ತುಮಕೂರು: ಮರಳೇನಹಳ್ಳಿ ಗೋಮಾಳದಲ್ಲಿರುವ ಹಿಂದುಳಿದ ನಾಗರಿಕರ ಹಿತರಕ್ಷಣಾ ಸಮಿತಿಯಿಂದ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ 1ರ ಮರಳೇನಹಳ್ಳಿ ಗೋಮಾಳದಲ್ಲಿ ಹಿಂದುಳಿದ ಸಮುದಾಯಗಳಾದ (ಲಿಂಗಾಯತ, ತಿಗಳ, ಕುರುಬ ಮತ್ತು ಗೊಲ್ಲ) ಕಳೆದ 70 ವರ್ಷಗಳಿಂದಲೂ 80ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದು, ಇಲ್ಲಿನ ಜನರು ದಿನನಿತ್ಯ ಸಂಚರಿಸುವ ರಸ್ತೆಯನ್ನು ಸ್ಥಳೀಯ ಪ್ರಭಾವಿಗಳಾದ ನವೀನ್ ಲ್ಯಾಂಡ್ ಮಾಫಿಯಾ ವಿನಾಕಾರಣ ತಂತಿ ಕಾಂಪೌಂಡ್ ನಿರ್ಮಿಸಿ ಮರಳೇನಹಳ್ಳಿ ಗೋಮಾಳಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಸರ್ವೇ ನಂ, 62/2 ರಲ್ಲಿ 1.16 ಗುಂಟೆ ಇದ್ದು 5-08.00 ಗುಂಟೆ ಜಮೀನನ್ನು 3 ತಿಂಗಳ ಹಿಂದೆ ಖರೀದಿಸಿ ಗೋಮಾಳ ರಸ್ತೆಗೆ ಅಡ್ಡ ಕಾಂಪೌಂಡ್ ಹಾಕಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದಾರೆ.
ಮರಳೇನಹಳ್ಳಿ ಗೋಮಾಳದಲ್ಲಿ ವಾಸಿಸುವ ಜನರಿಗೆ ಇರುವುದಿಲ್ಲ. ಈ ಹಿಂದೆ ತುಮಕೂರು ಮಹಾನಗರ ಪಾಲಿಕೆ 2013-14ನೇ ಸಾಲಿನ ವಿಶೇಷ ಅನುದಾನದ 100 ಕೋಟಿಯಲ್ಲಿ 43 ಲಕ್ಷ ರೂಗಳಲ್ಲಿ ಜಲ್ಲಿ ರಸ್ತೆ ಹಾಕಿರುವುದು ಸರಿಯಷ್ಟೇ. ಆದರೂ ಸಹ ಪ್ರಭಾವಿಗಳು ಸರ್ವೇ ನಂ, 62/2 ರ ಮಾಲೀಕರಾದ ಚಂದ್ರಯ್ಯ ಮತ್ತು ಅವರ ಮಗ ನವೀನ್‌ರವರು ಜನರಿಗೆ ತೊಂದರೆ ಕೊಡುವ ಉದ್ದೇಶದಿಂದ ರಸ್ತೆಯನ್ನು ಬಂದ್ ಮಾಡಿ ತಂತಿ ಬೇಲಿಯನ್ನು ಹಾಕಿದ್ದಾರೆ. ಇದರಿಂದ ಶಾಲಾ ಕಾಲೇಜಿಗೆ ಹೋಗುವ ಮಕ್ಕಳಿಗೆ ಹಾಗೂ ವಯೋವೃದ್ಧರಿಗೆ, ಮಹಿಳೆಗೆ, ಉದ್ಯೋಗಕ್ಕಾಗಿ ತೆರಳುವ ಸ್ಥಳೀಯರಿಗೆ ತೊಂದರೆ ಆಗುತ್ತಿದೆ.
ಮನವಿ ಸ್ವೀಕರಿಸಿದ ತುಮಕೂರು ತಾಲ್ಲೂಕು ತಹಶೀಲ್ದಾರ್ ರಾಜೇಶ್ವರಿ ರವರು ಸಾರ್ವಜನಿಕರಿಗೆ ರಸ್ತೆಗೆ ಯಾವುದೇ ತೊಂದರೆ ನೀಡಬಾರದು ಸಾರ್ವಜನಿಕ ಹಿತದೃಷ್ಟಿಯಿಂದ ಸ್ಥಳ ಪರಿಶೀಲನೆ ನಡೆಸಿ ದ್ವಿಪಕ್ಷೀಯವಾಗಿ ಸಮಸ್ಯೆಯನ್ನು ಬಗೆ ಬಗೆಹರಿಸಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸ್ಲಂ ಜನಾದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ, ಮರಳೇನಹಳ್ಳಿ ಗ್ರಾಮದ ಮುಖಂಡರಾದ ಮೋಹನ್ ಟಿ.ಎನ್, ಭದ್ರಣ್ಣ, ಶಿವರಾಜು, ಶಂಭಣ್ಣ, ಲೋಕೇಶ್, ಜಗದೀಶ್, ಎಂ.ಪಿ, ಮಂಜುನಾಥ್, ಗಿರೀಶ್, ರುದ್ರಯ್ಯ, ಗಂಗಣ್ಣ, ಕೃಷ್ಣಮೂರ್ತಿ, ಮಹಾರುದ್ರಯ್ಯ, ಕುಮಾರ್, ತಮ್ಮಯ್ಯ, ಬಸವರಾಜು, ಬಾಲಕೃಷ್ಣ, ಸೋಮಶೇಖರ್, ಸತೀಶ್, ಲೋಕೇಶ್.ಪಿ, ಸುಧಾ, ಜಗದೀಶ್, ರವಿ ಮತ್ತಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


