ನವದೆಹಲಿ: ಪೂಜೆಗೆ ಪ್ರತಿಫಲ ಸಿಗಬೇಕಾದ್ರೆ ನೀನು ನನ್ನ ಜೊತೆಗೆ ದೈಹಿಕ ಸಂಪರ್ಕ ಹೊಂದಬೇಕು ಅಂತ ಪೂಜಾರಿಯೊಬ್ಬ ಮಹಿಳೆಗೆ ಕಿರುಕುಳ ನೀಡಿರುವ ಘಟನೆ ನಡೆದಿದ್ದು, ಪೂಜಾರಿ ಮಾತಿನಿಂದ ರೊಚ್ಚಿಗೆದ್ದ ಮಹಿಳೆ ಪೂಜಾರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ.
ರೇಖಾ ಅಂಬೇಡ್ಕರ್ ಎಂಬುವವರು ಎಕ್ಸ್ ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದು, ಘಟನೆ ಬಗ್ಗೆ ಹಂಚಿಕೊಂಡಿದ್ದಾನೆ. ಈತ ಪೂಜೆ ಮಾಡಲು ಬಂದು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ನನ್ನ ಜೊತೆ ದೈಹಿಕ ಸಂಪರ್ಕ ಬೆಳೆಸಿದರೆ ಮಾತ್ರ ನಿನ್ನ ಪೂಜೆ ಸಫಲವಾಗಿತ್ತೆ ಎಂದು ಹೇಳಿದ್ದಾನೆ. ಇದರಿಂದ ಕೋಪಗೊಂಡು ಮಹಿಳೆ ಆತನಿಗೆ ಥಳಿಸಿದ್ದಾಳೆ ಎಂದು ಬರೆದುಕೊಳ್ಳಲಾಗಿದೆ.
ಜನರ ನಂಬಿಕೆಗಳನ್ನು ಮೌಢ್ಯತೆಗೆ ಬಳಸಿಕೊಂಡು ಕೆಲವರು ಮೋಸ ಮಾಡುತ್ತಾರೆ. ತಮ್ಮ ಕಾಮವನ್ನು ತಣಿಸಿಕೊಳ್ಳಲು ಪೂಜೆಯ ನೆಪದಲ್ಲಿ ಕಿರುಕುಳ ನೀಡುತ್ತಾರೆ. ಜನರು ಇಂತಹ ವಿಷಯಗಳಲ್ಲಿ ಎಚ್ಚರಿಕೆಯಿಂದಿರಬೇಕಾದದ್ದು ತುಂಬಾ ಅಗತ್ಯವಾಗಿದೆ.
ತನ್ನೊಂದಿಗೆ ಲೈಂಗಿಕ ಸಂಪರ್ಕ ನಡೆಸಿದರೆ, ನಿಮ್ಮ ಸಮಸ್ಯೆ ಬಗೆಹರಿಯುತ್ತದೆ ಎಂದು ಪೂಜಾರಿ ಹೇಳಿದ್ದಾನೆ. ಸಮಸ್ಯೆ ಬಗೆ ಹರಿಸುವುದಾಗಿ ಬಂದ ಪೂಜಾರಿಯೇ ಆ ಕುಟುಂಬಕ್ಕೆ ದೊಡ್ಡ ಸಮಸ್ಯೆಯಾಗಿದ್ದ. ಅಂತಿಮವಾಗಿ ಪೂಜೆ ಮಾಡಲು ಬಂದ ಪೂಜಾರಿಯ ಬೆನ್ನಿಗೆ ಮನೆಯವರೇ ಸರಿಯಾಗಿ ಪ್ರಸಾದ ಬಡಿಸಿ ಕಳುಹಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q