ತಿಪಟೂರು: ನಗರದ ತುಮಕೂರು ಜಿಲ್ಲಾ ಕೆಪಿಸಿಸಿ ವಾ ರೂಮ್ ಜಿಲ್ಲಾ ಸಂಚಾಲಕರಾಗಿರುವ ತಿಪಟೂರು ಟುಡ ಶಶಿಧರ್ ಕಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ತಿಪಟೂರು ಕ್ಷೇತ್ರ ಸಂಚಾರಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಶಿಧರ್, ಕ್ಷೇತ್ರದ ಜನರ ಸಮಸ್ಯೆಗಳಿಗೆ ಧ್ವನಿಯಾಗುವುದು, ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸುವುದು ಕ್ಷೇತ್ರ ಸಂಚಾರದ ಪ್ರಮುಖ ಉದ್ದೇಶ ಎಂದರು.
ಮುಂದಿನ ಎರಡು ತಿಂಗಳು ನಿರಂತರವಾಗಿ ಕ್ಷೇತ್ರ ಸಂಚರಿಸುತ್ತೇನೆ. ಜನರ ಕಷ್ಟಗಳನ್ನು ಅರಿತು ತಾಲೂಕಿನ ಸಮಸ್ಯೆ ಬಗ್ಗೆ ಅವರ ಧ್ವನಿ ಆಗುತ್ತೇನೆ. ಬಿಜೆಪಿ ಸರ್ಕಾರ 40% ಸರ್ಕಾರ ಎಂದು ಖ್ಯಾತಿ ಪಡೆದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಇದುವರೆಗೂ ನೀಡಿದ ಯಾವುದೇ ಆಶ್ವಾಸನೆಯನ್ನು ಜನರ ಸಮಸ್ಯೆಗಳನ್ನು ಈಡೇರಿಸಲಿಲ್ಲ. ಬೆಲೆ ಏರಿಕೆಯಿಂದ ಜನ ತತ್ತರಿಸಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಜನ ನಿತ್ಯ ಉಪಯೋಗಿಸುವ ಆಹಾರ ಪದಾರ್ಥಗಳ ಮೇಲೆ ಜಿಎಸ್ ಟಿ ವಿಧಿಸಲಾಗಿದೆ ಎಂದರು.
ಈ ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತ್ರೀ ಬಂಕ ಯೂತ್ ಕಾಂಗ್ರೆಸ್ ಮುಖಂಡ ಶರತ್ ಕಲ್ಲೇಗೌಡ ಪಾಳ್ಯ, ಮುಖಂಡರಾದ ಶ್ರೀಕಾಂತ್, ಕೆಲಹಟ್ಟಿ ಉಮಾ ಮಹೇಶ್, ಮಹಾಲಿಂಗಪ್ಪ ಮುಂತಾದ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು
ವರದಿ: ಆನಂದ್ ತಿಪಟೂರ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz