ಬೆಳಗಾವಿ: ಇನ್ಸ್ಟಾಗ್ರಾಮ್ ನಲ್ಲಿ ಪತ್ನಿಗೆ ಅಶ್ಲೀಲ ಫೋಟೋ ಕಳುಹಿಸಿದ್ದ ಯುವಕನಿಗೆ ಹಾಸ್ಯನಟ ಸಂಜು ಬಸಯ್ಯ ತಕ್ಕಪಾಠ ಕಲಿಸಿದ್ದಾರೆ.
ಸಂಜು ಬಸಯ್ಯ ಅವರ ಪತ್ನಿ ನಟಿ ಪಲ್ಲವಿ ಸಂಜು ಬಸಯ್ಯ ಅವರಿಗೆ ವಿಜಯನಗರ ಮೂಲದ ಮನೋಜ್ ಎಂಬ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಯುವಕ ಇನ್ಸ್ಟಾಗ್ರಾಮ್ ಮೂಲಕ ಅಶ್ಲೀಲ ಸಂದೇಶ ಕಳುಹಿಸಿದ್ದ.
ಇದು ಗಮನಕ್ಕೆ ಬಂದ ತಕ್ಷಣವೇ ಸಂಜು ಬಸಯ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣವೇ ಪೊಲೀಸರು ಕಿಡಿಗೇಡಿ ಯುವಕನನ್ನು ಪತ್ತೆ ಮಾಡಿ ಠಾಣೆಗೆ ಕರೆತಂದು ಸರಿಯಾದ ಬುದ್ಧಿ ಕಲಿಸಿದ್ದಾರೆ. ಬಳಿಕ ಯುವಕನ ಭವಿಷ್ಯ ಹಾಳಾಗಬಾರದು ಎನ್ನುವ ಕಾರಣಕ್ಕೆ ಯುವಕನಿಗೆ ಬುದ್ಧಿ ಹೇಳಿ ಕಳುಹಿಸಿಕೊಟ್ಟಿದ್ದಾರೆ.
ಈ ಘಟನೆಯ ಬೆನ್ನಲ್ಲೇ ಕ್ಷಮೆ ಯಾಚಿಸಿದ ಆರೋಪಿ ಮನೋಜ್ ನಾನು ಬಹಳ ದಿವಸದಿಂದ ಇನ್ ಸ್ಟಾಗ್ರಾಂ ಬಳಸುತ್ತಿದ್ದೆ. ಪಲ್ಲು ಸಂಜು ಅಫಿಷಿಯಲ್ ಖಾತೆಗೆ ಕೆಟ್ಟ ಕಾಮೆಂಟ್ ಹಾಗೂ ಅಶ್ಲೀಲ ವಿಡಿಯೋ ಕಳುಹಿಸಿದ್ದೆ. ಈ ಬಗ್ಗೆ ಸಂಜು ಬಸಯ್ಯ ಅವರು ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ನನ್ನನ್ನ ಕರೆಸಿ, ಶಿಕ್ಷೆ ಕೊಟ್ಟಿದ್ದಾರೆ. ನನಗೆ ನನ್ನ ತಪ್ಪಿನ ಅರಿವಾಗಿದೆ. ನಾನು ಮಾಡಿದಂತೆ ಇನ್ಯಾರೂ ಈ ರೀತಿ ಮಾಡಬೇಡಿ. ಎಲ್ಲರಲ್ಲೂ ಕ್ಷಮೆ ಕೇಳ್ತೀನಿ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC