ಪೊಲೀಸ್ ಪರೇಡ್ ನಲ್ಲಿ ಅಥವಾ ಗೌರವ ವಂದನೆ ನಡೆಯುವಾಗ ಹಿಂದಿಯಲ್ಲಿ ಕೇಳಿಬರುತ್ತಿದ್ದ ಸಾವಧಾನ್ ವಿಶ್ರಾಮ್ ಎಂಬ ಕಮಾಂಡ್ ಗಳನ್ನು ಇನ್ಮುಂದೆ ಕನ್ನಡದಲ್ಲೇ ನೀಡಲು ನಗರ ಪೊಲೀಸರು ಮುಂದಾಗಿದ್ದಾರೆ. ಹಿಂದಿ ಬದಲಿಗೆ ಕನ್ನಡದಲ್ಲಿ ಕಮಾಂಡ್ ನೀಡುವ ಪದ್ಧತಿಗೆ
ನಾಂದಿ ಹಾಡಿದ್ದಾರೆ.
ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಪೊಲೀಸ್ ಸಿಬ್ಬಂದಿ ಕನ್ನಡದಲ್ಲೇ ಕಮಾಂಡ್ ನೀಡಲಾಗುತ್ತಿದೆ. ಇದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ಯವಾಗುತ್ತಿದೆ.


