ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆಂದು ರೂಪಿಸಲಾದ ಮುಖ್ಯಮಂತ್ರಿಗಳ 1ಲಕ್ಷ ಬೆಂಗಳೂರು ವಸತಿ ಯೋಜನೆ ಗೊಂದಲದ ಗೂಡಾಗಿದ್ದು, ನಿತ್ಯ ಹತ್ತಾರು ಮಂದಿ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತಕಚೇರಿಗೆ ಭೇಟಿ ನೀಡಿ ಬರಿಗೈಯಲ್ಲಿ ಹಿಂತಿರುಗುತ್ತಿದ್ದಾರೆ. ಕಳೆದ 3 ವರ್ಷಗಳಿಂದ ಮುಖ್ಯಮಂತ್ರಿಗಳ 1 ಲಕ್ಷ ಬೆಂಗ ಳೂರು ವಸತಿ ಯೋಜನೆಯು ಅನುಷ್ಠಾನಗೊಂಡಿದ್ದು, ಆರಂಭದಲ್ಲಿ ಜನ ಸಾಮಾನ್ಯರಿಗೆ ಸ್ಪಂದಿಸಿ ಹಲವು ಪ್ಲಾಟ್‌ಗಳನ್ನು ಹಂಚಿಕೆ ಮಾಡಲಾಗಿದೆ.
ಆದರೆ, ಕಳೆದ 4 ತಿಂಗಳುಗಳಿಂದ ಈ ಯೋಜನೆಯು ಜನ ಸಾಮಾನ್ಯರಿಗೆ ಸೂಕ್ತ ರೀತಿಯಲ್ಲಿ ತಲುಪುತ್ತಿಲ್ಲ. 2022ರ ಡಿಸೆಂಬರ್‌ನಲ್ಲಿ ಯೋಜನೆಯಡಿ ಪ್ಲಾ ಬೇಕಾಗಿರುವವರು ಅರ್ಜಿ ಸಲ್ಲಿಸಿ ಎಂದು ನಿಗಮ ಸೂಚಿಸಿತ್ತು. ಅದರಂತೆ ಸಾವಿರಾರು ಮಂದಿ ಅರ್ಜಿ ಸಲ್ಲಿಸಿದ್ದರು.ಇದೀಗ 2 ಬಿಎಚ್‌ಕೆ ಫ್ಲಾಟ್ ಬೇಕಾದ ಎಲ್ಲರೂ ತಾವು ಈ ಹಿಂದೆ ಸಲ್ಲಿಸಿರುವ ಅರ್ಜಿ ರದ್ದುಪಡಿಸಿ ಹೊಸ ಅರ್ಜಿ ಸಲ್ಲಿಸಬೇಕು.1 ಬಿಎಚ್‌ಕೆಗೆ ಅರ್ಜಿ ಸಲ್ಲಿಸಿರುವ ಕೆಲ ಫಲಾನುಭವಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ನಿಗಮದ ಅಧಿಕಾರಿಗಳು ಸೂಚಿಸಿದ್ದಾರೆ.
ಇದೀಗ 700ಕ್ಕೂ ಅಧಿಕ ಫಲಾನುಭವಿಗಳು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಕಚೇರಿಗೆ ಭೇಟಿಕೊಟ್ಟು ತಾವು ಸಲ್ಲಿಸಿರುವ ಅರ್ಜಿ ರದ್ದು ಗೊಳಿಸಬೇಕಾಗಿದೆ.ಆದರೆ, ನಿಗಮದ ಅಧಿಕಾರಿಗಳು ಸಾಫ್ಟ್ ವೇರ್ ಸರಿಯಿಲ್ಲ.ಸರ್ವರ್ ಡೌನ್ ಎಂಬ ಸಬೂಬು ಹೇಳಿ ಫಲಾನುಭವಿ ಗಳನ್ನು ವಾಪಸ್ ಕಳುಹಿಸುತ್ತಿದ್ದಾರೆ. ಪ್ರತಿ ದಿನ ಹತ್ತಾರು ಮಂದಿ ಇಲ್ಲಿಗೆ ಭೇಟಿ ಕೊಟ್ಟು ತಮ್ಮಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದು, ಅಧಿಕಾರಿಗಳು ಶೀಘ್ರದಲ್ಲೇ ಸಮಸ್ಯೆ ಪರಿಹರಿಸುವ ಭರವಸೆಯಲ್ಲೇ ದಿನ ದೂಡುತ್ತಿದ್ದಾರೆ ಎಂದು ಹತ್ತಾರು ಫಲಾನುಭವಿಗಳು ಉದಯವಾಣಿ ಜತೆಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸಿಎಂ 1 ಲಕ್ಷ ವಸತಿ ಯೋಜನೆಗೆ ಅನುದಾನ: ಬೆಂಗಳೂರು ವಸತಿ ಯೋಜನೆಯಡಿ ವಸತಿ ಕಲ್ಪಿಸಲು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ “ಸರ್ವರಿಗೂ ಸೂರು’ ಅಭಿಯಾನದಡಿ ಅನುದಾನದ ಮೊತ್ತವನ್ನು ಸಂಯೋಜಿಸಿಕೊಳ್ಳಲಾಗುತ್ತದೆ.ಫಲಾನುಭವಿ ವಂತಿಗೆಯೊಂದಿಗೆ ಈ ಯೋಜನೆಯಡಿ ಬಹುಮಹಡಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಬೆಂಗಳೂರು ನಗರ ಜಿಲ್ಲೆಯ 14 ವಿವಿಧ ಯೋಜನಾ ಸ್ಥಳಗಳಲ್ಲಿ ಸ್ಥಳಗಳಲ್ಲಿ 4 789 ಬಹುಮಹಡಿ ಮನೆಗಳ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ರಿಯಾಯಿತಿ ದರದಲ್ಲಿ ವಸತಿ ಆಯ್ಕೆಗಳನ್ನು ಒದಗಿಸುತ್ತದೆ. ಫಲಾನುಭವಿಯ ಜಾತಿ ಮತ್ತು ವರ್ಗವನ್ನು ಅವಲಂಬಿಸಿ 2.70 ಲಕ್ಷ ರೂ.ಗಳಿಂದ 3.50 ಲಕ್ಷ ರೂ. ಗಳವರೆಗೆ ಸಬ್ಸಿಡಿ ನೀಡಲಾಗುತ್ತದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


