ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥರಾಗಿ ಸಮರ್ಥ ಹಾಗೂ ದಕ್ಷರು ಬರಬೇಕಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಚುನಾವಣಾ ಆಯೋಗದ ಮೇಲೆ ಮಹತ್ವದ ಹೊಣೆಯನ್ನು ಸಂವಿಧಾನ ನೀಡಿದೆ. ಇದನ್ನು ಕಾಪಾಡಲು ಚುನಾವಣಾ ಆಯೋಗಕ್ಕೆ ಸಮರ್ಥ ಹಾಗೂ ದಕ್ಷ ವ್ಯಕ್ತಿಯನ್ನು ನೇಮಿಸಬೇಕಿದೆ ಎಂದರು.
ದೇಶದಲ್ಲಿ ಪ್ರಸ್ತುತ ಪರಿಸ್ಥಿತಿ ಎಚ್ಚರಿಕೆ ಗಂಟೆ ಬಾರಿಸುತ್ತಿದೆ. ಆದ್ದರಿಂದ 1990-1996ರ ನಡುವೆ ಚುನಾವಣಾ ಪ್ರಕ್ರಿಯೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂಡ ಟಿಎನ್ ಶೇಷನ್ ಮಾದರಿಯ ವ್ಯಕ್ತಿ ನೇಮಕ ಮಾಡುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ಕೆಎಂ ಜೋಸೆಫ್ ನೇತೃತ್ವದಲ್ಲಿ ನ್ಯಾಯಮೂರ್ತಿ ಅಜಯ್ ರಸ್ತೋಗಿ, ನ್ಯಾಯಮೂರ್ತಿ ಅನಿರುದ್ಧ ಬೋಸ್, ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಮತ್ತು ನ್ಯಾಯಮೂರ್ತಿ ಸಿಟಿ ರವಿಕುಮಾರ್ ಅವರನ್ನೊಳಗೊಂಡ ಐವರು ಸದಸ್ಯರ ಸಂವಿಧಾನ ಪೀಠ ಬುಧವಾರ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಚುನಾವಣಾ ಆಯೋಗದ ಮುಖ್ಯಸ್ಥರಾಗಿ ಹಲವಾರು ಮಂದಿ ಬಂದು ಹೋಗಿದ್ದಾರೆ. ಆದರೆ ಟಿಎನ್ ಶೇಷನ್ ಅವರಂತಹವರು ಒಂದು ಬಾರಿ ಮಾತ್ರ ಬರುತ್ತಾರೆ. ಅವರನ್ನು ಉದಾಹರಣೆಯಾಗಿ ಕೊಡುತ್ತಿಲ್ಲ. ಆದರೆ ಚುನಾವಣೆ ನ್ಯಾಯಸಮ್ಮತ ಹಾಗೂ ಪರಿಣಾಮಕಾರಿಯಾಗಿ ನಡೆಸಲು ದಕ್ಷರು ಬರಬೇಕಿದೆ ಎಂದು ಪೀಠ ಹೇಳಿತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


