ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಚಿಕ್ಕಜಾಲ ಬಳಿಯ ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಕಾರು ಪರಿಶೀಲನೆ ಮಾಡಲು ಹೋಗಿದ್ದ ಕಾನ್ಸ್’ಟೇಬಲ್ ಸಾವನ್ನಪ್ಪಿದ್ದು,ಇನ್ಸಪೆಕ್ಟರ್ ಸಾವಿನಂಚಿನಿಂದ ಪಾರಾಗಿದ್ದಾರೆ.
ನಿನ್ನೆ(ಜುಲೈ 02) ರಾತ್ರಿ ಅಸೆಂಟ್ ಕಾರಿನಲ್ಲಿ ಮೂವರು ಯುವಕರು ಹಾಗೂ ಮೂವರು ಯುವತಿಯರಿದ್ದು, ರಾತ್ರಿಯೆಲ್ಲ ಪಾರ್ಟಿ ಮಾಡಿಕೊಂಡು ಮುಂಜಾನೆ ನಂದಿಬೆಟ್ಟಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಕೆಟ್ಟು ನಿಂತಿದ್ದ ಕಾರಿನ ಚಾಲಕನನ್ನು ವಿಚಾರಿಸಲು ಹೋಗಿದ್ದ ಕಾನ್ಸ್’ಟೇಬಲ್ ಸುರೇಶ್ ಮೃತಪಟ್ಟಿದ್ದು, ಅಸೆಂಟ್ ಕಾರಿನ ಚಾಲಕನ ಕೈ ಕಾಲು ಮುರಿದಿವೆ. ಇನ್ನು ಕುಡಿದ ಮತ್ತಿನಲ್ಲಿದ್ದ ಯುವಕ ಯುವತಿಯರಿಗೂ ಸಹ ಗಂಭೀರ ಗಾಯಗಳವಾಗಿವೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಇನ್ಸ್’ಪೆಕ್ಟರ್ ಬಚಾವ್ ಆಗಿದ್ದಾರೆ.
ನೈಟ್ ರೌಂಡ್ಸ್ನಲ್ಲಿ ದೇವನಹಳ್ಳಿ ಇನ್ಸ್ಪೆಕ್ಟರ್ ಧರ್ಮೆಗೌಡ ಮತ್ತು ಜೀಪ್ ಡ್ರೈವ್ ಮಾಡುತ್ತಿದ್ದ ಕಾನ್ಸ್ಟೇಬಲ್ ಸುರೇಶ್ ಇದ್ದರು.ಚಿಕ್ಕಜಾಲ ಬಳಿಯ ಹೆದ್ದಾರಿಯಲ್ಲಿ ಇನ್ನೋವಾ ಕಾರು ಕೆಟ್ಟು ನಿಂತಿತ್ತು. ರಾತ್ರಿ ಗಸ್ತಿನಲ್ಲಿದ್ದ ದೇವನಹಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹಾಗೂ ಕಾನ್ಸ್ಟೇಬಲ್ ಸುರೇಶ್ ಕೆಟ್ಟು ನಿಂತಿದ್ದ ಕಾರಿನ ಬಳಿ ವಿಚಾರಿಸಲು ಹೋಗಿದ್ದಾರೆ. ಇದೇ ಸಮಯದಲ್ಲಿ ಇನ್ಸಪೆಕ್ಟರ್ ಧರ್ಮೆಗೌಡ ಸೈಡಿಗೆ ಹೋಗಿದ್ದರು. ಈ ವೇಳೆ ಅಸೆಂಟ್ ಕಾರು ಬಂದು ಕೆಟ್ಟು ನಿಂತಿದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ.
ಕಾನ್ಸ್ಟೇಬಲ್ ಸುರೇಶ್ ಮೃತಪಟ್ಟಿದ್ದು, ಅದೃಷ್ಟವಶಾತ್ ಇನ್ಸ್ಪೆಕ್ಟರ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


