ಖಾನಾಪುರ ವಿಧಾನಸಭಾ ಕ್ಷೇತ್ರ ಬಹಳ ವಿಶಿಷ್ಟ ಮತ್ತು ವಿಭಿನ್ನವಾದ ಕ್ಷೇತ್ರ ಇಲ್ಲಿ ರಾಜಕೀಯನೇ ಬೇರೆಇಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳ ಮೇಲೆ ಆಗಲಿ ಮತಗಳನ್ನು ಕೇಳುವುದಿಲ್ಲ, ಇಲ್ಲಿ ಭಾಷೆ ಮತ್ತು ಮರಾಠಿ ಮಾನುಸ ವಿಶೇಷದ ಆದಾರದ ಮೇಲೆ ರಾಜಕಾರಣ, ಮತ ರಾಜಕಾರಣ, ನಡೆಯುತ್ತದೆ.
ಮತದಾರರ ಸಂಖ್ಯೆ ಸಾಮಾನ್ಯ 2,16000 ಅಂದಾಜಿಸಲಾಗಿದೆ ಒಟ್ಟು 255 ಭೂತಗಳನ್ನು ಈ ಕ್ಷೇತ್ರ ಹೊಂದಿದೆ.ಯಾವ ಸಮುದಾಯಗಳ ಮತದಾರರು ಹೆಚ್ಚು ಪ್ರಾಬಲ್ಯಒಂದು ಲಕ್ಷ ,ಆಸ ಪಾಸ ಮತದಾರರ ಸಂಖ್ಯೆಯನ್ನು ಹೊಂದಿದ ಮರಾಠ ಸಮುದಾಯ ಲಿಂಗಾಯತ್ ಸಮುದಾಯ 15000 ರಿಂದ 18000 ವರೆಗೆ, ಜೈನ್ 5000, ಎಸ್ ಸಿ ಎಸ್ ಟಿ 30,000, ಕ್ರಿಶ್ಚಿಯನ್ ಸಮುದಾಯ 4000, ಮುಸ್ಲಿಂ 18 ರಿಂದ 20 ಸಾವಿರ ಇತರರು 30,000 ವರೆಗೆ ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ.
ಇಲ್ಲಿ ಖಾನಾಪುರ್ ಮತಕ್ಷೇತ್ರ ರಾಷ್ಟ್ರೀಯ ಪಕ್ಷಗಳು ಕಾಂಗ್ರೆಸ್ ಮತ್ತು ಬಿಜೆಪಿ ತೆಕ್ಕೆಗೆ ಈ ಕ್ಷೇತ್ರ ಬಂದರೆ ಉಳಿದ ಎಲ್ಲಾ ಸಮಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಜಯ ಸಾಧಿಸಿದೆ ಈ ಕ್ಷೇತ್ರ ಈಗ ಹೊಸ ರಾಜಕೀಯ ಏರಿಳಿತ ನೋಡುತ್ತಿರುವ ಈ ಕ್ಷೇತ್ರದಲ್ಲಿ ನೈಸರ್ಗಿಕ ಸಂಪತ್ತು, ಅರಣ್ಯ ಸಂಪತ್ತು, ನದಿಗಳ ಉಗಮ ಸ್ಥಾನವಾಗಿದೆ. ಪ್ರಮುಖವಾದಂತಹ ಮಲಪ್ರಭಾ, ಮಾರ್ಕಂಡಯ್ಯ, ಪಾಂಡರಿ ನದಿ, ಹಾಗೂ ಮಹದಾಯಿ ,ಮತ್ತು ಕಳಸಾ ಬಂಡೂರು, ನದಿಗಳಾಗಿದ್ದು
ಇಲಿಯ ಬೆಳೆ ಕಬ್ಬು, ಮೆಣಸಿನಕಾಯಿ, ಹಾಗೂ ಗೆಣಸು, ಮತ್ತು ಬಹು ಪ್ರಮುಖವಾದ ಬೆಳೆ ಭತ್ತ
ಈ ಪ್ರದೇಶದಲ್ಲಿ ಬೆಳೆಯಲಾಗುತ್ತದೆ.
ಈ ಕ್ಷೇತ್ರ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯದ ಗಡಿಯನ್ನು ಹಂಚಿಕೊಂಡಿದೆ. ಈ ಕ್ಷೇತ್ರ ಪ್ರವಾಸೋದ್ಯಮಕ್ಕೆ ಹೆಸರುವಾಸಿವಾದ ಕ್ಷೇತ್ರ ಕನ್ನಡಿಗರ ಮೊದಲನೇ ರಾಜಧಾನಿ ಕದಂಬರ ರಾಜಧಾನಿ ಹಲಸಿ ಈ ಕ್ಷೇತ್ರದಲ್ಲಿ ಇದೆ. ಒಟ್ಟಾರೆ ಈ ಕ್ಷೇತ್ರ ನೈಸರ್ಗಿಕವಾದ ಸುಂದರವಾದ ಸ್ಥಾನ ವಾಗಿದೆ. ರಾಜಕೀಯ ವಿಷಯದಲ್ಲಿ ನಾವು ನೋಡುವುದಾದರೆ ಇಲ್ಲಿ ಭಾರತೀಯ ಜನತಾ ಪಕ್ಷ ಮಹಾರಾಷ್ಟ್ರ ಏಕೀಕರಣ ಸಮಿತಿ , ಜಾತ್ಯಾತೀತ ಜನತಾದಳ, ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ,ಇಲ್ಲಿ ಪ್ರಮುಖ ಪಕ್ಷಗಳಾಗಿವೆ.
