ಸರಗೂರು: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರದಂದು ನ.26 ಸಂವಿಧಾನ ದಿನಾಚರಣೆ ಹಾಗೂ ಡಿ.6ರಂದು ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಪೂರ್ವಭಾವಿ ತಹಶೀಲ್ದಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸಂವಿಧಾನ ದಿನದ ಪೂರಕವಾಗಿ ಚರ್ಚಿಸಿದ ಆದಿಕರ್ನಾಟಕ ಮಹಾಸಭಾ ಮಾಜಿ ಅಧ್ಯಕ್ಷ ಶಿವಣ್ಣ, ಟ್ರಸ್ಟ್ ಅಧ್ಯಕ್ಷ ನಾಗರಾಜು, ಸಣ್ಣಸ್ವಾಮಿ, ಗೋವಿಂದರಾಜು ಮಾತನಾಡಿ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಸರ್ವ ಜನಾಂಗದ ಭಾಗವಹಿಸಿ ಮಾಡೋಣ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಂವಿಧಾನ ರಥದ ಮೂಲಕ ಮೆರವಣಿಗೆ ಹೊರಟು ನಂತರ ಅಂಬೇಡ್ಕರ್ ಭವನದ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಸಿ ಅಲ್ಲಿ ನುರಿತರಿಂದ ಸಂವಿಧಾನ ಮಹತ್ವದ ಬಗ್ಗೆ ಉಪನ್ಯಾಸ ಮಾಡಿಸಬೇಕು ಎಂದರು.
ತಹಶೀಲ್ದಾರ್ ಮೋಹನಕುಮಾರಿ ಮಾತನಾಡಿ, ಇದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಸಂವಿಧಾನ ಚೌಕಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕು, ಹಾಗಾಗಿ ಯಾವುದೇ ಗೊಂದಲವಾಗದಂತೆ ಎಲ್ಲರೂ ಎಚ್ಚರಿಕೆಯಿಂದ ಮತ್ತು ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆಸೋಣ ಮತ್ತೆ ಅಧಿಕಾರಿಗಳು ಯಾವುದೇ ಸಬೂಬು ಹೇಳದೆ ಕಾರ್ಯಕ್ರಮಕ್ಕೆ ಹಾಜರಾಗಬೇಕು ಮತ್ತು ಸಹಕಾರ ನೀಡಬೇಕು ಎಂದು ಎಚ್ಚರಿಸಿದರು.
ಸಭೆಗೆ ಗೈರುಹಾಜರಿಯಾಗಿದ್ದ ಅಧಿಕಾರಿಗಳಿಗೆ ನೋಟಿಸ್ ನೀಡಬೇಕು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಸಮಾಜ ಕಲ್ಯಾಣ ಪ್ರಭಾರ ಅಧಿಕಾರಿ ರಮೇಶ್ ರಿಂದ ಮಾಹಿತಿ ಪಡೆದು ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ತಿಳಿಸಿದರು.
ಸಭೆಗೂ ಮುನ್ನ ಪ್ರತಿಭಟನೆ:
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸಹಯೋಗ ದೊಂದಿಗೆ ತಾಲೂಕಿನಲ್ಲಿ ಸಂವಿಧಾನ ದಿನ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನವನ್ನು ಆಚರಣೆ ಮಾಡಲು ಸಲುವಾಗಿ ತಹಸೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ವಿವಿಧ ದಲಿತ ಸಂಘಟನೆಗಳು, ಆದಿ ಕರ್ನಾಟಕ ಮಹಾಸಭಾ ಸೇರಿದಂತೆ ಪ್ರಗತಿಪರ ಒಕ್ಕೂ ಟಗಳ ಸಭೆಯನ್ನು ಕರೆಯಲಾಗಿತ್ತು. ಆದರೆ ಈ ಸಭೆಗೆ ಕೆಲ ಅಧಿಕಾರಿಗಳು ಸೇರಿ, ಕೆಲವು ಇಲಾಖೆಯ ಮುಖ್ಯಸ್ಥರು ಬಾರದೆ, ಅವರ ಪರವಾಗಿ ಸಿಬ್ಬಂದಿ ಕಳುಹಿಸಿದ್ದರು. ಇದನ್ನ ಗಮನಿಸಿದ ದಲಿತ ಸಮುದಾಯದ ಮುಖಂಡರು ಇದು ಸಂವಿಧಾನಕ್ಕೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ತೋರಿದ ಆಗೌರವ ಎಂದು ಕಿಡಿಕಾರಿ ತಾಲೂಕು ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ಶಿವಕುಮಾರ್, ಮಹಾಸಭಾ ಉಪಾಧ್ಯಕ್ಷ ಚಿನ್ನಣ್ಣ, ಮಾಜಿ ಮಹಾಸಭಾ ಅಧ್ಯಕ್ಷ ಶಿವಣ್ಣ, ಟ್ರಸ್ಟ್ ಅಧ್ಯಕ್ಷ ನಾಗರಾಜು, ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಗೋಪಾಲಯ್ಯ,ದಸಂಸ (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು, ಅಂಬೇಡ್ಕರ್ ಭವನ ಟ್ರಸ್ಟ್ ಅಧ್ಯಕ್ಷ ಎಸ್.ಡಿ.ಸಣ್ಣಸ್ವಾಮಿ, ಮಹಾಸಭಾ ಕಾರ್ಯದರ್ಶಿ ಮಸಹಳ್ಳಿ ಸೂರ್ಯ, ಬೆಟ್ಟ ಸ್ವಾಮಿ, ಕಸಾಪ ಅಧ್ಯಕ್ಷ ಕೆಂಡಗಣ್ಣಸ್ವಾಮಿ,ವಿಚಾರ ವೇದಿಕೆ ಅಧ್ಯಕ್ಷ ತಿಮ್ಮಯ್ಯ, ಬೀಲ್ಲಯ್ಯ, ಗೋವಿಂದ, ಚನ್ನಿಪುರ ಮಲ್ಲೇಶ್, ಅಣ್ಣಯ್ಯ ಸ್ವಾಮಿ, ದಸಂಸ (ಅಂಬೇಡ್ಕರ್ ವಾದ) ಮಹಿಳಾ ಘಟಕದ ಅಧ್ಯಕ್ಷೆ ಶೀರಮ್ಮ, ನಾಗರಾಜು, ಮಹದೇವಸ್ವಾಮಿ, ಶಿವರಾಜು, ಸರಗೂರು ಕೃಷ್ಣ, ಸೋಮಣ್ಣ, ಕಾಳಸ್ವಾಮಿ, ಪ್ರಭಾಕರ್, ಅಧಿಕಾರಿಗಳು ವೈ.ಡಿ.ರಾಜಣ್ಣ, ಇಓ ಪ್ರೇಮ್ ಕುಮಾರ್, ಪಪಂ ಮುಖ್ಯಾಧಿಕಾರಿ ಎಸ್.ಕೆ.ಸಂತೋಷ ಕುಮಾರ್, ಇನ್ನೂ ಮುಖಂಡರು ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


