿ 12 ಮಿಲನ್ ಗಳಿದ್ದು , ಸಮಾಜದ ಬೆಳವಣಿಗೆಗೆ ಸಹಕಾರಿಯಾಗಿದೆ ಇದಕ್ಕೆ ಮತ್ತಷ್ಟು ಸಂಘಟಿತ ಹೋರಾಟ ಅಗತ್ಯ ಎಂದರು.
ಭಾರತೀಯ ಜೈನ್ ಮಿಲನ್ ಜಿನ ಭಜನಾ ಸ್ಪರ್ಧಾ ಕೇಂದ್ರ ಸಮಿತಿ ಸಂಯೋಜಕರಾದ ವಿಲಾಸ್ ಪಾಸಣ್ಣನವರ್ ಮಾತನಾಡಿ, ಜಿನ ಭಜನೆಯ ಮೂಲ ರೂವಾರಿಗಳಾದ ಅನಿತ ಸುರೇಂದ್ರ ಕುಮಾರ್ ಅವರ 2016 ರಲ್ಲಿ ಪರ ವಿರೋಧಗಳ ನಡುವೆ ಪ್ರಾರಂಭವಾಗಿ ಮಕ್ಕಳಿಗೆ ಸಂಸ್ಕಾರ ತುಂಬಲು ಈ ಕಾರ್ಯಕ್ರಮ ಪ್ರೇರೇಪಣೆ ಯಾಯಿತು, ಜಿನಭಜನೆಯಿಂದ ಉತ್ತರ ಕರ್ನಾಟಕದಲ್ಲಿ ಸಂಸ್ಕಾರ ಬೆಳೆಯಲು ಸಹಕಾರಿಯಾಗಿತ್ತು, ಹಿರಿಯ ಹಾಗೂ ಕಿರಿಯ ವಿಭಾಗಗಳನ್ನು ಪ್ರಾರಂಭಿಸಿದರು, ಅಲ್ಲದೆ ಅಂತರಾಷ್ಟ್ರೀಯ ವಿಭಾಗಗಳನ್ನು ತೆರೆಯಲಾಗಿದೆ .ಆನ್ಲೈನ್ ವಿಭಾಗ ಪ್ರಾರಂಭವಾಗಿದೆ ,ಜೈನರನ್ನು ಒಗ್ಗೂಡಿಸುವ ಕಾರ್ಯ ಜಿನ ಭಜನೆ ಮಾಡುತ್ತಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಕಾರ್ಯಾಧ್ಯಕ್ಷರಾದ ಪದ್ಮಪ್ರಕಾಶ್, ಜಿನ ಭಜನೆಗಳು ಭಕ್ತಿ ಮಾರ್ಗಕ್ಕೆ ದಾರಿಯಾಗಿದ್ದು, ಹಾಡಿನಿಂದ ಮನಸ್ಸಿಗೆ ಸಂತೋಷ ಸಮಾಧಾನವಾಗುತ್ತದೆ, ನಾನು “ಬಾಹುಬಲಿ ಸ್ವಾಮಿ ಜಗಕ್ಕೆಲ್ಲ ಸ್ವಾಮಿ” ಹಾಡಿನಿಂದ ಆಕರ್ಷಿತಳಾಗಿದ್ದು, ಇದೊಂದು ಎವರ ಗ್ರೀನ್ ಸಾಂಗ್ಸ್ ಆಗಿದ್ದು, ಮನಸ್ಸಿಗೆ ರೋಮಾಂಚನ — ಉಲ್ಲಾಸ ನೀಡುತ್ತದೆ ಎಂದು ಅವರು, ಮಹಿಳೆಯರು ಧಾರ್ಮಿಕ ಸೇವಾ ಕಾರ್ಯದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು ಇದರಿಂದ ಆತ್ಮಸಾಕ್ಷಿಗೆ ಸಮಾಧಾನ ದೊರೆಯಲಿದೆ ಎಂದರು.
ನಮ್ಮ ಸಮಾಜ ಸೇವೆಯಿಂದ ನಮಗೆ ಖುಷಿ ತಂದಿದೆ. ಹಣಕ್ಕಿಂತ ಸೇವೆ ಅಗತ್ಯವಾಗಿದ್ದು, ಮಹಿಳೆಯರು ಇಂತಹ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲಿ ಎಂದರು.
ಜಿನಸಂಸ್ಕಾರ ಹಾಗೂ ಬಸದಿಗೆ ಬನ್ನಿ ಕಾರ್ಯಕ್ರಮಗಳಿಂದ ದಾವಣಗೆರೆ ಜನತೆಗೆ ಹೆಚ್ಚು ಹೆಚ್ಚು ಪುಣ್ಯ ಲಭಿಸಲಿದೆ ಎಂದ ಅವರು, ಸನ್ಮಾನದಿಂದ ನನಗೆ ಜವಾಬ್ದಾರಿ ಹೆಚ್ಚಾಗಿದೆ. ಧಾರ್ಮಿಕ ಕ್ಷೇತ್ರದಲ್ಲಿ ದಾವಣಗೆರೆ ಮುನ್ನೆಲೆಗೆ ಬರಲಿದೆ ಎಂಬ ಆಶಯ ವ್ಯಕ್ತಪಡಿಸಿದರು .
ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಕೋಮಲ್ ಕುಂದಪ್ಪ, ಮೋತಿ ಖಾನೇ ಪ್ರಸಾದ್, ಸಂತೋಷ್ ಜೈನ್, ಸಂತೋಷ್ ಹೂವಿನ ಹಡಗಲಿ, ಮಹಾವೀರ ಗೋಗಿ, ಕೆ.ಜೆ.ಎ . ಮಂಜುನಾಥ್, ಎಸ್.ಎ.ಪ್ರಶಾಂತ್, ಹರ್ಷ ನಾಗರಾಜ್, ಹೊಸದುರ್ಗ ಸುಮತಿ ಕುಮಾರ. ಇನ್ನಿತರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಮಾಜದ ಏಳಿಗೆಗೆ ಸಹಕರಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ಉದ್ಯಮಿಗಳಾದ ಕೋಮಲ್ ಕುಂದಪ್ಪ ಹಾಗೂ ಮೋತಿ ಖಾನೆ ಪ್ರಸಾದ್ ಬಹುಮಾನಗಳ ಪ್ರಾಯೋಜಕರಾಗಿದ್ದರು.
ಪ್ರೀತಮ್ ದುಂಡಸಿ, ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ಸ್ವಸ್ತಿ ಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಕಳುಹಿಸಿದ ಶುಭ ಸಂದೇಶ ವಾಚಿಸಿದರು.
ಜಿನ ಭಜನೆ ಸ್ಪರ್ಧೆಯ ತೀರ್ಪುಗಾರ ರಾಗಿ ಕಿರಿಯರ ವಿಭಾಗಕ್ಕೆ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಉಪಾಧ್ಯಕ್ಷರು ಹಾಗೂ ರತ್ನತ್ರೆಯ ಕ್ರಿಯೇಷನ್ ಡಾ. ನೀರಜಾ ನಾಗೇಂದ್ರ ಕುಮಾರ್ ಹಾಗೂ ಹಿರಿಯರ ವಿಭಾಗಕ್ಕೆ ಬೆಂಗಳೂರಿನ ಜಿತೇಂದ್ರ ಜೈನ ಹಾಗೂ ಕಾರ್ಕಳದ ವಸಂತ್ ಕುಮಾರ್ ಬಂಗ, ತೀರ್ಪುಗಾರರಾಗಿದ್ದರು. ರವಿ ರಾಜು ತಂಡ ಸಂಗೀತ ವಾಚಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಮಹಾವೀರ ಸಂಘ, ಶ್ರೀ ಮಹಾವೀರ ಯುವ ಮಂಚ್, ಶ್ರೀ ಪದ್ಮಾಂಬ ಜೈನ ಮಹಿಳಾ ಸಮಾಜ ,ಅಭಿಕ್ಷಣ ಸ್ವಾಧ್ಯಾಯ ಮಂಡಳಿ, ದಾವಣಗೆರೆ ದಿಗಂಬರ ಜೈನ ಸಮಾಜ, ದಾವಣಗೆರೆ ವಿಭಾಗದ ಜೈನ ಸಂಘಟನೆಗಳ ಅಧ್ಯಕ್ಷರು ಉಪಾಧ್ಯಕ್ಷರು, ಖಜಾಂಚಿಗಳು ಕಾರ್ಯದರ್ಶಿಗಳು ,ಸದಸ್ಯರು ಸೇರಿದಂತೆ ವಿವಿಧ ಜೈನ ಸಂಘಟನೆಗಳು ಶ್ರಾವಕ -ಶ್ರಾವಕಿಯರು ಭಾಗವಹಿಸಿದ್ದರು. ಕೃತಿಕಾ ರಾಣಿ ಪ್ರಾರ್ಥಿಸಿದರು. ರೂಪಶ್ರೀ ಪೂರ್ಣಚಂದ್ರ ಸ್ವಾಗತಿಸಿದರು.ಇದೇ ಸಂದರ್ಭದಲ್ಲಿ ದಾವಣಗೆರೆ ಜೈನ ಮಿಲನ್ ನಿಂದ ಉಚಿತ ವೈದ್ಯಕೀಯ ಸೇವೆ ಏರ್ಪಡಿಸಲಾಗಿತ್ತು.
ಜಿನ ಭಜನಾ ಸ್ಪರ್ಧೆಗಳ ಫಲಿತಾಂಶ:
ತೀರ್ಪುಗಾರರು: ಡಾ.ನೀರಜಾ ನಾಗೇಂದ್ರ ಕುಮಾರ್.
ಕಿರಿಯರ ವಿಭಾಗ .ಕ್ರಮವಾಗಿ
ರತ್ಮಾತ್ರಯ ಚಿಣ್ಣರ ಬಳಗ.
ಜಿನ ವಾಣಿ ತಂಡ ಆಟ ಬೈಲು.
ಜೈನ ಸಾಂಸ್ಕೃತಿಕ ಕಲಾತಂಡ ವೀರಪುರ.
ಮಹಾವೀರ ಬಾಲ ಮಂಡಲ ಹ.ಮಾ .ಕೊಪ್ಪ.
ಜಿನ ಭಜನ ಸ್ಪರ್ಧೆಗಳ ಹಿರಿಯರ ವಿಭಾಗ ತೀರ್ಪುಗಾರರು:
ಜಿತೇಂದ್ರ ಜೈನ್ ಹಾಗೂ ವಸಂತ್ ಕುಮಾರ್ ಭಂಗ.
ಕ್ರಮವಾಗಿ
ರತ್ನತ್ರೆಯ ದಿಗಂಬರ ಬಳಗ ಹೊಸದುರ್ಗ.
ಇಷ್ಟೋಪದೇಶ ಜಿನಭಜನ ತಂಡ ತಡಸ
ಭಗವಾನ್ ಪಾರ್ಶ್ವನಾಥ ತಂಡ ಹ.ಮ.ಕೊಪ್ಪ ರತ್ನತ್ರೆಯ ತಂಡ ಮಂಟಗಣಿ.
ಹಿರಿಯರ ವಿಭಾಗದಲ್ಲಿ 32 ತಂಡಗಳು ಹಾಗೂ ಕಿರಿಯರ ವಿಭಾಗದಲ್ಲಿ 52 ತಂಡಗಳು ಭಾಗವಹಿಸಿದ್ದವು.
ವರದಿ: ಜೆ. ರಂಗನಾಥ, ತುಮಕೂರು.