ಶೆಟ್ಟಿಗೊಂಡನಹಳ್ಳಿ: ಶೆಟ್ಟಿಗೊಂಡನ ಹಳ್ಳಿಯಲ್ಲಿ ಹಲವು ದಶಕಗಳಿಂದ ವಾಸವಿರುವ ಗ್ರಾಮಸ್ಥರ ಹರ್ಷೋದ್ಘಾರ ಮುಗಿಲುಮುಟ್ಟಿದೆ.
ಗ್ರಾಮದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆಶೆಟ್ಟಿಗೊಂಡನಹಳ್ಳಿ ಕೆರೆಗೆ ಹೇಮಾವತಿ ನೀರನ್ನುಹರಿಸಲಾಗಿದ್ದು , ಸ್ವಗ್ರಾಮ ಮತ್ತು ಅಕ್ಕಪಕ್ಕದ ಹಳ್ಳಿಯ ಜನರಿಗೆ ಖುಷಿ ತಂದಿದೆ.
ಕಳೆದ 2-3 ವರ್ಷಗಳ ಹಿಂದೆಯೇ ಗ್ರಾಮದಲ್ಲಿ ಚಾನೆಲ್ ನಿರ್ಮಾಣವಾಗಿದ್ದರೂ ಸಹ ಕೆರೆಗೆ ಹೇಮಾವತಿ ನೀರು ಬಂದಿರಲಿಲ್ಲ. ಆದರೆ ಕಳೆದ ವರ್ಷ ರಾಜ್ಯದಲ್ಲಿ ಸುರಿದ ಬಾರಿ ಮಳೆಯಿಂದಾಗಿ, ತುಮಕೂರಿನ ಬಹುತೇಕ ಎಲ್ಲಾ ಕೆರೆಗಳು ತುಂಬಿದ್ದವು.
ಆದ ಕಾರಣ ಖಾಲಿ ಇದ್ದ ಕೆರೆಗಳಿಗೆ ಹೇಮಾವತಿ ನೀರನ್ನು ಹರಿಬಿಡಲಾಗಿದೆ. ಇಂದು ಈ ಕೆರೆಯೂ ತುಂಬಿ ಹರಿಯುತ್ತಿದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಅಕ್ಕಪಕ್ಕದ ಗ್ರಾಮಸ್ಥರು ಧಾವಿಸುತ್ತಿದ್ದಾರೆ.
ವರದಿ: ವೆಂಕಟೇಶಜೆ.ಎಸ್ ( ವಿಕ್ಕಿ ) ಮಾಯಸಂದ್ರ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy