ಪಾವಗಡ: ಟ್ರ್ಯಾಕ್ಟರ್ ಹರಿದು ಪೌರಕಾರ್ಮಿಕ ಸಾವನ್ನಪ್ಪಿರುವಂತಹ ಘಟನೆ ಪಾವಗಡ ಪಟ್ಟಣದ ಶನಿಮಹಾತ್ಮ ವೃತ್ತದಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆಯಲ್ಲಿ ಜರುಗಿದೆ.
ಪಾವಗಡ ಪೊಲೀಸರು ಕಳ್ಳತನಗಳನ್ನು ನಿಯಂತ್ರಿಸಲು ಪಟ್ಟಣದ ನಾಲ್ಕು ಭಾಗಗಳಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸುತ್ತಿದ್ದಾರೆ, ಪಟ್ಟಣದ ವಿವಿಧಡೆ ಇರುವಂತಹ ಬ್ಯಾರಿಕೆಡ್ ಗಳನ್ನು ಖಾಸಗಿ ಟ್ರ್ಯಾಕ್ಟರ್ ನಲ್ಲಿ ಸಾಗಿಸಲಾಗುತ್ತಿತ್ತು.
ಈ ಸಂದರ್ಭದಲ್ಲಿ ಪೊಲೀಸರು ಪುರಸಭೆಯಲ್ಲಿ ಪೌರಕಾರ್ಮಿಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜು ಎನ್ನುವವರನ್ನು ಕರೆದುಕೊಂಡು ಬ್ಯಾರಿಕೇಡ್ ಗಳನ್ನು ಸಾಗಿಸುತ್ತಿದ್ದರು.
ಎಂಎಜಿ ಸರ್ಕಲ್ ನಲ್ಲಿರುವಂತಹ ಬ್ಯಾರಿಕೆಡ್ ಗಳನ್ನು ಚಳ್ಳಕೆರೆ ಕ್ರಾಸ್ ಕಡೆ ಸಾಗಿಸುವ ಮಾರ್ಗ ಮಧ್ಯೆ ಪಟ್ಟಣದ ಶನಿ ಮಹಾತ್ಮ ವೃತ್ತದಲ್ಲಿ ಇದ್ದಕ್ಕಿದ್ದಂತೆ ಮಂಜುನಾಥ ಕೆಳಗೆ ಬಿದ್ದಿದ್ದು, ಆತನ ತಲೆಯ ಮೇಲೆ ಟ್ರ್ಯಾಕ್ಟರ್ ಹರಿದಿದೆ. ಕೂಡಲೇ ಸ್ಥಳೀಯರ ನೆರವಿನಿಂದ ಆತನನ್ನು ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗಿದೆ ಸಂಜೆ ಐದು ಗಂಟೆಯಲ್ಲಿ ಪುರಸಭೆಯ ಕಾಯಂ ನೌಕರ ಮಂಜುನಾಥ್ ಮೃತಪಟ್ಟಿದ್ದಾನೆ.
ಆಸ್ಪತ್ರೆ ಬಳಿ ಪಾವಗಡ ಪೊಲೀಸ್ ಠಾಣೆಯ ಸಿಪಿಐ ಸುರೇಶ್, ಗಿರೀಶ್, ಪುರಸಭಾ ಅಧ್ಯಕ್ಷ ಪಿ ಎಚ್ ರಾಜೇಶ್ ಸದಸ್ಯರಾದ ಬಾಲಸುಬ್ರಮಣ್ಯಂ, ಮುಖ್ಯ ಅಧಿಕಾರಿ ಜಾಫರ್ ಷರೀಫ್, ಆರೋಗ್ಯ ನಿರೀಕ್ಷಕ ಶಂಶುದ್ಧ ಭೇಟಿ ನೀಡಿ ಪರಿಶೀಲಿಸಿದ್ದು, ಘಟನೆ ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ವರದಿ: ನಂದೀಶ್ ನಾಯ್ಕ ಪಿ., ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4