ಸರಗೂರು: ಮಕ್ಕಳು ಮದ್ಯಪಾನ ಮತ್ತು ಧೂಮಪಾನ ಇನ್ನಿತರ ಚಟುವಟಿಕೆಗಳಿಂದ ದೂರವಿರಬೇಕು ಎಂದು ಸಂಪನ್ಮೂಲ ವ್ಯಕ್ತಿ ಹಾಗೂ ಶಿಕ್ಷಕ ಮದನ್ ಹೇಳಿದರು.
ತಾಲೂಕಿನ ಎಂ.ಸಿ.ತಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಳ್ಳೂರು ವಲಯದ ಎಂ.ಸಿ.ತಳಲು ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರದಂದು 8, 9, 10ನೇ ತರಗತಿ ವಿದ್ಯಾರ್ಥಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಕ್ಕಳು ದುಶ್ಚಟ ದುರಭ್ಯಾಸಗಳಿಂದ ದೂರವಿರಲು ಸ್ವಾಸ್ಥ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಿಮ್ಮ ಮನೆಯಲ್ಲಿ ಯಾರಾದರೂ ಕುಡಿತದ ಚಟಕ್ಕೆ ಬಲಿಯಾಗಿದ್ದರೆ, ಅಂತವರನ್ನು ಶಿಬಿರಕ್ಕೆ ಸೇರಿಸಿ ಕುಡಿತವನ್ನು ಬಿಡಿಸಬೇಕು ಸಮಾಜಕ್ಕೆ ಹಾನಿ ಉಂಟು ಮಾಡುವಂತಹ ಯಾವುದೇ ಕಾರ್ಯಗಳನ್ನು ಮಾಡಬಾರದು, ನಮ್ಮ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಬೇಕು ಎಂಬ ಸಲಹೆ ನೀಡಿದರು.
ಮುಳ್ಳೂರು ವಲಯದ ಮೇಲ್ವಿಚಾರಕ ನರಸಿಂಹಮೂರ್ತಿ ಮಾತನಾಡಿ, ನಮ್ಮ ಸ್ವಾಸ್ಥ್ಯವನ್ನು ಬರೀ ಧೂಮಪಾನ ಮತ್ತು ಮದ್ಯಪಾನವೇ ಹಾನಿ ಉಂಟು ಮಾಡುತ್ತಿಲ್ಲ. ಹಲವಾರು ಮೊಬೈಲ್ ನಲ್ಲಿ ಬರುವಂತಹ ಹಲವಾರು ಸುಳ್ಳು ಸುದ್ದಿಗಳಿಂದಲೂ ಕೂಡ ಮನುಷ್ಯನ ನೆಮ್ಮದಿ ಹಾಳಾಗುತ್ತದೆ, ಇತ್ತೀಚೆಗೆ ನಮ್ಮ ಭಾಗದಲ್ಲಿ ಹುಲಿ ಹಲವಾರು ರೈತರ ಪ್ರಾಣ ಹಾನಿ ಮಾಡಿರುವ ವಿಷಯ ತಮಗೆಲ್ಲರಿಗೂ ತಿಳಿದಿದೆ. ಇದೇ ವಿಷಯವನ್ನು ಕೆಲವೊಂದು ಸಮಾಜಘಾತಕರು ಹುಲಿ ಇಲ್ಲದ ಜಾಗದಲ್ಲಿ ಇದೆ ಎಂದು ಮೊಬೈಲ್ ನಲ್ಲಿ ಮೆಸೇಜ್ ಗಳನ್ನು ಹರಿಬಿಟ್ಟು, ಜನರ ನೆಮ್ಮದಿಯನ್ನು ಕೂಡ ಹಾಳು ಮಾಡಿರುತ್ತಾರೆ. ಇದು ಕೂಡ ಸಮಾಜದ ಸ್ವಾಸ್ಥ ಹಾಳು ಮಾಡಲು ಒಂದು ಉದಾಹರಣೆ ಆಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ರಾಜು ಎ. ಬಂಡಳ್ಳಿ, ಗ್ರಾಮದ ಮುಖಂಡ ಭವನಿಶ್, ಶಾಲೆಯ ಸಹ ಶಿಕ್ಷಕರು ಸೇವಾ ಪ್ರತಿನಿಧಿ ಸರ್ವಮಂಗಳ, ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


