ಬೆಂಗಳೂರು: ಸಮ್ಮಿಶ್ರ ಸರ್ಕಾರ ಹೇಗೆ ರಚನೆಯಾಯ್ತು ಎಂದು ಎಲ್ಲರಿಗೂ ಗೊತ್ತಿದೆ. ಸವಾಲಿನ ಸಂದರ್ಭದಲ್ಲಿ ನಾನು ಸಿಎಂ ಆಗಿದ್ದೇನೆ. ನಾವು ಆತ್ಮಸ್ಥೈರ್ಯದಿಂದ ಕೆಲಸ ಮಾಡಿದ್ದೇವೆ. ನಾವು ಒಂದು ದಿನವೂ ಸರಕಾರಿ ನೌಕರರಿಗೆ ಸಂಬಳ ನಿಲ್ಲಿಸಲಿಲ್ಲ. ತೆರಿಗೆ ಸುಧಾರಣೆಯಲ್ಲಿ ಗಣನೀಯ ಸುಧಾರಣೆ ಆಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಜೆಟ್ ಅಧಿವೇಶನ ಪ್ರಾರಂಭವಾಗಿದ್ದು, ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ನೀಡಿದ್ದು ವಿಧಾನಸಭೆಯಲ್ಲಿ ಮಾತನಾಡಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ರಚನೆಯಾದಾಗ ಪ್ರವಾಹ ಬಂದಿತ್ತು. ಬಳಿಕ ಕೊರೊನಾ ಬಂದಾಗ ಜೀವನ ನಡೆಸಲು ಸಮಸ್ಯೆಯಾಗಿತ್ತು. ಆಕ್ಸಿಜನ್ ಪೂರೈಕೆ ಮಾಡಲು ಸೂಕ್ತ ಕ್ರಮ ತೆಗೆದುಕೊಂಡೆವು. ಒಂದು ದಿನವೂ ಆಕ್ಸಿಜನ್ ಕೊರತೆಯಾಗದಂತೆ ಕ್ರಮ ಕೈಗೊಂಡಿದ್ದೇವೆ ಕೊರೊನಾ ಲಸಿಕೆ ನೀಡುವಾಗ ಅಪನಂಬಿಕೆಯ ಮಾತುಗಳು ಬಂದವು. ಆದರೆ ನಾವು ನೀಡಿದ ಲಸಿಕೆ ದೊಡ್ಡ ಪ್ರಮಾಣದಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.
ಉತ್ತಮವಾಗಿ ತೆರಿಗೆ ಸಂಗ್ರಹ ಹಿನ್ನೆಲೆ ಉತ್ತಮ ಬಜೆಟ್ ಕೊಟ್ಟಿದ್ದೇವೆ. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಿ ಖರೀದಿಸಿದ್ದೇವೆ. ಕಳೆದ 7-8 ವರ್ಷಗಳಿಂದ ಶಾಲಾ ಕೊಠಡಿಗಳ ನಿರ್ಮಿಸಿಲ್ಲ. ಸರ್ವಶಿಕ್ಷಣ ಅಭಿಯಾನ ನಿಂತ ಮೇಲೆ ಕೊಠಡಿ ನಿರ್ಮಿಸಿರಲಿಲ್ಲ. ರಾಜ್ಯಾದ್ಯಂತ 8 ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಿಸುತ್ತಿದ್ದೇವೆ. ನೂತನಾ ಶಾಲಾ ಕೊಠಡಿಗಳಿಗೆ ವಿವೇಕ ಎಂದು ಹೆಸರಿಟ್ಟಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಲಾ ಕೊಠಡಿಗಳ ನಿರ್ಮಾಣ ಮಾಡಿದ್ದೇವೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


