ತುರುವೇಕೆರೆ: ನಾನು ಗ್ರಾಮ ಪಂಚಾಯಿತಿ ಸದಸ್ಯನಾಗಿ, ಶಾಸಕನಾಗುವ ಮಟ್ಟಕ್ಕೆ ಬೆಳೆದು ಬಂದವನು. ಎಲ್ಲಾ ರೀತಿಯ ಅಡೆತಡೆಗಳನ್ನು ದಾಟಿ ಬೆಳೆದು ಬಂದಿದ್ದೇನೆ, ಚುನಾವಣಾ ಕಣದಲ್ಲಿ ಹಲವು ಗೆಲುವು ಸೋಲುಗಳನ್ನು ಕಂಡಿದ್ದೇನೆ. ಆದರೆ ನನಗೆ ಈ ಚುನಾವಣೆಯಲ್ಲಿ ಅವರು ಮಾಡಿದ ಕುತಂತ್ರದಿಂದ ನನ್ನ ಸೋಲಾಯಿತು ಎಂದು ನಿಕಟಪೂರ್ವ ಶಾಸಕ ಮಸಾಲಾ ಜಯರಾಮ್ ಅಭಿಪ್ರಾಯಪಟ್ಟರು.
ತೋಟದಮನೆಯಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಅವರ ಮೋಸದ ಆಟಕ್ಕೆ ಕುತಂತ್ರಕ್ಕೆ ಇವತ್ತು ಈ ತಾಲೂಕಿನ ಜನ ಬಲಿಯಾಗಿದ್ದಾರೆ. ಅವರು ಮಾಡಿದ ಮೋಸ ಒಂದಾ ಎರಡಾ? ನಾನು ಈ ದಿನ ಚುನಾವಣೆಯಲ್ಲಿ ಸೋತಿರಬಹುದು ಆದರೆ ನಾನು ಗೆದ್ದಿದ್ದೇನೆ. ನಿಮ್ಮ ಶ್ರಮ ನಿಮ್ಮ ಶಕ್ತಿ ನೀವು ಮಾಡಿದಂತಹ ಕೆಲಸ ಕಾರ್ಯ ಬೇರೆ ಪಕ್ಷದ ಬಂಧ ಕಾರ್ಯಕರ್ತರು ಸಹ ಒಟ್ಟಾಗಿ ಶ್ರಮಪಟ್ಟು ಕೆಲಸ ಮಾಡಿದ್ದೀರಾ ನಾನು ಸೋತಿಲ್ಲ ಇಲ್ಲಿ ಗೆದ್ದಿದ್ದೇನೆ ಎಂದರು.
ನಾನು ಸೋತಿದ್ದರೆ ಕೇವಲ ಬರಿ 25,000 ಮತಗಳಿಗೆ ಸೀಮಿತವಾಗಬೇಕಾಗಿತ್ತು, ಆದರೆ 58000 ,ಮತಗಳನ್ನು ಪಡೆದಿದ್ದೇನೆ. ಆದರೆ ನಿಮ್ಮಗಳ ಮುಂದೆ ನಾನು ಗೆದ್ದಿದ್ದೇನೆ. ನಾನು ಸೋಲಬೇಕೆಂದು ವಾಮಾಚಾರ ಮಾಡಿ ನಮ್ಮ ಮನೆ ಮುಂದೆ ಹಾಕಿ ಹೋಗಿದ್ದಾರೆ. ಅದರಿಂದ ಅವರು ಯಾವ ಮಟ್ಟಕ್ಕೆ ಇಳಿದಿದ್ದಾರೆಂದು ನೀವೇ ತಿಳಿದುಕೊಳ್ಳಿ , ಅವರು ಚುನಾವಣೆಯಲ್ಲಿ ಗೆದ್ದಿರಬಹುದು ಅವರಿಗೆ ನಾನು ಶುಭಾಶಯಗಳನ್ನು ತಿಳಿಸುತ್ತೇನೆ,
ಆದರೆ ಈ ಯಾವುದೇ ರೀತಿ ಗೆಲುವಲ್ಲ ನಿಮ್ಮಗಳ ಶಕ್ತಿಯೇ ನನ್ನ ಶಕ್ತಿ ಯಾವುದೇ ತರದ ವಾಮಾಚಾರವನ್ನು ಮಾಡಿಸಿದರೂ ಜಯರಾಮಣ್ಣನಿಗೆ ನಿಮ್ಮಂತಹ ಕಾರ್ಯಕರ್ತರಗಳು ಇರುವ ತನಕ ಏನು ಮಾಡಲು ಆಗುವುದಿಲ್ಲ ಇವರು ಯಾವ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂದು ತೋರಿಸುತ್ತದೆ ಎಂದರು.
ಬಾಣಸಂದ್ರ ರಮೇಶ್ ಅವರು ನನಗೆ ಯಾರು ಎನ್ನುವುದೇ ಗೊತ್ತಿಲ್ಲ. ಎಮ್.ಟಿ.ಕೃಷ್ಣಪ್ಪನವರು ನನ್ನನ್ನು ವಿಡಿಯೋ ಮಾಡಿ ಕೊಲೆಗಾರ ಎಂಬಂತೆ ಹೇಳಿಕೆ ಕೊಟ್ಟು ಖಳನಾಯಕನಂತೆ ಬಿಂಬಿಸಿದ್ದಾರೆ. ರಮೇಶ್ ಗೂ ನನಗೂ ಯಾವುದೇ ಸಂಬಂಧವಿಲ್ಲ. ಒಂದು ದಿವಸವು ಕೂಡ ಅವನನ್ನು ನಾನು ಮಾತನಾಡಿಸಿಲ್ಲ ,ಅವರು ಹೇಳುತ್ತಾರೆ ನಾನು ಅವನನ್ನು ಕಿಡ್ನಾಪ್ ಮಾಡಿಸಿ ಕೊಲೆ ಮಾಡಿಸಿ ಬಿಟ್ಟಿದ್ದೇನೆ ಎಂದು, ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೆ ಕೊಟ್ಟು ಕೀಳು ಮಟ್ಟಕ್ಕೆ ಇಳಿದಿರುವುದು ಈ ತಾಲೂಕಿನ ದುರಂತ ತಮ್ಮ ವೈಯಕ್ತಿಕ ಲಾಭಕ್ಕಾಗಿ ಯಾರನ್ನು ಬೇಕಾದರೂ ಬಲಿಕೊಡುವುದು ಇವರ ಜಾಯಮಾನವಾಗಿದೆ. ಆದರೆ ಕೊಲೆಯಾಗಿರುವವನು ಬೆಳಗ್ಗೆ ಹೇಗೆ ಬಂದ. ಇದೆಲ್ಲ ಒಂದು ಷಡ್ಯಂತ್ರ ನನ್ನನ್ನು ಸಾರ್ವಜನಿಕರಲ್ಲಿ ಕೊಲೆಗಾರನನ್ನಾಗಿ ಮಾಡಲು ನಡೆಸಿದ ಷಡ್ಯಂತರವಾಗಿದ್ದು ಜನಗಳು ಇದನ್ನು ಅರ್ಥ ಮಾಡಿಕೊಳ್ಳದೆ ಅವರನ್ನು ಗೆಲ್ಲಿಸಿದ್ದಾರೆ ಎಂದರು.
ಈ ತರದ ಕೃತ್ಯ ನಡೆದಿದ್ದರೆ ಪೊಲೀಸರಲ್ಲಿ ಕಂಪ್ಲೇಂಟ್ ಏಕೆ ಕೊಡಲಿಲ್ಲ ಅಥವಾ ಅವರ ಹೆಂಡತಿಯಲ್ಲಿ ಕೈಯಲ್ಲಿ ಯಾಕೆ ಕೊಡಿಸಲಿಲ್ಲ ಇದೆಲ್ಲ ನೋಡುತ್ತಿದ್ದರೆ ಅನುಮಾನಗಳು ಬರದೇ ಇರುವುದಿಲ್ಲ ಎಂದರು . ಇದೆಲ್ಲ ಇವರ ನಾಟಕದ ಕಂಪನಿಯ ನಾಟಕಗಳು ಎಂದು ಆರೋಪ ಮಾಡಿದರು.
ನಾನು ನಿಮ್ಮ ಜೊತೆಗಿದ್ದೇನೆ ಯಾವುದೇ ಕಾರಣಕ್ಕೂ ದ್ರುತಿಗೆಡಬೇಡಿ ನಮ್ಮ ಮುಖಂಡರುಗಳಾಗಲಿ ಕಾರ್ಯಕರ್ತರುಗಳಾಗಲಿ ಸ್ವಲ್ಪವಾದರೂ ಹೆಚ್ಚು ಕಡಿಮೆ ಆದರೆ, ನಾನಂತೂ ಸುಮ್ಮನಿರುವವನಲ್ಲ ಅದರ ಬೆಲೆಯನ್ನು ಅವರು ತರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಲ್ಲಾ ಕಾರ್ಯಕರ್ತರಲ್ಲಿ ವಿನಂತಿ ಮಾಡುತ್ತೇನೆ ನೀವುಗಳು ಯಾವುದೇ ಕಾರಣಕ್ಕೂ ಸುಖಾ ಸುಮ್ಮನೆ ಗಲಾಟೆಗಳನ್ನು ಅವರ ಹತ್ತಿರ ಮಾಡಿಕೊಳ್ಳಬೇಡಿ, ಅವರೇ ಕಾಲು ಕೆರೆದು ಬಂದರೆ ಸುಮ್ಮನೆ ಬಿಡುವವನಲ್ಲ, ಇದನ್ನು ನಮ್ಮ ವಿರೋಧಿಗಳು ಅರ್ಥ ಮಾಡಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಮೃತ್ಹುಂಜಯ. ಪಟ್ಟಣ ಪಂಚಾಯ್ತಿ ಅಧ್ಯಕ್ಷ ಪ್ರಬಾಕರ್ .ಮಾಜಿ ಅಧ್ಯಕ್ಷರಾದ ಚಿದಾನಂದ್. ಅಂಜನ್ಕುಮಾರ್. ಡೊಂಬರನಹಳ್ಳಿ ಬಸವರಾಜು. ಕೊಂಡಜ್ಜಿ ವಿಶ್ವನಾಥ್. ಕಡೆಹಳ್ಳಿ ಸಿದ್ದೇಗೌಡ . ಸಿ.ಎಸ್. ಪುರ ಕುಮಾರ್ ಸೇರಿದಂತೆ ಹಲವರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy