ಕ್ರೀಡಾ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಹೆಚ್ಚಾಗಿ ಭಾಗವಹಿಸುವಂತಾಗಬೇಕು ಎಂದು ಬಿಇಓ ನಟರಾಜು ಹೇಳಿದರು. ಪಟ್ಟಣದ ರವೀಂದ್ರ ಭಾರತಿ ಪ್ರೌಢಶಾಲೆಯಲ್ಲಿ ಶಾಲಾ ನಾಯಕರುಗಳ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ಮತ್ತು ಹೋಬಳಿ ಮಟ್ಟದ ಕ್ರೀಡೆಗಳ ಪ್ರತಿಭಾ ಕಾರಂಜಿಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತುಮಕೂರು ವಿಶ್ವವಿದ್ಯಾಲಯಲದಲ್ಲಿ ಬಿಎಸ್ಸಿ ವಿಭಾಗದ ಗಣಿತಶಾಸ್ತ್ರದಲ್ಲಿ ಹೆಚ್ಚಿನ ಅಂಕಗಳಿಸಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ವೈಷ್ಣವಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದ ವೇಳೆ ಶಾಲಾ ನಾಯಕರುಗಳಿಗೆ ವಿದ್ಯಾಸಂಸ್ಥೆಗಳು ಪ್ರತಿಜ್ಞಾವಿಧಿ ಭೋಧಿಸಿದರು, ಈ ವೇಳೆ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಈ ವೇಳೆ ಹೊಳವನಹಳ್ಳಿ ಪಿಯು ಕಾಲೇಜಿನ ಪ್ರಾಶುಂಪಾಲರಾದ ವೀರಣ್ಣ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಹನುಮಂತರಾಯಪ್ಪ, ರವೀಂದ್ರ ವಿದ್ಯಾಸಂಸ್ಥೆಯ ಉಪಾಧ್ಯಕ್ಷರು ಶ್ರೀಮತಿ ಉಮಾಜಗಧೀಶ್ವರ್, ಕಾರ್ಯದರ್ಶಿ ಶೋಭಾ ಕೃಷ್ಣಮೂರ್ತಿ, ನವೀನ್ ಕುಮಾರ್, ಖಚಾಂಚಿ ಆದಿ ರಮೇಶ್, ಸಲಹಾಗಾರರಾದ ಶ್ರೀ ಲಕ್ಷ್ಮೀನರಸಿಂಹಮೂರ್ತಿ, ಪಿಯು ಕಾಲೇಜಿನ ಪ್ರಾಶುಂಪಾಲರಾದ ಶ್ರೀಮತಿ ಚೈತ್ರಾ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರು ಶಿವಗಂಗಾ, ದೈಹಿಕ ಶಿಕ್ಷಕರಾದ ವೀರೇಶ್, ಸಂಸ್ಥೆಯ ಸಿಬ್ಬಂದಿ ವರ್ಗ ಹಾಜರಿದ್ದರು.
ವರದಿ : ಮಂಜುಸ್ವಾಮಿ, ಎಂ.ಎನ್.ಕೊರಟಗೆರೆ


