ತುರುವೇಕೆರೆ: ಭಾರತದಲ್ಲಿ ಸಂವಿಧಾನಕ್ಕೆ ಅತಿ ಹೆಚ್ಚು ಮಹತ್ವ ನೀಡಿರುವುದರಿಂದಲೇ ಇಂದು ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ನಮ್ಮ ಭಾರತ ಹೊರಹೊಮ್ಮಿದೆ. ಇದು ಪ್ರಜಾಪ್ರಭುತ್ವದ ಶಕ್ತಿ ಎಂದು ಗ್ರಾಮೀಣ ಕುಡಿಯುವ ನೀರು ಇಲಾಖೆಯ ಸಹಾಯಕ ಎಂಜಿನಿಯರ್ ಕೃಷ್ಣಕಾಂತ್ ಅಭಿಪ್ರಾಯಪಟ್ಟರು.
ತುರುವೇಕೆರೆ ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಓದು ಹಾಗೂ ಸರ್ ಎಂ. ವಿಶ್ವೇಶ್ವರಯ್ಯನವರ 164 ವರ್ಷದ ಜನ್ಮ ದಿನಾಚರಣೆ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಆಧಾರಿತ ಸಂವಿಧಾನ ಇರುವುದರಿಂದಲೇ ಭಾರತ ಇಂದು ವಿಶ್ವಖ್ಯಾತಿ ಪಡೆದುಕೊಂಡಿದೆ, ನಮ್ಮ ದೇಶದ ಸಂವಿಧಾನವನ್ನು ಇತರೆ ರಾಷ್ಟ್ರದವರು ಅಧ್ಯಯನ ನಡೆಸಿ ತಮ್ಮ ದೇಶಕ್ಕೆ ಅಳವಡಿಸಿಕೊಳ್ಳಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದರು.
ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ನಂ.ರಾಜು ಮಾತನಾಡಿ, ಎಂ.ವಿಶ್ವೇಶ್ವರಯ್ಯನವರು ಹಲವಾರು ಯೋಜನೆಗಳು ಇಂದಿಗೂ ಜನಮಾನಸದಲ್ಲಿ ಉಳಿದಿದೆ. ಹಾಗೆಯೇ ವಿಶ್ವೇಶ್ವರಯ್ಯರವರಂತದ ಎಂಜಿನಿಯರ್ ಗಳು ನಿರ್ಮಿಸಿರುವ ಕಾಮಗಾರಿಗಳು ಇಂದಿಗೂ ಜನರ ಮನದಲ್ಲಿ ಎಂದರು.
ಈ ಸಂದರ್ಭದಲ್ಲಿ ಬೆಸ್ಕಾಂ ಕಾರ್ಯಪಾಲಕ ಚಂದ್ರಾನಾಯಕ್,ಸಹಾಯಕ ಹೇಮಾವತಿ ನಾಲಾ ಅಭಿಯಂತರರಾದ ಶಿವಪ್ರಸಾದ್ ಸೇರಿದಂತೆ ಹಲವು ಇಲಾಖೆಯ ಇಂಜಿನಿಯರ್ ಗಳನ್ನು ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಎಚ್.ಸಿ.ನಾಗರಾಜ್, ಡಾ.ನವೀನ್,.ನಟೇಶ್, ದಿನೇಶ್ ರಂಗರಾಮಯ್ಯ ಮತ್ತು ಸಂಘದ ಪದಾಧಿಕಾರಿಗಳು ಸರ್ಕಾರಿ ನೌಕರರು ಸೇರಿದಂತೆ ಹಲವರು ಭಾಗವಹಿಸಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ


