2024 ರ ಲೋಕಸಭಾ ಚುನಾವಣೆಗೆ ಇನ್ನು 11 ತಿಂಗಳು ಬಾಕಿಯಿದ್ದು, ಈಗಿನಿಂದಲೇ ಸಕಲ ತಯಾರಿಗಳು ನಡೆಯುತ್ತಿದೆ.
ಇತ್ತ ರಾಜ್ಯದಲ್ಲಿ 28 ಕ್ಷೇತ್ರಗಳಿದ್ದು, ಅದರಲ್ಲಿ 25 ಮಂದಿ ಬಿಜೆಪಿಯ ಸಂಸದರುಗಳು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಆದ್ರೆ ಇದೆಲ್ಲದರ ಮಧ್ಯೆ ಸದ್ಯ, ಡಿ.ವಿ. ಸದಾನಂದಗೌಡ ಪ್ರತಿನಿಧಿಸುವ ಬೆಂಗಳೂರು ಉತ್ತರ ಕ್ಷೇತ್ರದ ಮೇಲೆ ಸುಮಾರು ಅರ್ಧ ಡಜನ್ ಅಭ್ಯರ್ಥಿಗಳು ಕಣ್ಣಿಟ್ಟಿದ್ದಾರೆ ಎಂಬ ಮಾಹಿತಿ ಬಿಜೆಪಿ ವಲಯದಿಂದಲೇ ಕೇಳಿ ಬಂದಿದೆ.
ಹಾಗಾದ್ರೆ, ಯಾವೆಲ್ಲಾ ನಾಯಕರುಗಳು ಬೆಂಗಳೂರು ಉತ್ತರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎಂಬುದನ್ನು ನೋಡುವುದಾದ್ರೆ, ಡಿ. ವಿ. ಸದಾನಂದಗೌಡರನ್ನು ಹೊರತುಪಡಿಸಿ, ಸಂಸದರಾದ ಶೋಭಾ ಕರಂದ್ಲಾಜೆ, ಸುಮಲತಾ ಅಂಬರೀಶ್, ಮಾಜಿ ಸಚಿವ ಡಾ. ಕೆ ಸುಧಾಕರ್, ಸಿ. ಟಿ. ರವಿ, ಈಗ ಸಾರ್ವತ್ರಿಕ ವಿಧಾನಸಭೆಗೆ ಸ್ಪರ್ಧಿಸಿ ಪರಾಭವಗೊಂಡಿರುವ ತಮ್ಮೇಶ್ ಗೌಡ ಹಾಗೂ ಟಿಕೆಟ್ ವಂಚಿತ ಮುನೀಂದ್ರ ಕುಮಾರ್ ಕ್ಷೇತ್ರದ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