2023ರ ಚುನಾವಣೆಯಲ್ಲಿ ಸ್ಪರ್ಧಿಸಲಿವೆ ಈ ಚುನಾವಣೆಯ ಸಂದರ್ಭದಲ್ಲಿ ಎಲ್ಲಾ ಪಕ್ಷಗಳಲ್ಲು ಕ್ಷೇತ್ರೀಯ, ರಾಷ್ಟ್ರೀಯ, ಮತ್ತು ಸ್ಥಳೀಯ ರಾಜಕೀಯ ಘಟಕಗಳು ,ತನ್ನದೇ ಆದಂತ ಒಂದು ರಾಜಕೀಯ ಲೆಕ್ಕಾಚಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಕ್ಷೇತ್ರ ಎಂದು ಕಾಣಲಾರದಂತಹ ಸ್ಟಾರ್ ಪ್ರಚಾರಕರನ್ನು ಇಲ್ಲಿ ಮತದಾರರು ಕಾಣ್ತಾ ಇದ್ದಾರೆ. ಕೇಂದ್ರದ ರಕ್ಷಣಾ ಸಚಿವರಿಂದ ಹಿಡಿದು ರಾಜ್ಯದ ಮುಖ್ಯಮಂತ್ರಿಗಳು ಮಾಜಿ ಹಾಲಿ ಮಂತ್ರಿಗಳು ಬೇರೆ ರಾಜ್ಯಗಳ ರಾಜಕಾರಣಿಗಳು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. 2023ರ ಚುನಾವಣೆಯಲ್ಲಿ ಮತದಾರರು ಯಾರು ಕಡೆ ತನ್ನ ಕವಲು ನೀಡಲಿದ್ದಾರೆ ಎಲ್ಲರಿಗೆ ಸಾಮಾನ್ಯವಾದ ಪ್ರಶ್ನೆ ? ಇದಾಗಿದೆ.
ನಾವು ರಾಜಕೀಯ ಲೆಕ್ಕಾಚಾರಗಳು ನೋಡಿದರೆ ರಾಷ್ಟ್ರೀಯ ಪಕ್ಷಗಳಾದ ಭಾರತೀಯ ಜನತಾ ಪಕ್ಷ
ಮತ್ತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಪ್ರಮುಖ ಮತ್ತು ಪ್ರಬಲ ದಾವೇಧಾರಿಯನ್ನು ನೀಡುತ್ತಾ ಇದೆ ಎನ್ನುವುದು ಸರ್ವಸಾಮಾನ್ಯರ ಮಾತು. ಬಿ ಫಾರ್ಮ್ ಆಕಾಂಕ್ಷಿ ಪಟ್ಟಿಯಲ್ಲಿ ಭಾರತೀಯ ಜನತಾ ಪಕ್ಷದ 8ರಿಂದ12 ಜನ ಅಭ್ಯರ್ಥಿಗಳು ಬಿ ಫಾರ್ಮ್ ಗೋಸ್ಕರ ಆಕಾಂಕ್ಷಿಗಳಾಗಿದ್ದಾರೆ. ಅದರಲ್ಲಿ ಪ್ರಮುಖ ಮಾಜಿ ಶಾಸಕರಾದ ಅರವಿಂದ್ ಪಾಟೀಲ, ಶಿಕ್ಷಣ ಸಂಸ್ಥೆ ಹಾಗೂ ಸಹಕಾರ ಸಂಘದ ಅಧ್ಯಕ್ಷರಾದ ವಿಠಲ್ ಹಲಗೆಕರ, ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಾದ ಸೋನಾಲಿ ಸರ್ನೋಬತ್ ಇವರು ಪ್ರಬಲ ಅಭ್ಯರ್ಥಿ ಆಕಾಂಕ್ಷಿಗಳು.
ಬಿಜೆಪಿಯಿಂದ ಈ ಕಡೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಹಾಲಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಒಬ್ಬರೇ ಒಬ್ಬರು ಟಿಕೆಟ್ ಆಕಾಂಕ್ಷಿ ಬಹುಶಃ ಇವರು ಕೂಡ ಕಾಂಗ್ರೆಸ್ಸಿನ ಅಭ್ಯರ್ಥಿಯಾಗಬಹುದು.
ಜೆಡಿಎಸ್ ನಿಂದ ನಾಸಿರ್ ಭಗವಾನ್ ಅಧಿಕೃತ ಅಭ್ಯರ್ಥಿ ಈಗಾಗಲೇ ಜೆಡಿಎಸ್ ಇವರ ಹೆಸರನ್ನು ಘೋಷಣೆ ಮಾಡಿದೆ. ಇನ್ನು ಉಳಿದಿರುವುದು ಮಹಾರಾಷ್ಟ್ರ ಏಕೀಕರಣ ಸಮಿತಿ ಎಂಇಎಸ್ ಪಕ್ಷದಿಂದ 7 ಜನ ಅಭ್ಯರ್ಥಿ ಆಕಾಂಕ್ಷಿಗಳಾಗಿದ್ದು ಇದರಲ್ಲಿ ಪ್ರಮುಖ ಆಕಾಂಕ್ಷಿಗಳಲ್ಲಿ ನಿರಂಜನ್ ಉದಯ್ ಸಿಂಗ್ ಸರ್ ದೇಸಾಯಿ, ಹಾಗೂ ಗೋಪಾಳ ಮುರಾರಿ ಪಾಟೀಲ್, ಆಬಾಸಾಹೇಬೆ ದಳವಿ ಈ ಹೆಸರುಗಳಲ್ಲಿ ಚಾಲ್ತಿಯಲ್ಲಿವೆ ಬಹುತೇಕ ನಿರಂಜನ್ ಸರ್ ದೇಸಾಯಿ ಖಚಿತ ಆಗುವಂತ ಎಲ್ಲಾ ಲಕ್ಷಣಗಳು ಇವೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


