ನಿದ್ದೆಯಲ್ಲಿದ್ದ ಯುವಕನ ಚಡ್ಡಿಯೊಳಗೆಯೇ ಹಾವೊಂದು ಅವಿತು ಕುಳಿತು, ದೊಡ್ಡ ಅವಾಂತರವೇ ಸೃಷ್ಟಿಯಾದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಥೈಲ್ಯಾಂಡ್ ನಲ್ಲಿ ಹುಡುಗನೊಬ್ಬ ರಾತ್ರಿ ಬರೀ ಚಡ್ಡಿ ಹಾಕಿಕೊಂಡು ಮಲಗಿದ್ದಾನೆ. ನಿದ್ದೆಯಲ್ಲಿದ್ದ ಆತನ ಚಡ್ಡಿ ಒಳಗೆ ನಾಗರಹಾವೊಂದು ಸೇರಿಕೊಂಡುಬಿಟ್ಟಿದೆ. ಆದರೆ ಆತ ಅಲುಗಾಡದೆ ಮಲಗಿದ್ದರಿಂದ ಆತನಿಗೆ ಹಾವು ಕಚ್ಚಿಲ್ಲ. ಆತ ಎಚ್ಚರಗೊಂಡಾಗ ಚಡ್ಡಿಯಲ್ಲಿ ಹಾವು ಸೇರಿಕೊಂಡಿರುವುದು ಗೊತ್ತಾಗಿ ಭಯದಲ್ಲಿ ಬೆವರಿದ್ದಾನೆ. ಆದರೆ ಅಲುಗಾಡದೆ ಹಾಗೆಯೇ ಮಲಗಿದಂತೆ ನಟಿಸಿ ಬಚಾವಾಗಿದ್ದಾನೆ.
ಥಾಯ್ಲೆಂಡ್ ನ ರೇಯಾಂಗ್ ನಲ್ಲಿ ಈ ಘಟನೆ ನಡೆದಿದ್ದು, ಆತ ತನ್ನ ಸ್ನೇಹಿತನಿಗೆ ಸನ್ನೆಯ ಮೂಲಕ ಅದನ್ನು ತಿಳಿಸಿದ್ದಾನೆ. ಚಡ್ಡಿಯೊಳಕ್ಕೆ ಹಾವಿರುವ ಬಗ್ಗೆ ಆತನ ಸ್ನೇಹಿತನಿಗೆ ಗೊತ್ತಾದ ಬಳಿಕ ಆತ ಉರಗ ರಕ್ಷಕರಿಗೆ ಮಾಹಿತಿ ನೀಡಿದ್ದಾನೆ. ಬಳಿಕ, ಉರಗ ತಜ್ಞರು ಬಂದು ಹಾವು ಹಿಡಿದು ಆತನ ಜೀವ ಉಳಿಸಿದ್ದಾರೆ. ಉರಗ ತಜ್ಞ ಆ ಹಾವನ್ನು ಹೊರಗೆ ತೆಗೆದ ಬಳಿಕ ಅದು ನಾಗರಹಾವು ಎಂದು ತಿಳಿದುಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA