nammatumakuru

    Subscribe to Updates

    Get the latest creative news from FooBar about art, design and business.

    What's Hot

    ವಾಟರ್ ಹೀಟರ್ ಬಳಸುವಾಗ ಜೀವಕ್ಕೆ ಕುತ್ತು ಬರಬಹುದು! ಪಾಲಿಸಲೇಬೇಕಾದ ಮುನ್ನೆಚ್ಚರಿಕೆಗಳಿವು…!

    January 9, 2026

    ದಾಖಲೆ ಬರೆದ ಯಶ್ ‘ಟಾಕ್ಸಿಕ್’ ಟೀಸರ್; ಹಸಿಬಿಸಿ ದೃಶ್ಯ ಕಂಡು ಪ್ರೇಕ್ಷಕ ಶಾಕ್!

    January 9, 2026

    ಚಳಿಗಾಲದ ಸಿಹಿ ತಿನಿಸು ‘ಬೀಟ್‌ರೂಟ್ ಹಲ್ವಾ’: ರುಚಿಯ ಜೊತೆಗೆ ಆರೋಗ್ಯಕ್ಕೂ ಇದು ವರ!

    January 9, 2026
    Facebook Twitter Instagram
    ಟ್ರೆಂಡಿಂಗ್
    • ವಾಟರ್ ಹೀಟರ್ ಬಳಸುವಾಗ ಜೀವಕ್ಕೆ ಕುತ್ತು ಬರಬಹುದು! ಪಾಲಿಸಲೇಬೇಕಾದ ಮುನ್ನೆಚ್ಚರಿಕೆಗಳಿವು…!
    • ದಾಖಲೆ ಬರೆದ ಯಶ್ ‘ಟಾಕ್ಸಿಕ್’ ಟೀಸರ್; ಹಸಿಬಿಸಿ ದೃಶ್ಯ ಕಂಡು ಪ್ರೇಕ್ಷಕ ಶಾಕ್!
    • ಚಳಿಗಾಲದ ಸಿಹಿ ತಿನಿಸು ‘ಬೀಟ್‌ರೂಟ್ ಹಲ್ವಾ’: ರುಚಿಯ ಜೊತೆಗೆ ಆರೋಗ್ಯಕ್ಕೂ ಇದು ವರ!
    • ವಿಬಿ–ಜಿ ರಾಮ್ ಜಿ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ: ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಆಕ್ರೋಶ
    • ತಿಪಟೂರು: ಬೀದಿ ನಾಯಿಗಳ ಹಾವಳಿ ತಡೆಗೆ ಅಧಿಕಾರಿಗಳಿಗೆ ಉಪವಿಭಾಗಾಧಿಕಾರಿ ಸೂಚನೆ
    • ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ಕೆ.ಎನ್. ರಾಜಣ್ಣ
    • ಕೊರಟಗೆರೆ | ಶಾಲಾ ಮಕ್ಕಳಿಗೆ ಟ್ರ್ಯಾಕ್ಸ್ ಶೂಟ್ ವಿತರಣೆ
    • ಶಬರಿಮಲೆ ದರ್ಶನ ಮುಗಿಸಿ ಮರಳುವಾಗ ಭೀಕರ ಅಪಘಾತ: 7 ವರ್ಷದ ಮಗು ಸೇರಿ ನಾಲ್ವರು ದುರ್ಮರಣ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಗಮನ ಸೆಳೆದ ಮಕ್ಕಳ ಚಿತ್ರಕಲೆಯ ಕಾರ್ಯಾಗಾರ
    ಲೇಖನ November 17, 2024

    ಗಮನ ಸೆಳೆದ ಮಕ್ಕಳ ಚಿತ್ರಕಲೆಯ ಕಾರ್ಯಾಗಾರ

    By adminNovember 17, 2024No Comments2 Mins Read

    ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಚೇಳೂರು , ಗುಬ್ಬಿ ತಾಲೂಕು , ತುಮಕೂರಿನಲ್ಲಿ ಚಿತ್ರಕಲಾ ಶಿಕ್ಷಕರರಾದ ಆನಂದ್ ಎಸ್.ವಿ.ರವರು ಮುಖ್ಯ ಶಿಕ್ಷಕರಾದ ಗಿರೀಶ್ ಜಿ.ಎಚ್. ರವರ ಸಹಕಾರದಿಂದ ತಮ್ಮ ಶಾಲೆಯಲ್ಲಿ ಗ್ರಾಮೀಣ ಭಾಗದಿಂದ ಬರುವ ಮಕ್ಕಳಿಗಾಗಿ ಚಿತ್ರಕಲೆಯ ವಿಷಯಗಳ ಬಗ್ಗೆ ಮತ್ತು ಅದರ ಪ್ರಕಾರಗಳ ಬಗ್ಗೆ ಪರಿಚಯಿಸುವ ಉದ್ದೇಶದಿಂದ ಚಿತ್ರಕಲಾ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದರು.


