ಜನಾಂಗೀಯ ಹಿಂಸಾಚಾರದಲ್ಲಿ ಹೊತ್ತಿ ಉರಿಯುತ್ತಿರುವ ಮಣಿಪುರಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭೇಟಿ ನೀಡಿದ್ದು ಚುರಚಂದಪುರ ನಿರಾಶ್ರಿತರ ಶಿಬಿರಕ್ಕೆತೆರಳಿ ಅಲ್ಲಿನ ಮಕ್ಕಳೊಂದಿಗೆ ಊಟವನ್ನು ಮಾಡಿ ಕೆಲಕಾಲ ಅವರೊಂದಿಗೆ ಕಳೆದಿದ್ದಾರೆ.
ರಾಹುಲ್ ಗಾಂಧಿಯವರು ಎರಡು ದಿನಗಳ ಪ್ರವಾಸ ಕೈಗೊಂಡಿದ್ದು ಇಂದು ಮೊಯಿರಾಂಗ್ ಗೆ ತೆರಳಿದ ಅವರು, ಹಿಂಸಾಚಾರದಿಂದ ತೊಂದರೆಗೀಡಾದ ಸಂತ್ರಸ್ತರನ್ನು ಭೇಟಿ ಮಾಡಿ ಅವರ ಕುಟುಂಬಗಳಿಗೆ ಸಾಂತ್ವನ ಹೇಳಿದರು.
ಜನಾಂಗೀಯ ಹಿಂಸೆ ಹೆಚ್ಚಾಗುತ್ತಿದ್ದಂತೆ ಆ ಬಗ್ಗೆ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ ಅವರು, ಸದ್ಯ ಮಣಿಪುರಕ್ಕೆ ಚಿಕಿತ್ಸೆ ಬೇಕಿದೆ. ಅಲ್ಲಿ ಹಿಂಸೆ, ಹೋರಾಟಕ್ಕೆ ಬದಲಾಗಿ ಶಾಂತಿಗೆ ಮಾತ್ರ ಆದ್ಯತೆ ನೀಡಬೇಕಿದೆ ಎಂದು ಹೇಳಿದ್ದರು.ಇದೀಗ ಮಣಿಪುರದ ನನ್ನ ಎಲ್ಲಾ ಸಹೋದರ ಸಹೋದರಿಯರ ಅಳಲು ಕೇಳಲು ಬಂದಿದ್ದೇನೆ. ಎಲ್ಲ ಸಮುದಾಯಗಳ ಜನರು ಮನಃಸ್ಪೂರ್ವಕವಾಗಿ ಸ್ವಾಗತಿಸಿದ್ದಾರೆ, ಪ್ರೀತಿ ತೋರುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ನನ್ನ ಭೇಟಿ ತಡೆಯಲು ಯತ್ನಿಸುತ್ತಿರುವ ಸರ್ಕಾರ ನಡೆ ವಿಷಾಧನೀಯ ಎಂದು ರಾಹುಲ್ ಗಾಂದಿ ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


