ಹುಬ್ಬಳ್ಳಿ: ಎಲ್ಲಿಯವರೆಗೆ ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ ಅವರ ನಾಯಕತ್ವವನ್ನು ನೆಚ್ಚಿಕೊಂಡಿರುತ್ತದಯೋ, ಅಲ್ಲಿಯವರೆಗೆ ಆ ಪಕ್ಷ ಉದ್ಧಾರವಾಗುವುದಿಲ್ಲ ಎಂದು ಬೆಳಗಾವಿ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಹಿನ್ನೆಲೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್, ದೆಹಲಿ ಜನ ಬಿಜೆಪಿಗೆ ಆಶೀರ್ವಾದ ಮಾಡಿರುವುದು ಸ್ಪಷ್ಟವಾಗಿದೆ ಎಂದರು.
ದೆಹಲಿಯ ಜನತೆ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದಿಂದ ರೋಸಿ ಹೋಗಿದ್ದರು. ಕೇವಲ ಬಾಯಿ ಮಾತಿನಲ್ಲಿ ತಮ್ಮದು ವಿನೂತನ ರಾಜಕಾರಣ ಎಂದು ಹೇಳುತ್ತಿದ್ದ ಆಪ್ ನಾಯಕರು, ಲಿಕ್ಕರ್ ಹಗರಣ, ಅರಮನೆಯಂತಹ ಮನೆ ನಿರ್ಮಿಸಿಕೊಳ್ಳುವುದಲ್ಲಿ ನಿರತರಾಗಿದ್ದರು. ಇದನ್ನೆಲ್ಲಾ ಗಮನಿಸಿದ ದೆಹಲಿ ಮತದಾರ, ಈ ಬಾರಿ ಬಿಜೆಪಿಗೆ ಆಶೀರ್ವಾದ ಮಾಡಿದ್ದಾನೆ ಎಂದು ಅವರು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4


