ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಸಿಎಂ ಸಿದ್ಧರಾಮಯ್ಯರ ನೇತೃತ್ವದಲ್ಲಿ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ಸಭೆ ಆರಂಭವಾಗಿದೆ. ಇನ್ನು ಸಭೆಯ ಆರಂಭದಲ್ಲಿ ತಮ್ಮ ಮಾತು ಆರಂಭಿಸಿರುವ ಸಿಎಂ ಸಿದ್ದರಾಮಯ್ಯ, ಸಭೆ ಕರೆದಿರುವ ಔಚಿತ್ಯದ ಬಗ್ಗೆ ತಿಳಿಸಿದ್ದಾರೆ. ಶಾಸಕರನ್ನ ಕುರಿತು ತಮ್ಮ ಮಾತು ಆರಂಭಿಸಿರುವ ಸಿದ್ಧರಾಮಯ್ಯ,
ಹಲವು ದಿನಗಳಿಂದ ಸಭೆ ಕರೆಯಬೇಕಿತ್ತು. ಈ ಹಿಂದೆಯೂ ಕೂಡ ಸಭೆ ನಿಗದಿಯಾಗಿತ್ತು.
ಅನಿವಾರ್ಯ ಕಾರಣಗಳಿಂದ ಸಭೆಯನ್ನ ಮುಂದೂಡಲಾಗಿತ್ತು. ನಿಮ್ಮೆಲ್ಲರ ಒತ್ತಡದ ಕಾರಣ ಈಗ ಸಭೆ ಕರೆದಿದ್ದೇವೆ. ಸರ್ಕಾರ ಬಂದು ಎರಡು ತಿಂಗಳು ಮಾತ್ರ ಕಳೆದಿದೆ. ಜನರಿಗೆ ಮಾತು ಕೊಟ್ಟಂತೆ ಐದು ಗ್ಯಾರಂಟಿಗಳನ್ನ ಜಾರಿಗೆ ತರುತ್ತಿದ್ದೇವೆ. ಈಗಾಗಲೇ ಮೂರು ಗ್ಯಾರಂಟಿಗಳ ಜಾರಿಯಿಂದ ಜನರು ಖುಷಿಯಾಗಿದ್ದಾರೆ.
ಇತ್ತೀಚೆಗೆ ಬಂದ ಒಂದು ಸಮೀಕ್ಷೆಯಿಂದ ಇದು ಗೊತ್ತಾಗಿದೆ. ನಮ್ಮದು ಜನಪ್ರಿಯ ಸರ್ಕಾರ.ಆದರೆ, ಕೆಲ ಸಚಿವರ ಮೇಲೆ ಶಾಸಕರು ಅಸಮಾಧಾನಗೊಂಡಿದ್ದಾರೆ. ಹಲವು ವಿಚಾರವಾಗಿ ಶಾಸಕರು ಅಸಮಾಧಾನಗೊಂಡಿದ್ದಾರೆ. ನಮಗೆ ಪತ್ರ ಬರೆದು ಸಭೆ ಕರೆಯಲು ಹೇಳಿದ್ದರು. ಏನೇ ಅಸಮಾಧಾನ ಇದ್ದರು, ನಮ್ಮ ಗಮನಕ್ಕೆ ತೆಗೆದುಕೊಂಡು ಬನ್ನಿ, ಮಾಧ್ಯಮಗಳ ಮುಂದೆ ಮಾತನ್ನಾಡಬೇಡಿ. ನಕಲಿ ಪತ್ರ ಕೂಡ ಹರಿದಾಡಿತ್ತು. ಬಿಜೆಪಿ ಇಂತಹ ವಿಷಯಗಳ ಬಗ್ಗೆ ಕಾಯುತ್ತಿರುತ್ತದೆ. ಆದರಿಂದ ಏನೇ ಅಸಮಧಾನ ಇದ್ರು ಪಕ್ಷದ ವೇದಿಕೆಯಲ್ಲಿ ಚರ್ಚಿಸೋಣ ಎಂದು ಶಾಸಕರಿಗೆ ಕಿವಿಮಾತನ್ನು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


