ತುರುವೇಕೆರೆ: ತಾಲ್ಲೂಕಿನ ಇತಿಹಾಸದಲ್ಲಿಯೇ ಚೊಚ್ಚಲ ಬಾರಿಗೆ ತಿಪ್ಪೇಸ್ವಾಮಿ’ಯವರ ಮಾಲೀಕತ್ವದ ಕೇಕ್ ಪಾಯಿಂಟ್ ವತಿಯಿಂದ ಹೊಸವರ್ಷದ ಪ್ರಯುಕ್ತ ” ಕೇಕ್ ಷೋ ” ಅನ್ನು ಏರ್ಪಡಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಆಯೋಜಕರು ಮತ್ತು ಕೇಕ್ ಪಾಯಿಂಟ್ ಮಾಲೀಕರಾದ ತಿಪ್ಪೇಸ್ವಾಮಿ’ಯವರು ” ಇದು ನಮ್ಮ ಕೇಕ್ ಪಾಯಿಂಟ್ ಬಳಗದ ಬಹುದಿನದ ಕನಸು ಮತ್ತು ಪ್ರತಿ ಹೊಸವರ್ಷದ ಸಂಭ್ರಮಾಚರಣೆಯನ್ನು ಯಾವುದೇ ನಗರಗಳಿಗೆ ಕಮ್ಮಿ ಇಲ್ಲದಂತೆ ನಮ್ಮ ತಾಲ್ಲೂಕಿನಲ್ಲೂ ಆಚರಿಸಬೇಕೆಂಬುದೇ ನಮ್ಮ ಬಯಕೆ ” ಎಂದು ತಿಳಿಸಿದರು.
ಇಂದಿನಿಂದ(ಡಿ.30) ಆರಂಭವಾದ ಈ ಪ್ರದರ್ಶನ ಭಾನುವಾರದವರೆಗೂ ಇರಲಿದೆ. ಕೇಕ್ ಪ್ರಿಯರು ಮತ್ತು ಮಕ್ಕಳು ಇಲ್ಲಿಗೆ ಬೇಟಿ ಕೊಟ್ಟು ಉಚಿತವಾಗಿಯೇ ವೀಕ್ಷಿಸಬಹುದಾಗಿದೆ.
ಇಲ್ಲಿ ಬಗೆ ಬಗೆಯ ಕೇಕ್’ಗಳಿವೆ. ಅದರಲ್ಲಿ ಬಹು ಆಕರ್ಷಕವಾಗಿ ಕಾಣಿಸುತ್ತಿರುವ ಐಫಿಲ್ ಟವರ್ ಕೇಕ್ ಈ ಪ್ರದರ್ಶನದ ಕೇಂದ್ರ ಬಿಂದುವಾಗಿದೆ. ಇದಲ್ಲದೇ ಬಾರ್ಬಿ ಗರ್ಲ್ , ಮಿಕ್ಕಿ ಮೌಸ್ , ಗೀಟರ್ , ಕಲ್ಲಂಗಡಿ ಮತ್ತು ಇನ್ನಿತರ ವೈವಿಧ್ಯಮಯ ಕೇಕ್’ಗಳು ಜನರ ಗಮನ ಸೆಳೆಯುತ್ತಿದೆ.
ಇಲ್ಲಿ ಕೇವಲ ಕೇವಲ ಕೇಕ್’ಗಳ ಪ್ರದರ್ಶನವಲ್ಲದೇ ಮಾರಾಟ ಕೂಡ ಇದೆ. ಆಸಕ್ತರು ಬಾಣಸಂದ್ರ ರಸ್ತೆಯಲ್ಲಿರುವ ಪಾಂಡುರಂಗ ದೇವಸ್ಥಾನನದಲ್ಲಿ ಆಯೋಜನೆಗೊಂಡಿರುವ ಕೇಕ್ ಷೋ’ವನ್ನು ನೋಡಿ ಕಣ್ತುಂಬಿಕೊಳ್ಳಬಹುದು. ಜನವರಿ 2ನೇ ತಾರೀಖಿನವರೆಗೂ ಮಾತ್ರ ಈ ಪ್ರದರ್ಶನವಿರುತ್ತದೆ.
ವರದಿ: ವೆಂಕಟೇಶ ಜೆ.ಎಸ್.( ವಿಕ್ಕಿ )
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy