ಬೆಂಗಳೂರು: ಬಿಜೆಪಿ ಯುವ ಮುಖಂಡನ ಹತ್ಯೆ, ರಾಜ್ಯದಲ್ಲಿ ನಡೆದ ಸಾಲು ಸಾಲು ಹಿಂದೂ ಪರ ಸಂಘಟನೆ ಕಾರ್ಯಕರ್ತರ ಹತ್ಯೆಯ ಬೆನ್ನಲ್ಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಹಂತಕರ ಬಂಧನದ ಬಗ್ಗೆ ಸರಿಯಾದ ಮಾಹಿತಿನೀಡಿಲ್ಲ. ರಾಜ್ಯ ಸರ್ಕಾರ ತನ್ನ ಪೊಲೀಸ್ ಪಡೆಯ ಮೇಲೆಯೇ ವಿಶ್ವಾಸ ಕಳೆದುಕೊಂಡಿದೆ. ಕಾರ್ಯಕರ್ತರಿಗೆ ಉಡಾಫೆ ಉತ್ತರ ಕೊಡುತ್ತಿದ್ದಾರೆ. ಎಂದು ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿಯವರು ರಾಜ್ಯವನ್ನು ಉತ್ತರಪ್ರದೇಶ ಮಾಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಸಿಎಂ ಬೊಮ್ಮಾಯಿ ಅವರೇ ರಾಜ್ಯವನ್ನು ಉತ್ತರಪ್ರದೇಶ ಮಾಡಿದ್ದೀರಾ. ಹಾಗಾಗಿ ನೀವು ಇಲ್ಲಿ ಯುಪಿ ಮಾಡೆಲ್ ತರಬಹುದು. ಯುಪಿಯಲ್ಲಿ ಯೋಗಿ ಬರುವುದಕ್ಕೂ ಮೊದಲು ಹೇಗಿತ್ತೋ ಹಾಗೆ ರಾಜ್ಯ ಮಾಡಿದ್ದೀರಾ ಹಾಗಾಗಿ ಯುಪಿ ಮಾಡೆಲ್ ತರಲು ಹೊರಟಿದ್ದೀರಾ ಎಂದು ವಾಗ್ದಾಳಿ ನಡೆಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


