ಚಾಕೋಲೆಟ್, ಕ್ಯಾಂಡಿ ತಿನ್ನಲು ಅಮ್ಮ ಬಿಡುತಿಲ್ಲ ಎಂದು ಮೂರು ವರ್ಷದ ಕಂದ ಅಮ್ಮನ ವಿರುದ್ಧ ಪೊಲೀಸರಿಗೆ ದೂರು ನೀಡಿದ ಮನಕುಲುಕುವ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಂದೆಯ ಜೊತೆ ಪೊಲೀಸ್ ಠಾಣೆಗೆ ಆಗಮಿಸಿದ 3 ವರ್ಷದ ಮಗು, ಅಮ್ಮ ನನಗೆ ಚಾಕೋಲೆಟ್, ಕ್ಯಾಂಡಿ ತಿನ್ನಲು ಬಿಡುವುದಿಲ್ಲ. ನನ್ನ ಬಳಿ ಇರುವ ಚಾಕೋಲೇಟ್ ಮತ್ತು ಕ್ಯಾಂಡಿ ಕದಿಯುವ ಅಮ್ಮನನ್ನು ಜೈಲಿಗೆ ಹಾಕಿ ಎಂದು ದೂರು ಕೊಟ್ಟಿದ್ದಾನೆ.
ಮಧ್ಯಪ್ರದೇಶದ ಭುರಾನ್ ಪುರ್ ಜಿಲ್ಲೆಯ ಡೆಧಾತಲೈ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಚಾಕೋಲೇಟ್ ಕೇಳಿದರೆ ಅಮ್ಮ ಹೊಡೆಯತ್ತಾರೆ. ಈ ಬಗ್ಗೆಯೂ ಗಮನಹರಿಸಿ ಎಂದು ಮಗು ದೂರು ಕೊಟ್ಟಿದ್ದನ್ನು ಮಹಿಳಾ ಪೊಲೀಸ್ ದೂರು ಸ್ವೀಕರಿಸಿದ್ದಾರೆ. ಮಗು ಸ್ನಾನ ಮಾಡುವಾಗ ಚಾಕೋಲೆಟ್ ನೀಡಲು ನಿರಾಕರಿಸಿದ್ದಾರೆ. ಈ ವೇಳೆ ಸ್ನಾನ ಮುಗಿಸಿ ಬಂದಾಗ ಮಗ ಚಾಕೋಲೇಟ್ ಕೇಳಿದಾಗ ಅಮ್ಮ ಮೆಲ್ಲಗೆ ಹೊಡೆದಿದ್ದಾಳೆ. ಇದರಿಂದ ಅಳಲು ಆರಂಭಿಸಿದ್ದು, ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವಂತೆ ಪಟ್ಟು ಹಿಡಿದಿದ್ದರಿಂದ ಕರೆದುಕೊಂಡು ಬಂದೆ ಎಂದು ತಂದೆ ಹೇಳಿದ್ದಾನೆ.
ಘಟನೆಯಲ್ಲಿ ಆಲಿಸಿದ ನಂತರ ಪೊಲೀಸರು ಅಮ್ಮ ಯಾವ ಕೆಟ್ಟ ಉದ್ದೇಶದಿಂದಲೂ ನಿನಗೆ ಹೊಡೆದಿಲ್ಲ. ಅಲ್ಲದೇ ಚಾಕೋಲೆಟ್ ಕೊಡದೇ ತಾನೇ ತಿನ್ನಲು ಹೀಗೆ ಮಾಡಿಲ್ಲ ಎಂದು ಮನವರಿಕೆ ಮಾಡಿಕೊಟ್ಟು ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಘಟನೆ ವೇಳೆ ಇಡೀ ಪೊಲೀಸ್ ಠಾಣಾ ಸಿಬ್ಬಂದಿ ಬಿದ್ದು ಬಿದ್ದು ನಕ್ಕಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy