ಬೆಳಗಾವಿ: ಕಿತ್ತೂರು ಕ್ಷೇತ್ರ ದಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆ ಬೆನ್ನಲ್ಲೆ ಅಸಮಾಧಾನ ಭುಗಿಲೆದಿದ್ದು, ಕಿತ್ತೂರು ಕ್ಷೇತ್ರಕ್ಕೆ ಬಾಬಾಸಾಹೇಬ್ ಪಾಟೀಲ್‍ಗೆ ಟಿಕೆಟ್ ಹಂಚಿಕೆಗೆ ಕ್ಷೇತ್ರದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಲಾಬಿಗೆ ಮಣಿದು ಕಿತ್ತೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಹಂಚಿಕೆ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿದೆ. ಟಿಕೆಟ್ ಹಂಚಿಕೆ ಬೆನ್ನಲ್ಲೆ ಕಾಂಗ್ರೆಸ್ ಮುಖಂಡ, ಸತೀಶ್ ಜಾರಕಿಹೊಳಿ ಆಪ್ತ ಹಬೀಬ್ ಶಿಲೇದಾರ್ ಅಸಮಾಧಾನ ಹೊರಹಾಕಿದ್ದು, ಹೈಕಮಾಂಡ್ ಮಾಡಿದ ಎಡುವಟ್ಟು ಕ್ಷೇತ್ರದಲ್ಲಿ ಸೋಲು ಅನುಭವಿಸುತ್ತದೆ ಎಂದು ಹೇಳಿದ್ದಾರೆ.
ಕಿತ್ತೂರು ಕ್ಷೇತ್ರದಲ್ಲಿ ಬಂಡಾಯದ ಮುನ್ಸೂಚನೆಯನ್ನು ನೀಡಿರುವ ಮುಖಂಡ ಶಿಲೇದಾರ್ , ಪರೋಕ್ಷವಾಗಿ ಲಕ್ಷ್ಮಿ ಹೆಬ್ಬಾಳ್ಕರ್, ವಿನಯ ಕುಲಕರ್ಣಿ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡ ಬಾಬಾಸಾಹೇಬ್ ಪಾಟೀಲ್‍ಗೆ ಬಂಡಾಯದ ಭೀತಿ ಎದುರಾಗಿದ್ದು ಕಿತ್ತೂರಲ್ಲಿ ಡಿ.ಬಿ ಇನಾಮದಾರ್ ಸೊಸೆ ಲಕ್ಷ್ಮಿ ಇನಾಮದಾರ್, ಹಬೀಬ್ ಶಿಲೇದಾರ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದರು.ಟಿಕೆಟ್ ಕೈ ತಪ್ಪಿದಕ್ಕೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆಗಿ ಕಣಕ್ಕಿಳಿಯಲು ಲಕ್ಷ್ಮಿ, ಹಬೀಬ್ ನಿರ್ಧಾರ ಮಾಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


