ಬೆಳಗಾವಿ: ಕಾಂಗ್ರೆಸ್ ಮುಖಂಡ ಹಾಗೂ ಕಾಂಗ್ರೆಸ್ ಪಕ್ಷದ ದಕ್ಷಿಣ ಮತಕ್ಷೇತ್ರದ ಆಕಾಂಕ್ಷಿ ಎಸ್.ಎಂ ಬೆಳವಟ್ಕರ್ ಯಳ್ಳೂರ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಗ್ರಾಮದ ಅನೇಕ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತಾ ಪ್ರಮುಖವಾಗಿ ಯಳ್ಳೂರ ಗ್ರಾಮದಲ್ಲಿ ಹೊಸದಾಗಿ ರಸ್ತೆಗಳ ನಿರ್ಮಾಣ ವಾಗುತ್ತಿಲ್ಲ ಯಾಕೆ ? ಕ್ಷೇತ್ರದಲ್ಲಿ ಅನೇಕ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣವಾಗುತ್ತಿರುವುದು ನಾವು ನೋಡ್ತಾ ಇದ್ದೇವೆ. ಎಂದರು.
ವಡಗಾಂವ ನಿಂದ ಗ್ರಾಮಕ್ಕೆ ಬರುವ ರಸ್ತೆಯ ಸ್ಥಿತಿ ನಿಮ್ಮೆಲ್ಲರಿಗೂ ಗೊತ್ತಿರುವಂತೆ ಅನಗೋಳ ದಲ್ಲಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣಗೊಳ್ಳುತ್ತಿರುವುದು ನಿಮಗೆ ಗೊತ್ತಿರುವ ವಿಷಯ. ಬೆಳಗಾವಿ ಸ್ಮಾರ್ಟ್ ಸಿಟ ಎಂದು ಪ್ರಸಿದ್ಧಿ ಪಡೆಯುತ್ತಾ ಇದೆ ಆದರೆ, ಈ ಎಲ್ಲಾ ವಿಷಯಗಳನ್ನು ನಾವು ಗಮನಿಸಿದರೆ ಸ್ಮಾರ್ಟ್ ಸಿಟಿ ಅನ್ನುವಂತ ನಗರಕ್ಕೆ ಇದು ಶೋಭೆ ತರುವಂತದ್ದಲ್ಲ ಎಂದರು.
ಗ್ರಾಮಗಳಲ್ಲಿ 8 ರಿಂದ10 ದಿನಗಳ ನಂತರ ನೀರು ಪೂರೈಕೆ ಆಗ್ತಾ ಇದೆ .ಶಾಸಕರು ಭ್ರಮೆಯಲ್ಲಿ, ಇದ್ದಾರೆ ಈ ಕಡೆ ಗ್ರಾಮಸ್ಥರ ಆಸ್ತಿ ಹೊಲಗದ್ದೆಗಳನ್ನು ಸಂರಕ್ಷಿಸಬೇಕು ಅಂತ ಪರಿಸ್ಥಿತಿ ನಿರ್ಮಾಣ ಆಗಿದೆ ಸರ್ಕಾರಿ ಆಧೀನದಲ್ಲಿರುವಂತಹ ಗ್ರಾಮ ಪಂಚಾಯತ್ ಅಧೀನದಲ್ಲಿರುವಂತ ಜಮೀನುಗಳನ್ನು ಶಾಸಕರಿಂದ ಸಂರಕ್ಷಿಸುವಂತಹ ಜವಾಬ್ದಾರಿ ನಮ್ಮೆಲ್ಲರದ್ದು ಎಂದು ಹೇಳಬಯಸುತ್ತೇನೆ ಎಂದರು.
ನಮ್ಮಲ್ಲಿ ಈ ಕ್ಷೇತ್ರಕ್ಕೆ ನಾಲ್ಕು ಜನ ಆಕಾಂಕ್ಷಿಗಳು ಇದ್ದೆವೆ. ಅದರಲ್ಲಿ ಯಾರಿಗಾದರೂ ಟಿಕೆಟ್ ನೀಡಲಿ ನಾವು ಒಗ್ಗಟ್ಟಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ, ನಮ್ಮ ನಾಯಕರಾದ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ಚೆನ್ನರಾಜ್ ಹಟ್ಟಿಹಳಿ ಇವರ ನೇತೃತ್ವದಲ್ಲಿ ನಾವು ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸುತ್ತೇವೆ ಹಾಗೂ ಗೆಲ್ಲುತ್ತೇವೆ ಎಂದರು.
ಈ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಮಾಡಬೇಕಾಗಿದೆ ಎಂದು ಕಾರ್ಯಕರ್ತರ ಸಭೆಯಲ್ಲಿ ಎಸ್ಎಂ ಬೆಳವಟ್ಕರ್ ಮಾತನಾಡಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


