ಬೆಂಗಳೂರು: ಕಾಂಗ್ರೆಸ್ ನದು ಶೇ.100ರಷ್ಟು ಕಮೀಷನ್ ಸರ್ಕಾರ ಎಂದು ಮಾಜಿ ಸಚಿವ, ಶಾಸಕ ಅಶ್ವಥ್ ನಾರಾಯಣ ಗಂಭೀರ ಆರೋಪ ಮಾಡಿದ್ದಾರೆ.
ಈಗಿನದು 60% ಕಮೀಷನ್ ಸರ್ಕಾರ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ ಬೆನ್ನಲ್ಲೇ ಶಾಸಕ ಅಶ್ವಥ್ ನಾರಾಯಣ ಈ ಗಂಭೀರ ಆರೋಪ ಮಾಡಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಸುಖಾಸುಮನೆ ಸರ್ಕಾರದ ವಿರುದ್ಧ ಆರೋಪ ಮಾಡಿಲ್ಲ. ಹಿಟ್ ಅಂಡ್ ರನ್ ಮಾಡಿಲ್ಲ. ಎಲ್ಲಾ ಇಲಾಖೆಗಳಲ್ಲೂ ವ್ಯವಸ್ಥಿತವಾಗಿ ಕಮಿಷನ್ ನಡೆಯುತ್ತಲೇ ಇದೆ. ಇದರಲ್ಲಿ ಸುಳ್ಳೇನಿಲ್ಲ. ವಿಧಾನಸೌಧದ ಕಂಬಗಳು ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಿಂದ ಕೂಡಿವೆ. ಇದಕ್ಕಿಂತ ಬೇರೆ ಸಾಕ್ಷಿ ಏನು ಬೇಕಾಗಿದೆ ಎಂದು ಪ್ರಶ್ನಿಸಿದರು.
ಈ ಸರ್ಕಾರ ಆರಂಭದಿಂದಲೂ ಹಗರಣಗಳ ಮೇಲೆ ಹಗರಣ ನಡೆಸುತ್ತಿದೆ. ಬರೀ ಭ್ರಷ್ಟಾಚಾರ ಆಪಾದನೆಯಲ್ಲ. ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ವಾಲೀಕಿ ನಿಗಮದಲ್ಲಿ 100% ಭ್ರಷ್ಟಾಚಾರ ಅವರೇ ಒಪ್ಪಿಕೊಂಡಿದ್ದಾರೆ. ಚಂದ್ರಶೇಖರ್ ಆತ್ಮಹತ್ಯೆಯಿಂದ ಈ ಪ್ರಕರಣ ಹೊರಗೆ ಬಂತು ಎಂದು ಹೇಳಿದರು.
ಪರಶುರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ? ಎಸ್ ಐ ಪೋಸ್ಟ್ ಗೆ ವರ್ಗಾವಣೆಗೆ 35 ಲಕ್ಷ , ಇದರಲ್ಲೂ ಸಾಕ್ಷ್ಯ ಇದೆಯಲ್ಲವೇ? ಮುಡಾದಲ್ಲೂ ಸಾಕ್ಷಿ ಇದೆ. ಗುತ್ತಿಗೆದಾರ ಸಚಿನ್ ಆತಹತ್ಯೆ ಪ್ರಕರಣದಲ್ಲೂ ಸಾಕ್ಷಿ ಇದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx