ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪದಕ ವಿಜೇತ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ಪೂಜಾ ಸಿಹಾಗ್ ಮತ್ತು ಪೂಜಾ ಗೆಹ್ಲೋಟ್ ಅವರನ್ನು ದೆಹಲಿಯ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.
ರಾಷ್ಟ್ರ ರಾಜಧಾನಿ ವಿಮಾನ ನಿಲ್ದಾಣದ ಹೊರಗೆ ಬೃಹತ್ ಜನಸಮೂಹ ಜಮಾಯಿಸಿ ಪದಕ ವಿಜೇತರನ್ನು ಸ್ವಾಗತಿಸಿ ಗೆಲುವಿಗೆ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಸ್ತಿಪಟು ಸಾಕ್ಷಿ ಮಲಿಕ್, ರಾಷ್ಟ್ರದ ಬೆಂಬಲ ಮತ್ತು ಪ್ರೀತಿಗೆ ಧನ್ಯವಾದ ಅರ್ಪಿಸಿದ್ದಾರೆ.
“ಒಲಿಂಪಿಕ್ಸ್ ನಲ್ಲಿ ಮೊದಲ ಪದಕವಾಗಿರುವುದರಿಂದ ಸಂತೋಷವಾಗಿದೆ. ಬೆಂಬಲ ಮತ್ತು ಪ್ರೀತಿ ನೀಡಿದ ಭಾರತಕ್ಕೆ ಧನ್ಯವಾದ ತಿಳಿಸಲು ಬಯಸುತ್ತೇನೆ ಎಂದಿದ್ದಾರೆ.
ಕಂಚಿನ ಪದಕ ವಿಜೇತೆ ಪೂಜಾ ಸಿಹಾಗ್ , ಪದಕದ ಶ್ರೇಯವನ್ನು ತರಬೇತುದಾರರಿಗೆ ಅರ್ಪಿಸುವುದಾಗಿ ಹೇಳಿದ ಅವರು ಪದಕದೊಂದಿಗೆ ಮರಳಿ ಮನೆಗೆ ಬಂದಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.
ಕಂಚಿನ ಪದಕ ವಿಜೇತೆ ಪೂಜಾ ಗೆಹ್ಲೋಟ್ ಅವರು ತಮ್ಮ ಸಂತೋಷದ ಭಾವನೆ ವ್ಯಕ್ತಪಡಿಸಿ ದೇಶದ ಜನರಿಗೆ ಧನ್ಯವಾದ ಹೇಳಿದ್ದು ದೇಶಕ್ಕಾಗಿ ಪದಕ ಗೆಲ್ಲುವುದು ಹೆಮ್ಮೆಯ ಸಂಗತಿ ಎಂದಿದ್ದಾರೆ.
ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ ೨೦೨೨ರಲ್ಲಿ ಭಾರತ ೨೨ ಚಿನ್ನ, ೧೫ ಬೆಳ್ಳಿ ಮತ್ತು ೨೩ ಕಂಚಿನ ಪದಕಗಳೊಂದಿಗೆ ಒಟ್ಟು ೬೧ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ೪ನೇ ಸ್ಥಾನ ಗಳಿಸಿತು.
ಕಾಮನ್‌ವೆಲ್ತ್ ಗೇಮ್ಸ್ ಬರ್ಮಿಂಗ್‌ಹ್ಯಾಮ್‌ನ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಅದ್ದೂರಿ ಸಮಾರೋಪ ಸಮಾರಂಭದೊಂದಿಗೆ ಕೊನೆಗೊಂಡಿದೆ.
ಆಸ್ಟ್ರೇಲಿಯಾದಲ್ಲಿ ಕ್ರೀಡಾಕೂಟ:
ಕಾಮನ್ ವೆಲ್ತ್ ಕ್ರೀಡಾಕೂಟದ ಧ್ವಜವನ್ನು ವಿಕ್ಟೋರಿಯಾ ರಾಜ್ಯಪಾಲರಿಗೆ ಹಸ್ತಾಂತರ ಮಾಡಲಾಯಿತು.
ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ೨೦೨೬ ರಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದ ಮುಂದಿನ ಆತಿಥ್ಯ ವಹಿಸಲಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz