ನವದೆಹಲಿ : ಉದ್ಧವ್ ಠಾಕ್ರೆ ಹಾಗೂ ಏಕನಾಥ್ ಶಿಂಧೆ ಬಣಗಳಿಗೆ ಶಿವಸೇನೆ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಬಳಸಬಾರದೆಂದು ಕೇಂದ್ರ ಚುನಾವಣಾ ಆಯೋಗವು ತಾತ್ಕಾಲಿಕ ಆದೇಶ ನೀಡಿದೆ.
ಈ ನಿರ್ಣಯ ಮಹಾರಾಷ್ಟ್ರದ ರಾಜ್ಯ ರಾಜಕಾರಣದಲ್ಲಿ ಇದು ಒಂದು ಮಹತ್ವದ ಎಂದೇ ಭಾವಿಸಲಾಗುತ್ತಿದೆ. 25 ವರ್ಷಗಳ ಹಳೆಯ ಮೈತ್ರಿ ಬಿಜೆಪಿ ಪಕ್ಷ ಮತ್ತು ಶಿವಸೇನೆ ಮೈತ್ರಿಯನ್ನು ಮುರಿದು ರಾಷ್ಟ್ರವಾದಿ ಕಾಂಗ್ರೆಸ್, ಕಾಂಗ್ರೆಸ್ ಪಕ್ಷ, ಮತ್ತು ಶಿವಸೇನೆ ಮಹಾ ಘಟಬಂಧನ್ ರಚಿಸಿ ಮಹಾರಾಷ್ಟ್ರದಲ್ಲಿ ಸರ್ಕಾರ ಅಸ್ತಿತ್ವದಲ್ಲಿತ್ತು. ಆದರೆ ಶಿವಸೇನೆಯ ತನ್ನ ಆಂತರಿಕ ಭಿನ್ನಮತದಿಂದಾಗಿ ಪಕ್ಷ ವಿಭಾಗವಾಯಿತು. 52 ಶಾಸಕರ ಹೊಂದಿದ್ದ ಶಿವಸೇನೆ 40 ಶಾಸಕರು ಜೊತೆ ಸೇರಿ ಏಕನಾಥ್ ಶಿಂಧೆ ಪಕ್ಷದಲ್ಲಿ ಬಂಡಾಯವೆದ್ದು ಬಿಜೆಪಿ ಪಕ್ಷದ ಬೆಂಬಲ ಪಡೆದು ಸರ್ಕಾರ ರಚನೆ ಮಾಡಿದರು.
ಮುಖ್ಯಮಂತ್ರಿ ಆಗಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಆ ಬಳಿಕ ರಾಜಕೀಯ ಬೆಳವಣಿಗಳಲ್ಲಿ ಶಿಂಧೆ ಬಣ ಹಾಗೂ ಠಾಕ್ರೆ ಬಣ ಶಿವಸೇನೆ ಪಕ್ಷದ ಮಾಲೀಕತ್ವದ ಮೇಲೆ ದಾವೆ ಹೂಡಿದರು.
ನಿಜವಾದ ಶಿವಸೇನೆ ಪಕ್ಷ ಯಾರದ್ದು, 40 ಶಾಸಕರು ಜೊತೆಗೆ ಇರುವ ಶಿಂಧೆ ಬಣದೋ ಅಥವಾ ಠಾಕ್ರೆ ಬಣದೋ ಅಂತ ಸರ್ವೋಚ್ಚ ನ್ಯಾಯಾಲಯಕ್ಕೆ ಎರಡು ಬಣಗಳು ಅರ್ಜಿ ಸಲ್ಲಿಸಿದ್ದರು. ಈ ಕುರಿತು ಸರ್ವೋಚ್ಚ ನ್ಯಾಯಾಲಯ ಕೇಂದ್ರದ ಚುನಾವಣೆ ಆಯೋಗಕ್ಕೆ ಪಕ್ಷದ ಚಿಹ್ನೆ ಕುರಿತು ನಿರ್ಣಯ ಕೈಗೊಳ್ಳಲು ಆದೇಶಿಸಿತ್ತು.
ಈ ಕುರಿತು ಅಕ್ಟೋಬರ್ 8ರಂದು ಕೇಂದ್ರ ಚುನಾವಣಾ ಆಯೋಗ ಮಹತ್ವದ ನಿರ್ಧಾರವನ್ನೇ ನೀಡಿದೆ. ಇದು ತಾತ್ಕಾಲಿಕ ತೀರ್ಪು ಆದರೂ ಕೂಡ ಆದರೆ ಎರಡು ಬಣಗಳಲ್ಲಿ ಅಸಮಾಧಾನ ಹೊಗೆ ಆಡುತ್ತಿದೆ.
ಇನ್ನೆರಡು ತಿಂಗಳಲ್ಲಿ ಮುಂಬೈ ಮಹಾನಗರ ಪಾಲಿಕೆಯ ಚುನಾವಣೆ ನಡೆಯಲಿದ್ದು, ಇದು ಎರಡು ಬಣಗಳಿಗೆ ಆಘಾತ ನೀಡುವ ತೀರ್ಪು ಆಗಿದೆ. ಎರಡು ಬಣಗಳು ತನ್ನ ಹೊಸ ರಾಜಕೀಯ ಕಾರ್ಯತಂತ್ರಕ್ಕೆ ಅನುವಾಗಿ ನಿಂತಿವೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy