ಪೀರನವಾಡಿ ಪಟ್ಟಣ ಪಂಚಾಯತಿಯಲ್ಲಿ ನಡಿಯುತೀರುವ ಎದ್ವಾ -ತದ್ವಾ ಕೆಲಸಗಳ ಬಗ್ಗೆ ಪೀರನವಾಡಿ ಪಟ್ಟಣದ ನಾಗರಿಕರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಂಖಡ ರಾಕೇಶ್ ತಳವಾರ ಅವರ ನೇತೃತ್ವದಲ್ಲಿ ಪಟ್ಟಣ ಪಂಚಾಯತ್ ಕಚೇರಿಗೆ ಆಗಮಿಸಿ, ಮುಖ್ಯ ಅಧಿಕಾರಿ ಹನುಮಂತಪ್ಪ ಮನೋ ವಡ್ಡರ ಅವರಿಗೆ ಪಟ್ಟಣ ಪಂಚಾಯಿತಿ ಕಚೇರಿಯಿಂದ ಹಾಗೂ ಸಿಬ್ಬಂದಿಗಳಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ವಿಚಾರವನ್ನು ಪ್ರಶ್ನೆ ಮಾಡಿದರು .
ಪಟ್ಟಣ ಪಂಚಾಯತಿಯಿಂದ ಅನುಷ್ಠಾನಗೊಳುತ್ತಿರುವ ಯೋಜನೆಗಳು ಹಾಗೂ ಅನುದಾನಗಳ ಖರ್ಚು ವೆಚ್ಚಗಳನ್ನು ಸಾರ್ವಜನಿಕಗೊಳಿಸಬೇಕು ಮತ್ತು ಪಟ್ಟಣದ ಕಸ ವಿಲೇವಾರಿ ಗುತ್ತಿಗೆದಾರರು ಯಾರಿದ್ದಾರೆ ? ಹಾಗೂ ಕಂಪ್ಯೂಟರ್ ಉತಾರ ನಿಗದಿಯಾಗಿರುವ ದರ ಎಷ್ಟು ? ಎಂಬುದು ಉತ್ತರವನ್ನು ನೀಡಬೇಕೆಂದು ನಾಗರಿಕರು ಒತ್ತಾಯಿಸಿದರು.
ಏಳುದಿನಗಳ ಒಳಗೆ ಕಚೇರಿ ಹೊರಗಡೆ ಯೋಜನೆಗಳ ಮಾಹಿತಿ ಇರುವ ಫಲಕ ಹಾಕಬೇಕು ಮತ್ತು ಗ್ರಾಮ ಸಭೆ ಮಾಡಬೇಕು ಎಂದು ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ರಾಕೇಶ್ ತಳವಾರ್ ಮಾತನಾಡಿ, ಪಟ್ಟಣ ಪಂಚಾಯತಿ ಸಿಬ್ಬಂದಿಗಳ ವರ್ತನೆ ಸಾರ್ವಜನಿಕರ ಜೊತೆ ಸರಿಯಾಗಿಲ್ಲ, ಸಾರ್ವಜನಿಕರಿಗೆ ತೊಂದರೆ ಕೊಡುವುದೇ ಅವರ ಉದ್ದೇಶವಾಗಿದೆ ಮತ್ತು ಪಟ್ಟಣ ಪಂಚಾಯತ್ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಇದನ್ನು ತಡೆಯಬೇಕೆಂದು ಒತ್ತಾಯ ಮಾಡಿದರು.
ಮುಖ್ಯ ಅಧಿಕಾರಿಗಳು ಮಾತನಾಡಿ, ಸಮಸ್ಯೆಗಳನ್ನು ಸರಿಪಡಿಸುತ್ತೇನೆ, ಸಾರ್ವಜನಿಕರಿಗೆ ತೊಂದರೆ ಆಗದಂತೆ ನಡೆದುಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ ಎಂದು ನಾಗರಿಕರನ್ನು ಸಮಾಧಾನ ಪಡಿಸಲು ಯತ್ನಿಸಿದರು, ಆದರೆ ಇವರ ಉತ್ತರದಿಂದ ಪ್ರತಿಭಟನಾಕಾರರು ತೃಪ್ತರಾಗದೇ ಸಮಸ್ಯೆಗಳ ನಿವಾರಣೆಗೆ 7 ದಿನಗಳ ಗಡುವು ನೀಡಿದರು.
ಈ ಸಂದರ್ಭದಲ್ಲಿ ರಾಕೇಶ್ ತಳವಾರ, ಸಚಿನ್ ಗೌರವತಿ, ಸಚಿನ ರಾಹುತ, ಶಿವಾಜಿ ಶಾಪುರಕರ, ಚಂದ್ರಕಾಂತ ಪಾಟೀಲ, ಪ್ರಮೋದ್ ಪಾಟೀಲ, ಪೀರಾಜಿ ಮುಚ್ಚಂಡಿಕಾರ, ಪುಶ್ಯಪ್ಪ ನಾಯಕ, ಜ್ಯೋತಿಬಾ ಲೋಹಾರ, ಜ್ಯೋತಿಬಾ ಗುಂಡೋಜಿ, ಹಾಗೂ ಹಿರಿಯ ನಾಗರಿಕರು ಉಪಸ್ಥಿತರಿದ್ದರು.


