‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾಗೆ ಟಿಕೆಟ್ ಬುಕಿಂಗ್ ಆರಂಭ ಆಗಿದೆ. ವಿಶ್ವಾದ್ಯಂತ ಸಿನಿಮಾ ಜೂನ್ 27ರಂದು ರಿಲೀಸ್ ಆಗಲಿದೆ. ಈ ಮಧ್ಯೆ ಪ್ರಭಾಸ್ ಅಭಿಮಾನಿಗಳು ಸಖತ್ ಕನ್ ಫ್ಯೂಸ್ ಮಾಡಿಕೊಂಡಿದ್ದಾರೆ. ಅದ್ಯಾವ ಮಟ್ಟಿಗೆ ಎಂದರೆ 2019ರಲ್ಲಿ ರಿಲೀಸ್ ಆದ ‘ಕಲ್ಕಿ’ ಚಿತ್ರಕ್ಕೆ ಟಿಕೆಟ್ ಬುಕ್ ಮಾಡಿದ್ದಾರೆ. ಈ ಸಿನಿಮಾ ರೀ–ರಿಲೀಸ್ ಆಗಿದ್ದು ಆರು ಶೋಗಳು ಹೌಸ್ ಫುಲ್ ಆಗಿವೆ.
ತೆಲುಗು ನಟ ರಾಜಶೇಖರ್ ನಟನೆಯ ‘ಕಲ್ಕಿ’ ಸಿನಿಮಾ 2019ರಲ್ಲಿ ರಿಲೀಸ್ ಆಗಿತ್ತು. ಈ ಚಿತ್ರದ ಟಿಕೆಟ್ ನ ಫ್ಯಾನ್ಸ್ ಬುಕ್ ಮಾಡಿದ್ದಾರೆ. ಆ ಬಳಿಕ ಅವರಿಗೆ ತಪ್ಪಿನ ಅರಿವಾಗಿದೆ. ‘ಕಲ್ಕಿ 2898 ಎಡಿ’ ಸಿನಿಮಾ ರಿಲೀಸ್ ಆಗುತ್ತಿದ್ದು, ಇದರಿಂದ ಲಾಭ ಮಾಡಿಕೊಳ್ಳಲು ರಾಜಶೇಖರ್ ಸಿನಿಮಾ ತಂಡದವರು ಮುಂದಾದರೇ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಪ್ರಭಾಸ್ ಫ್ಯಾನ್ಸ್ ಚಿತ್ರತಂಡವನ್ನು ಶಪಿಸುತ್ತಿದ್ದಾರೆ.
ಸಾಮಾನ್ಯವಾಗಿ ಒಂದೇ ಹೆಸರಿನ ಸಿನಿಮಾಗಳು ರಿಲೀಸ್ ಆದರೆ ಜನರಿಗೆ ಗೊಂದಲ ಉಂಟಾಗುತ್ತದೆ. ಇದಕ್ಕಾಗಿಯೇ ‘ಕಲ್ಕಿ’ ತಂಡದವರು ಈ ರೀತಿ ಮಾಡಿದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಇದರಲ್ಲಿ ತಮ್ಮ ಕೈವಾಡ ಇಲ್ಲ ಎಂದು ರಾಜಶೇಖರ್ ಅವರು ಟ್ವೀಟ್ ಮಾಡಿದ್ದಾರೆ. ‘ನನಗೂ ಇದಕ್ಕೂ ಸಂಬಂಧವಿಲ್ಲ’ ಎಂದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA