ಪಾವಗಡ: ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಬೆಂಗಳೂರು (DSERT)ರವರು ಹಮ್ಮಿಕೊಂಡಿದ್ದ ಬಾಲ ವೈಜ್ಞಾನಿಕ್ ಪ್ರದರ್ಶಿನಿ ಸ್ಪರ್ಧೆಯಲ್ಲಿ ಇಲ್ಲಿನ ಅರಸೀಕೆರೆ ಸರ್ಕಾರಿ ಪ್ರೌಢಶಾಲೆಯ 10 ನೇ ತರಗತಿಯ ವಿದ್ಯಾರ್ಥಿ ಹೃತಿಕ್ ಹೆಚ್. ಭಾಗವಹಿಸಿ ತೃತೀಯ ಸ್ಥಾನಿಯಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
‘ಸದೃಢ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ’ ಎಂಬ ಘೋಷವಾಕ್ಯದಡಿ ತ್ಯಾಜ್ಯ ನಿರ್ವಹಣೆ ವಿಷಯಕ್ಕೆ ಸಂಬಂಧಿಸಿದಂತೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಎಂಬ ವಿಷಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಪರಿಸರಕ್ಕೆ ಮಾಲಿನ್ಯಕಾರಕವಾಗದಂತೆ ಅದನ್ನು ಮರುಬಳಕೆ ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ಸಾಬೀತು ಮಾಡಿ ತೋರಿಸಿದ ಮಾದರಿ ಇದಾಗಿದೆ. ರಾಜ್ಯಮಟ್ಟದ ಸ್ಪರ್ಧೆಯು ಬೆಂಗಳೂರಿನಲ್ಲಿ ದಿನಾಂಕ 04—10–2025 ರಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಭೇತಿ ಸಂಸ್ಥೆ (DSERT) ಹೊಸಕೆರೆಹಳ್ಳಿ ಬನಶಂಕರಿ 3ನೇ ಹಂತದಲ್ಲಿ ನಡೆಯುತ್ತದೆ.
ವಿಜ್ಞಾನ ಶಿಕ್ಷಕರಾದ ರೇಣುಕರಾಜ್. ಜಿ.ಹೆಚ್.ಮಾರ್ಗದರ್ಶನ ಮಾಡಿದ್ದಾರೆ. ವಿದ್ಯಾರ್ಥಿಯ ಈ ಸಾಧನೆಗೆ ಜಿಲ್ಲೆಯ ಉಪನಿರ್ದೇಶಕರಾದ, ಮಾಧವರೆಡ್ಡಿ ಸರ್ , ಡಯಟ್ ಪ್ರಾಂಶುಪಾಲರಾದ ಗಂಗಾಧರ್ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರೇಣುಕಮ್ಮ, ಶಾಲೆಯ ಎಸ್.ಡಿ. ಎಂ.ಸಿ. ಅಧ್ಯಕರಾದ ಪ್ರೇಮ್ ಕುಮಾರ್, ಶಾಲಾ ಸಿಬ್ಬಂದಿ ಹಾಗೂ ಊರಿನ ಗ್ರಾಮಸ್ಥರು, ಅಭಿನಂದಿಸಿದ್ದಾರೆ.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC