ರಾಜ್ಯ ಸರ್ಕಾರದ ವಿರುದ್ಧ ಟೆಂಡರ್ ಗೋಲ್ಮಾಲ್ ಆರೋಪ ಮಾಡಿದ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿರುವ ಬಿಎಸ್ ಯಡಿಯೂರಪ್ಪ, ಕಾಂಗ್ರೆಸ್ ನಾಯಕರು ಹುಚ್ಚರು,ತಲೆ ತಿರುಕರು. ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ಬಿಎಸ್ ಯಡಿಯೂರಪ್ಪ, ತಲೆ ಸರಿ ಇದ್ದವರು ಈ ರೀತಿ ಮಾತನಾಡೋದಿಲ್ಲ, ಅಧಿಕಾರದ ಭ್ರಮೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆ ಅಂತಾ ಕನಸು ಕಾಣ್ತಿದ್ದಾರೆ. ಕಾಂಗ್ರೆಸ್ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಸದನದಲ್ಲಿ ಮಾತನಾಡಲಿ ತಕ್ಕ ಉತ್ತರ ಕೊಡುತ್ತೇವೆ ಎಂದರು.
ವಿಪಕ್ಷ ನಾಯಕರಾಗಿ ಈ ರೀತಿಯ ಹೇಳಿಕೆ ಸರಿಯಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆ ರೀತಿಯಾಗಿ ನಡೆದುಕೊಳ್ಳಬಹುದಾ..? ಕಾಂಗ್ರೆಸ್ ಪಕ್ಷದವರಿಗೆ ಕೇವಲ ಚುನಾವಣೆಯೇ ಮುಖ್ಯಾವಾಯಿತಾ..? ಆರೋಪ ಮಾಡಿ ಹುಚ್ಚು ಹುಚ್ಚಾಗಿ ಆಡೋದು ಜಾಸ್ತಿಯಾಗಿದೆ. ಡಿ.ಕೆ ಶಿವಕುಮಾರ್ ಈ ಮಟ್ಟಕ್ಕೆ ಇಳಿದಿರುವುದು ನನಗೆ ತುಂಬಾ ನೋವಾಗಿದೆ ಇನ್ನಾದ್ರೂ ಜವಾಬ್ದಾರಿಯುತ ಮಾತನಾಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


