ತುಮಕೂರು: ಕೊಪ್ಪಳ, ಬಾದಾಮಿ ಮತ್ತು ಪುತ್ತೂರಿನಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಸೂಕ್ತ ಜಾಗವನ್ನು ಕಾಂಗ್ರೆಸ್ ಭವನ ಟ್ರಸ್ಟ್ ಗೆ ಮಂಜೂರು ಮಾಡಲು ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಆದರೆ ತುಮಕೂರಿನಲ್ಲಿ ಕಾಂಗ್ರೆಸ್ ಭವನ ಜಾಗ ವಿವಾದ ಮುಂದುವರಿದಿದೆ.
ನಿಯಮ ಗಾಳಿಗೆ ತೂರಿ 2 ಎಕರೆ ಜಮೀನು ಮಂಜೂರು ಆರೋಪ ಕೇಳಿಬಂದಿದ್ದು, ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಇಡಿ ಅಧಿಕಾರಿಗಳಿಗೆ ಸಾಮಾಜಿಕ ಹೋರಾಟಗಾರ ಬಸವರಾಜು ದೂರು ನೀಡಿದ್ದಾರೆ.
ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇರುವ ಮರುಳೂರು ದಿಣ್ಣೆಯಲ್ಲಿರುವ 87/1 ಮತ್ತು 87/2 ಸರ್ವೆನಂ ಎರಡು ಎಕರೆ ವಿವಾದಿತ ಜಾಗ ಕಾಂಗ್ರೆಸ್ ಭವನ ಟ್ರಸ್ಟ್ ಗೆ ವಿವಾದಿತ ಜಮೀನು ಪರಭಾರೆ ಮಾಡಲಾಗಿದೆ.
ಸಿಎಂ ಸಿದ್ದರಾಮಯ್ಯ, ಸಚಿವರಾದ ಜಿ.ಪರಮೇಶ್ವರ್, ಭೈರತಿ ಸುರೇಶ್, ಸಬ್ ರಿಜಿಸ್ಟ್ರಾರ್ ನಂಜೇಶ್, ಪಾಲಿಕೆ ಕಮಿಷನರ್ ಅಶ್ವಿಜಾ ವಿರುದ್ಧ ಸಾಮಾಜಿಕ ಹೋರಾಟಗಾರ ಬಸವರಾಜು ದೂರು ನೀಡಿದ್ದಾರೆ.
25 ಕೋಟಿ ರೂ ಮೌಲ್ಯದ 2 ಎಕರೆ ಜಮೀನು 17 ಲಕ್ಷ ರೂ.ಗೆ ಪರಭಾರೆ ಮಾಡಲಾಗಿದೆ. ಆ ಮೂಲಕ ಜಮೀನು ಪರಭಾರೆಯಲ್ಲಿ ಸರ್ಕಾರದಿಂದ ನಿಯಮ ಉಲ್ಲಂಘನೆ ಆರೋಪ ಕೇಳಿಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC