ಶಾಸಕ ಸುದೀಪ್ ರಾಯ್ ಬರ್ಮನ್ ಮತ್ತು ಕಾಂಗ್ರೇಸ್ ಪಕ್ಷದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸುಶಾಂತ ಚಕ್ರವರ್ತಿ ಸೇರಿದಂತೆ ಇತರೆ ನಾಲ್ವರು ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿರುವ ಘಟನೆ ಇಲ್ಲಿ ನಡೆದಿದೆ.
ಅಗರ್ತಲಾದ ರಾಣಿರ್ ಬಜಾರ್‍ನಲ್ಲಿ ಸ್ಥಳೀಯ ಕಾಂಗ್ರೆಸ್‍ಮುಖಂಡರು ರ್ಯಾಲಿ ಆಯೋಜಿಸಿದ್ದರು ಅಲಿಗೆ ಬರುವಾಗ ಶಾಸಕರು ಮುಖಂಡರ ಮೆಲೆ ದಾಳಿ ನಡೆಸಲಾಗಿದೆ. ಗಾಯಗೊಂಡಿರುವ ಶಾಸಕ ರಾಯ್ ಬರ್ಮನ್ ಮತ್ತು ಚಕ್ರವರ್ತಿ, ಮಹಿಳಾ ಘಟಕದ ನಾಯಕಿ ಸುಮನಾ ಸಹಾ ಅವರನ್ನು ಇಲ್ಲಿನ ಜಿಬಿಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.ದಾಳಿಯ ವೇಳೆ ಕನಿಷ್ಠ 12 ಕಾಂಗ್ರೇಸ್ ಮುಖಂಡರು ಮತ್ತು ಕಾರ್ಯಕರ್ತರು ಗಾಯಗೊಂಡಿದ್ದಾರೆ.
ಅನುಮತಿಯಿಲ್ಲದೆ ರ್ಯಾಲಿ ಆಯೋಜಿಸಲಾಗಿತ್ತು ಏಕಾಏಕಿ ನೂರಕ್ಕೂ ಹೆಚ್ಚು ಜನರ ಗುಂಪು ದಾಳಿ ನಡೆಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.ಇದೇ ವೇಳೆ ಹಲವೆಡೆ ಎಂಟು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.ಬಿಜೆಪಿ ವಿರುದ್ದ ಕಾಂಗ್ರೇಸ್ ನಾಯಕರು ಆರೋಪಿಸಿದ್ದಾರೆ.
ಕಾಂಗ್ರೇಸ್ ನ ಕಾನೂನು ಘಟಕವು ಪೊಲೀಸರಿಗೆ ದೂರು ನೀಡಿದೆ.
ವರದಿ: ಆಂಟೋನಿ ಬೇಗೂರು