ಬೆಂಗಳೂರು: ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ‘ಕಾಂಗ್ರೆಸ್ ವಿಷನ್ 2023’ ವೆಬ್ ಸೈಟ್ ಅನ್ನು ಗುರುವಾರ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಪಕ್ಷದ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ ಅವರು ಅನಾವರಣ ಮಾಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಪ್ರಚಾರ ಸಮಿತಿಯ ಉಪಾಧ್ಯಕ್ಷರಾದ ಪ್ರೋ. ರಾಧಾಕೃಷ್ಣ, ಮಧು ಬಂಗಾರಪ್ಪ, ಸಮಿತಿಯ ಸದಸ್ಯರಾದ ಹುಸೇನ್ ಹಾಗೂ ರಾಜು ಗೌಡ ಅವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪರಮೇಶ್ವರ್, ‘ನಾವು ಆಡಳಿತಕ್ಕೆ ಬಂದರೆ ಜನರಿಗೆ ಏನು ಕೊಡುತ್ತೇವೆ ಎಂಬ ಭರವಸೆಗಳನ್ನು ತಿಳಿಸುವುದು ಬಹಳ ಮುಖ್ಯ. ಆ ದೃಷ್ಟಿಯಲ್ಲಿ ಕಾಂಗ್ರೆಸ್ ಪಕ್ಷ ಪ್ರತಿ ಬಾರಿ ಚುನಾವಣೆಗೆ ಹೋಗುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳನ್ನು ಪ್ರಣಾಳಿಕೆಯಲ್ಲಿ ತಿಳಿಸುತ್ತದೆ. ನಾವು ಕೊಟ್ಟ ಭರವಸೆಗಳು ಈಡೇರಿಸುವ ಭರವಸೆಗಳು. ನಾವು ಕೊಡುವ ಭರವಸೆ ಸಂಪೂರ್ಣವಾಗಿ ಕಾರ್ಯಗತಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷ ವಿಭಿನ್ನವಾಗಿ ನಡೆದುಕೊಳ್ಳುತ್ತದೆ. 2013ರಲ್ಲಿ ಕಾಂಗ್ರೆಸ್ ಚುನಾವಣೆ ಎದುರಿಸುವ ಮುನ್ನ ರಾಜ್ಯದ ಜನತೆಗೆ 160 ಭರವಸೆಗಳನ್ನು ನೀಡಿದ್ದೆವು. ಆ ಭರವಸೆಗಳನ್ನು 2-3 ಹಂತದ ಭರವಸೆಗಳಾಗಿದ್ದೆವು. ಇದರಲ್ಲಿ ಕೆಲವು ಭರವಸೆಗಳು ಅಧಿಕಾರಕ್ಕೆ ಬಂದ ಮೊದಲ ವರ್ಷಗಳಲ್ಲಿ ಈಡೇರಿಸುವಂತಹ ಭರವಸೆಗಳು, ಅನ್ನಭಾಗ್ಯ ಯೋಜನೆ ಅವುಗಳಲ್ಲಿ ಒಂದು. ಇನ್ನು ದೀರ್ಘಾವಧಿ ಭರವಸೆಗಳಾದ ಕೈಗಾರಿಕೆ ಅಭಿವೃದ್ಧಿ, ವಿವಿಧ ಕ್ಷೇತ್ರಗಳ ಭರವಸೆಗಳಾಗಿದ್ದೆವು. ನಾವು ಈ ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಸಿ, ನುಡಿದಂತೆ ನಡೆದಿದ್ದೆವು ಎಂದರು.
ಈ ಪ್ರಣಾಳಿಕೆ ಎಂಬುದು ಕಾಂಗ್ರೆಸ್ ಪಾಲಿಗೆ ಬಹಳ ಪ್ರಮುಖವಾದುದು.. ಈಗ ನಾವು ಕಾಂಗ್ರೆಸ್ ವಿಷನ್ 2023 ವೆಬ್ ಸೈಟ್ ಅನಾವರಣ ಮಾಡಿದ್ದು, ಸ್ವಲ್ಪ ವಿಭಿನ್ನವಾಗಿ ಇರಬೇಕು ಎಂಬ ಉದ್ದೇಶದಿಂದ ಜನಸಮುದಾಯದ ಭಾವನೆ, ಸಮಸ್ಯೆಗಳನ್ನು ಅವರಿಂದಲೇ ತಿಳಿದುಕೊಂಡು ಅವುಗಳಿಗೆ ಪರಿಣಾಮಕಾರಿ ಪರಿಹಾರ ನೀಡುವ ಕಾರ್ಯಕ್ರಮ ರೂಪಿಸಲು ಅವಕಾಶ ಕಲ್ಪಿಸಲಾಗಿದೆ. ಜನರನ್ನು ಬೇರೆ ಬೇರೆ ರೀತಿಯಲ್ಲಿ ಸಂಪರ್ಕಿಸಲು ನಾವು ಉದ್ದೇಶಿಸಿದ್ದು, ಅದರಲ್ಲಿ ಈ ವೆಬ್ ಸೈಟ್ ಕೂಡ ಒಂದಾಗಿದೆ. ಈ ವೆಬ್ ಸೈಟ್ ನಲ್ಲಿ ಯಾರು ಬೇಕಾದರೂ ತಮ್ಮ ಸಲಹೆ ಸೂಚನೆ ನೀಡಬಹುದು. ಇನ್ನು ನಮಗೆ ಪತ್ರ ಬರೆಯಬಹುದು ಎಂದರು ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