    Provided by
    Provided by

    ಇಲ್ಲಿ ಚಿತ್ರಕಲೆಯ ವಿಷಯಗಳು ಅವುಗಳ ಅವಶ್ಯಕತೆ ಮತ್ತು ಮಹತ್ವದ ಬಗ್ಗೆ ತಿಳಿಸಲಾಯಿತು. ಅಂಕ ಗಳಿಕೆಯ ಹುಚ್ಚು ಪೈಪೋಟಿಯ ನಡುವೆ ಮಕ್ಕಳ ಮನಸ್ಸನ್ನು ಮುದಗೊಳಿಸಿ, ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಹದಗೊಳಿಸುವ ಈ ಕಾರ್ಯಾಗಾರವು ಕ್ರಿಯಾಶೀಲವಾಗಿ ನಡೆದಿರುವುದು ಶಾಲೆಯ ಮಕ್ಕಳು , ಶಿಕ್ಷಕರು ಮತ್ತು ಪೋಷಕರಿಗೆ ಅರ್ಥಪೂರ್ಣವೆನಿಸಿದೆ.

    ಇಂದು ರಂಗೋಲಿ ಕಲೆಯು ಭಾರತೀಯ ಚಿತ್ರಕಲೆಯ ಒಂದು ಪ್ರಕಾರವಾಗಿ ಗುರುತಿಸಲ್ಪಟ್ಟಿದೆ. ರಂಗೋಲಿಗೆ ಭಾರತೀಯ ಜನಪದದ ಪುರಾತನ  ಮಹತ್ವವಿದೆ. ಶುಭದ ಸಂಕೇತವಾಗಿ ನೆಲದ ಮೇಲೆ   ಬಿಡಿಸಲಾಗುವ ಈ ರಂಗೋಲಿಯನ್ನು ಬಾಗಿಲ ಅಂಚು ಮತ್ತು ಗೋಡೆಗಳ ಅಂಚುಗಳನ್ನು ಅಲಂಕರಿಸಲು ಬಳಸಲಾಗುತ್ತದೆ. ಬದಲಾದ ಸನ್ನಿವೇಶದಲ್ಲಿ ಅಳಿವಿನಂಚಿನಲ್ಲಿ ಇರುವ ಈ ರಂಗೋಲಿ ( ಕೋಲಂ ) ಕಲೆಯ ಬಗ್ಗೆ ಪೂರ್ಣ ಮಾಹಿತಿ ನೀಡುವುದರ ಜೊತೆಗೆ ಮಕ್ಕಳಿಗೆ ಮರದ ಹಲಗೆಯ ಬ್ಲಾಕ್ ಗಳ ಮೇಲೆ, ವಿವಿಧ ರೀತಿಯ ವಿನ್ಯಾಸಗಳ ಮೂಲಕ ಕ್ರಿಯಾಶೀಲವಾಗಿ ಚಿತ್ರರಚನೆ ಮಾಡಿಸಿದರು.

    ಕೋಲಮ್ ಆರ್ಟ್ ಕಾರ್ಯಾಗಾರವು ಎರಡು ದಿನಗಳು ನಡೆದಿದ್ದು, ಸುಮಾರು 150 ಕ್ಕೂ ಹೆಚ್ಚು ಕಲಾ ಕೃತಿಗಳು ರಚನೆಯಾದವು. ನಂತರದ ಮೂರು ದಿನಗಳ ಕಾಲ ಗ್ಲಾಸ್ ಪೇಂಟಿಂಗ್ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿ, ಅದರ ಮಾಧ್ಯಮ,  ಶೈಲಿಯ ಬಗ್ಗೆ ತಿಳಿಸಿ ವರ್ಣಗಳ ಮೂಲಕ ಗ್ಲಾಸ್ ಗಳ ಮೇಲೆ ಚಿತ್ರ ರಚನೆ ಅಭ್ಯಾಸವನ್ನು ಮಕ್ಕಳಿಗೆ ಹೇಳಿಕೊಡಲಾಯಿತು .  ಗ್ಲಾಸ್ ಗಳ ಮೇಲೆ ಮಕ್ಕಳು ವಿವಿಧ ರೀತಿಯ ನಿಸರ್ಗ ಚಿತ್ರ, ಪ್ರಾಣಿ– ಪಕ್ಷಿಗಳ ಚಿತ್ರ , ಅಲಂಕಾರಿಕ ಚಿತ್ರಗಳನ್ನು ಮತ್ತು ಇನ್ನು ಮುಂತಾದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ವಿಭಿನ್ನವಾಗಿ ವರ್ಣಗಳ ಮೂಲಕ ಚಿತ್ರರಚನೆಯನ್ನು ಮಕ್ಕಳು ತುಂಬಾ ಪರಿಣಾಮಕಾರಿಯಾಗಿ ಮಾಡಿದರು. ಈ ಶಿಬಿರದಲ್ಲಿ ಆರು ಶಾಲೆಗಳ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯದಲ್ಲಿ 60ಕ್ಕು ಹೆಚ್ಚು ಕಲಾಕೃತಿಗಳು ರಚನೆಗೊಂಡು ಎಲ್ಲರ ಗಮನ ಸೆಳೆದವು. ಈ ಕಾರ್ಯಾಗಾರದಲ್ಲಿ  ಸಂಪನ್ಮೂಲ ವ್ಯಕ್ತಿಗಳಾಗಿ ಕೋಲಂ ಆರ್ಟ್-  ಹೇಮಾ ಪಿ. ಚಿತ್ರಕಲಾ ಶಿಕ್ಷಕರು, ಜಿ.ಹೆಚ್.ಎಸ್. , ಗೋಡೆಕೆರೆ, ಚೀನಾಹಳ್ಳಿ, ಗ್ಲಾಸ್ ಪೇಂಟಿಂಗ್–ರೇಖಾ, ಚಿತ್ರಕಲಾ ಶಿಕ್ಷಕರು,  ಜಿ.ಹೆಚ್.ಎಸ್ ಸಾಕ್ಷಿಹಳ್ಳಿ, ಶಿರಾ ತಾಲೂಕು, ಈ ಕಾರ್ಯಾಗಾರವನ್ನ ಉತ್ತಮವಾಗಿ ನಿರ್ವಹಿಸಿದರು.

    ಶಿಬಿರದಲ್ಲಿ  ಜಗದೀಶ ಡಿ, ಕಲಾವಿದರು ಹಾಗೂ ಚಿತ್ರಕಲಾ ಶಿಕ್ಷಕರು, ಕಮಲ ಬಿ., ಜಿಜಿಜೆಸಿ ಗುಬ್ಬಿ, ಉಷಾರಾಣಿ, ಕೆಪಿಎಸ್ ಕಡಬ,  ಚಂದ್ರಮೌಳೇಶ್ವರ ಜೆಜೆಸಿ ಗುಬ್ಬಿ,  ಸವಿತಾ ಎಸ್. ಖಾಂದರೆ, ಜಿ ಬಿ ಹೆಚ್ ಎಸ್ ಚೇಳೂರು. ಈ ಎಲ್ಲಾ ಕಲಾವಿದರು ಮಕ್ಕಳಿಗೆ ಐದು ದಿನಗಳ ಕಾಲ ಕಲಾಕೃತಿ ರಚನೆಯಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಮಕ್ಕಳಿಂದ ಉತ್ತಮ ಕಲಾಕೃತಿಗಳನ್ನು ರಚನೆ ಮಾಡಿಸಿದರು. ಕೊನೆಯ ದಿನ ಚಿತ್ರಕಲಾ ಪ್ರದರ್ಶನವನ್ನು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಾಗಾರವು  ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ, ಕಲಾಕೃತಿಗಳನ್ನು ರಚಿಸಿದ  ಮಕ್ಕಳಿಗೆ ಶಾಲೆಯ ಮುಖ್ಯ ಶಿಕ್ಷಕರಾದ ಗಿರೀಶ್ ಜಿ.ಎಚ್.ರವರು  ಅಭಿನಂದಿದರು. ಜೊತೆಗೆ ಮಕ್ಕಳ ಪ್ರತಿಭೆಯ ಬಗ್ಗೆ ವರ್ಣನೆ ಮಾಡಿದರು.

    ಪ್ರದರ್ಶನವನ್ನು ವೀಕ್ಷಿಸಲು ತುಮಕೂರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಚಿತ್ರಕಲಾ ಉಪನ್ಯಾಸಕರಾದ ಶ್ರೀನಿವಾಸಮೂರ್ತಿ ಆಗಮಿಸಿ ಪ್ರದರ್ಶನ ವೀಕ್ಷಿಸಿ ಇಂತಹ ಶಿಬಿರಗಳು ಎಲ್ಲ ಶಾಲೆಗಳಲ್ಲಿಯೂ ನಡೆಯಬೇಕು. ಇವು ಶಾಲಾ ವಾತಾವರಣವನ್ನು ಜೀವಂತಿಕೆಯಲ್ಲಿಡುತ್ತವೆ. ಮಕ್ಕಳಿಂದ ಉತ್ತಮ ಕಲಾಕೃತಿಗಳನ್ನು ಹೊರತಂದಿರುವುದು ಖುಷಿ ತಂದಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇಂತಹ ಉತ್ತಮವಾದಂತಹ ಕಾರ್ಯ ಮಾಡಿದ ಚಿತ್ರಕಲಾ ಶಿಕ್ಷಕರಗಳಿಗೆ ಅಭಿನಂದನೆ ತಿಳಿಸಿದರು.

     ಲೇಖನ:  ರಾಘವೇಂದ್ರ ನಾಯಕ ಎನ್.ಟಿ., ಚಿತ್ರಕಲಾ ಕಲಾವಿದರು


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ದಾಖಲೆ ಬರೆದ ಯಶ್ ‘ಟಾಕ್ಸಿಕ್’ ಟೀಸರ್; ಹಸಿಬಿಸಿ ದೃಶ್ಯ ಕಂಡು ಪ್ರೇಕ್ಷಕ ಶಾಕ್!

    January 9, 2026

    ಉದ್ಧಟತನ ಕಲಿಸಿದ ಪಾಠ

    January 7, 2026

    ವಾಸ್ತವ ಒಡೆದು ನೋಡಿದಾಗ?

    January 2, 2026

    Comments are closed.

    Our Picks

    ಆರ್‌ ಸಿಬಿ ತಂಡದ ಆಟಗಾರನಿಗೆ ಪೋಕ್ಸೋ ಸಂಕಷ್ಟ: ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ

    December 25, 2025

    ಇಸ್ರೊ ಮೈಲಿಗಲ್ಲು: ಅತ್ಯಂತ ಭಾರವಾದ ಎಲ್‌ ವಿಎಂ3 ರಾಕೆಟ್ ಮೂಲಕ ‘ಬ್ಲೂಬರ್ಡ್’ ಉಪಗ್ರಹ ಉಡಾವಣೆ

    December 24, 2025

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ವಾಟರ್ ಹೀಟರ್ ಬಳಸುವಾಗ ಜೀವಕ್ಕೆ ಕುತ್ತು ಬರಬಹುದು! ಪಾಲಿಸಲೇಬೇಕಾದ ಮುನ್ನೆಚ್ಚರಿಕೆಗಳಿವು…!

    January 9, 2026

    ಬೆಂಗಳೂರು: ಚಳಿಗಾಲ ಆರಂಭವಾಗುತ್ತಿದ್ದಂತೆ ಮನೆಮನೆಗಳಲ್ಲಿ ಬಿಸಿನೀರಿಗಾಗಿ ವಾಟರ್ ಹೀಟರ್ ಅಥವಾ ಇಮ್ಮರ್ಶನ್ ರಾಡ್‌ಗಳ ಬಳಕೆ ಸಾಮಾನ್ಯ. ಆದರೆ, ಸಣ್ಣ ನಿರ್ಲಕ್ಷ್ಯವೂ…

    ದಾಖಲೆ ಬರೆದ ಯಶ್ ‘ಟಾಕ್ಸಿಕ್’ ಟೀಸರ್; ಹಸಿಬಿಸಿ ದೃಶ್ಯ ಕಂಡು ಪ್ರೇಕ್ಷಕ ಶಾಕ್!

    January 9, 2026

    ಚಳಿಗಾಲದ ಸಿಹಿ ತಿನಿಸು ‘ಬೀಟ್‌ರೂಟ್ ಹಲ್ವಾ’: ರುಚಿಯ ಜೊತೆಗೆ ಆರೋಗ್ಯಕ್ಕೂ ಇದು ವರ!

    January 9, 2026

    ವಿಬಿ–ಜಿ ರಾಮ್ ಜಿ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ: ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಆಕ್ರೋಶ

    January 9, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.