ಬೆಳಗಾವಿ: ಸಿಡಿ ಪ್ರಕರಣಕ್ಕೆ ಡಿ.ಕೆ ಶಿವಕುಮಾರ ಸೂತ್ರಧಾರಿಯಾಗಿದ್ದು ಇದು ಇಬ್ಬರ ನಡುವಿನ ವೈಯಕ್ತಿಕ ಯುದ್ಧವಾಗಿದೆ ಕೂಡಲೆ ಡಿಕೇಶಿ ಸೇರಿದಂತೆ ನರೇಶ, ಶ್ರವಣ, ಪರಶಿವಮೂರ್ತಿ, ಮಂಡ್ಯ ಮೂಲದ ಇಬ್ಬರನ್ನು ಹಾಗೂ ಸಿಡಿ ಲೇಡಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಬೇಕೆಂದು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಆಗ್ರಹಿಸಿದರು.
ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜಕಾರಣದಲ್ಲಿ ಆತ ಇಂತಹ ಷಡ್ಯಂತ್ರ ಮಾಡಬಾರದಿತ್ತು. ನೂರಾರು ದಾಖಲೆಗಳು ನಮ್ಮ ಬಳಿ ಆತನ ವಿರುದ್ಧ ಇವೆ. ನಾನು ಸೂಕ್ತ ಪ್ರಾಧಿಕಾರದ ಮುಂದೆ ಡಿಕೆಶಿ ವಿರುದ್ಧ ದಾಖಲಾತಿಗಳನ್ನು ಬಿಡುಗಡೆ ಮಾಡಿಯೇ ಮಾಡುತ್ತೇನೆ ಎಙದು ರಮೇಶ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಯುವತಿಯೊಬ್ಬಳನ್ನು ಮುಂದಿಟ್ಟುಕೊಂಡು ಡಿ. ಕೆ. ಶಿವಕುಮಾರ ಅವರು ನನ್ನ ತೇಜೋವಧೆ ಮಾಡಿದ್ದಾರೆ. ನಾನು ಮಾಡದ ಕೃತ್ಯವನ್ನು ಕಾನೂನಿನ ಕಾರಣಕ್ಕಾಗಿ ನಾನು ಒಪ್ಪಿಕೊಂಡಿದ್ದೆನಷ್ಟೇ. ನನ್ನ ಸಿಡಿ ಸಿದ್ಧಪಡಿಸಲು ಡಿ.ಕೆ.ಶಿವಕುಮಾರ ಸೂತ್ರಧಾರ. ನಾಲ್ವತ್ತು ಕೋಟಿ ರೂ. ಖರ್ಚು ಮಾಡಿ ನನಗೆ ಸಿಡಿಯಲ್ಲಿ ಸಿಲುಕಿಸಿದ್ದಾನೆ. ಅವನ ರಾಜಕೀಯ ಜೀವನ ಮುಗಿಸುವವರೆಗೂ ನಾನು ಸುಮ್ಮನೆ ಇರುವುದಿಲ್ಲ ಎಂದು ಶಪಥ ಮಾಡಿದರು.
ರಾಜ್ಯ ಕಾಂಗ್ರೆಸ್ ಹಾಳಾಗಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಗ್ರಾಮೀಣ ಮತಕ್ಷೇತ್ರದ ಶಾಸಕಿ ವಿಷಕನ್ಯೆ ಎಂದು ವಾಗ್ದಾಳಿ ನಡೆಸಿದರು.ಮುಂಬರುವ ಚುನಾವಣೆಯ ಜಾತಿ ಸಂಘರ್ಷವಾದರೆ ಅದು ಬೆಳಗಾವಿ ಗ್ರಾಮೀಣ ಶಾಸಕಿ, ಡಿ.ಕೆ.ಶಿವಕುಮಾರ ಕಾರಣ. ಚೆನ್ನಮ್ಮ ವಿಚಾರದಲ್ಲಿ ನಾನು ಮಾತನಾಡಿದ್ದು ಬೇರೆ. ಅದನ್ನು ಎಡಿಟ್ ಮಾಡಿದ್ದರು ಎಂದು ಪರೋಕ್ಷವಾಗಿ ಹೆಬ್ಬಾಳ್ಕರ್ ವಿರುದ್ಧ ಹರಿಹಾಯ್ದರು.
ಸಿಡಿ ವಿಚಾರದಲ್ಲಿ ನನ್ನ ಬಳಿ ನೂರೆಂಟು ದಾಖಲೆಗಳಿವೆ. ಸಿಡಿ ವಿಚಾರದಲ್ಲಿ ನಾನು ಸಿಬಿಐ ತನಿಖಾಧಿಕಾರಿಗಳಿಗೆ ಕೊಡುವೆ. ಮಿಸ್ಟರ್ ಡಿ.ಕೆ.ಶಿವಕುಮಾರ ಅವರು 2 ಮಾ.2021 ರಂದು ಕೆಲವೊಂದು ವಿಷಯ ಹೇಳಿದ್ದೆ. ನಾನು ತಪ್ಪು ಮಾಡದಿದ್ದರೂ ಅನಿವಾರ್ಯ ಕಾರಣದಿಂದ ಒಪ್ಪಿಕೊಳ್ಳಬೇಕಾಯಿತು ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


