ಪಟ್ಟಣದ ದಬ್ಬೇಘಟ್ಟ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು ಪಡೆದಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾನೂನು ವಿಭಾಗದ ರಾಜ್ಯ ಉಪಾಧ್ಯಕ್ಷರಾದ ಪ್ರವೀಣ್ ಗೌಡ ರವರ ಮುಖಂಡತ್ವದಲ್ಲಿ ಪಟಾಕಿಯನ್ನು ಸಿಡಿಸಿ ಸಿಹಿ ಹಂಚುವ ಮುಖಾಂತರ ಸಂಭ್ರಮಾಚರಣೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಕೆ ಪಿ ಸಿ ಸಿ ಕಾನೂನು ವಿಭಾಗದ ರಾಜ್ಯ ಉಪಾಧ್ಯಕ್ಷ ಪ್ರವೀಣ್ ಗೌಡ ರವರು ಮಾತನಾಡಿ, ಈ ದಿನ ನಮ್ಮ ರಾಜ್ಯದಲ್ಲಿ ಸಾಮಾನ್ಯ ವರ್ಗದವರು, ದೀನ ದಲಿತರು, ಕಾರ್ಮಿಕರು ರೈತರು ಸಂತಸ ಪಡುವಂತಹ ಸುದಿನವಾಗಿದೆ ಎಂದರು.
ಎಲ್ಲರೂ ಈ ದಿನವನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾದಂತಹ ದಿನವಾಗಿದೆ , ನಮ್ಮ ಬಡವರ ಬಂಧು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷರು ಡಿ.ಕೆ.ಶಿವಕುಮಾರ್ ಚಾಣಾಕ್ಷರುಗಳ ನೇತೃತ್ವದಲ್ಲಿ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತವನ್ನು ಪಡೆದಿದ್ದು , ಸರ್ಕಾರವನ್ನು ರಚಿಸುವ ಸಂದರ್ಭವನ್ನು ನಿರ್ಮಿಸಿದ್ದಾರೆ, ದ್ವೇಷದ ರಾಜಕಾರಣವು ಹೋಗಿ ಪ್ರೀತಿಯ ರಾಜಕಾರಣವು ನಿರ್ಮಾಣವಾಗುವ ಸಮಯ ಒದಗಿ ಬಂದಿದೆ, ಸರ್ವ ಜನಾಂಗದ ಶಾಂತಿಯ ತೋಟ ಎಂಬ ಕುವೆಂಪುರವರ ವಾಣಿಯಂತೆ, ಈ ಸರ್ಕಾರವು ರಚನೆಯಾಗುತ್ತಿದೆ ಆದುದರಿಂದ ಈ ಸಂದರ್ಭದಲ್ಲಿ ಪಕ್ಷ ಗೆಲ್ಲಲು ದುಡಿದ ರಾಜ್ಯದ ಎಲ್ಲಾ ಮತದಾರ ಬಂಧುಗಳಿಗೆ ಅಭಿನಂದನೆಗಳು ಎಂದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ನೆಮ್ಮದಿ ಗ್ರಾಮದ ಮೂರ್ತಿ ಸಿ.ಎಸ್.ರವರು ಏನು 2023 ಮೇ 13 ಈ ದಿನವನ್ನು ಕರ್ನಾಟಕದ ಜನತೆ ಮನದಲ್ಲಿ ಅಚ್ಚಳಿಯದಂತೆ ಉಳಿಯುವ ದಿನವಾಗಿದೆ . ಬಡವರ ಬಂಧು ಪಕ್ಷ ಎಂದು ಏನು ಕರೆಯುತ್ತೇವೆ ಆ ಪಕ್ಷವು ಇಂದು ಸ್ಪಷ್ಟ ಬಹುಮತ ಪಡೆದು ಅಧಿಕಾರ ಚುಕ್ಕಾಣಿಯನ್ನು ಹಿಡಿಯುತ್ತಿದ್ದು. ಕೋಮುವಾದಿ ಪಕ್ಷಕ್ಕೆ ತಕ್ಕ ಪಾಠವನ್ನು ಕಲಿಸಲಿದೆ ಒಳ್ಳೆಯ ಆಡಳಿತವನ್ನು ಕೊಡಲಿದೆ ಎಂಬ ವಿಶ್ವಾಸವಿದೆ ,ಎಲ್ಲರಿಗೂ ಈ ವಿಜಯೋತ್ಸವದ ಶುಭಾಶಯಗಳು ಎಂದರು,
ಈ ಸಂಭ್ರಮಾಚರಣೆಯಲ್ಲಿ ಪಟ್ಟಣದ ರೇವಣ್ಣ, ವಿನಯ್ ,ಮಲ್ಲಾಘಟ್ಟ ಪುಟ್ಟಣ್ಣ ,ಕೋಳಘಟ್ಟ ಕೇಶವ್ ,ಆನೆಕೆರೆ ರಂಗಸ್ವಾಮಿ ,ಮಹಾಲಿಂಗಯ್ಯ, ವಿನೋದ್ ,ತುರುವೇಕೆರೆ ವಿನೋದ್ ಟಿ ಹೊಸಹಳ್ಳಿ, ನವೀನ್ ಮಾದಿಹಳ್ಳಿ, ವಕೀಲರಾದ ಗುಡ್ಡೇನಹಳ್ಳಿ ಮಂಜುನಾಥ್ ,ತುರುವೇಕೆರೆ ಗಿರೀಶ್, ಮಾಳೆ ರಘು ,ನಂದೀಶ್ ಮುಂತಾದವರು ಭಾಗವಹಿಸಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy