ತುಮಕೂರು: ತುಮಕೂರಲ್ಲಿ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಹಾಗೂ ಹಾಲಿ ಶಾಸಕ ಸುರೇಶ್ ಗೌಡ ನಡುವಿನ ಬಹಿರಂಗ ಹೇಳಿಕೆ ತಾರಕಕ್ಕೇರಿದ್ದು, ಡಿ.ಸಿ.ಗೌರಿಶಂಕರ್ ಶಾಸಕ ಸುರೇಶ್ ಗೌಡ ಅವರ ವಿರುದ್ಧ ಮಾಡಿದ ಆರೋಪ ವಾಗ್ದಾಳಿಗಳಿಗೆ ಸುರೇಶ್ ಗೌಡ ತಿರುಗೇಟು ನೀಡಿದ ಬೆನ್ನಲ್ಲೇ ಮತ್ತೆ ಸುದ್ದಿಗೋಷ್ಠಿ ಕರೆದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಸುರೇಶ್ ಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೊದಲು ಫೆ.14 ಭಾರತದ ಕರಾಳ ದಿನವನ್ನು ಸ್ಮರಿಸಿ ಪುಲ್ವಾಮದಲ್ಲಿ 40 ಕ್ಕೆ ಹೆಚ್ಚು ಯೋಧರ ಅಗಲಿಕೆಯನ್ನು ನೆನಪಿಸಿಕೊಂಡು, ಎಲ್ಲರ ಪರವಾಗಿ ಆ ಕುಟುಂಬಗಳಿಗೆ ಧೈರ್ಯ ತುಂಬುವ ಸಾಂತ್ವನ ಹೇಳ್ತೀನಿ ಎಂದರು.
ಬಳಿಕ ಶಾಸಕ ಸುರೇಶ್ ಗೌಡ ವಿರುದ್ಧ ವಾಗ್ದಾಳಿ ಆರಂಭಿಸಿದ ಅವರು, ಆಪ್ತ ಸ್ನೇಹಿತ ಶಾಸಕ ಸುರೇಶ್ ಗೌಡ ಹೇಳಿಕೆಗಳಿಗೆ ತಿಳುವಳಿಕೆ ತಿಳಿಸ್ತೀನಿ. ರಾಜಣ್ಣನವರ ವಿರುದ್ಧ ಮಾತನಾಡಿದ್ದಾರೆ. ರಾಜಣ್ಣ ವಿರುದ್ದ ಮಾತನಾಡೋಕೆ ಧೈರ್ಯ ಇಲ್ವಾ ಅನ್ನೋ ವಿಚಾರ ಇಟ್ಟುಕೊಂಡು ಮಾತನಾಡಿದ್ದಾರೆ. ನಾನು ರಾಜಣ್ಣ ಬಗ್ಗೆ ಟೀಕೆ ಮಾಡೋಕೆ ಧೈರ್ಯ ಇಲ್ಲ. ರಾಜಣ್ಣ ಆಶೀರ್ವಾದ ಇಲ್ಲದೇ ಸುರೇಶ್ ಗೌಡ ಎಂಎಲ್ ಎ ಆಗ್ತಾ ಇರಲಿಲ್ಲ ಅಂತಾ ನಾನು ಹೇಳಿದ್ದು. ಇದನ್ನ ಲಿಂಕ್ ಕೇನಾಲ್ ಸೇರಿಸಿ ಮಾತನಾಡ್ತೀರಾ ಎಂದು ಪ್ರಶ್ನಿಸಿದರು.
2017 ರಲ್ಲಿ ನೀವೇ ಭಾಷಣ ಮಾಡಿದ್ದೀರಾ ರಾಜಣ್ಣ ಆಶೀರ್ವಾದ ಇಲ್ಲದೇ ಎಂಎಲ್ ಎ ಆಗೋಕೆ ಆಗ್ತಾ ಇರಲಿಲ್ಲ ಅಂತಾ, ಕ್ಷೇತ್ರದಲ್ಲಿ ನಮ್ಮ ರಸ್ತೆಗಳು ಗುಂಡಿನೇ ಬಿದ್ದಿಲ್ಲಾ ಅಂದಿದ್ದೀರಿ. ಗುಂಡಿಗಳನ್ನ ನಾನು ತೋರಿಸ್ತೀನಿ ನೋಡಿ. ಯಾಕ್ ಸುರೇಶ್ ಗೌಡ ನಿನಗೆ ಬಂಡತನ ಎಂದು ಪ್ರಶ್ನಿಸಿದರು.
ಹಿರೇಹಳ್ಳಿಯಿಂದ ಹರಳೂರಿಗೆ ಮಾಡಿರೋ ರಸ್ತೆ ಒಂದೇ ವರ್ಷದಲ್ಲಿ ಕಿತ್ತು ಹೋಗಿದೆ. ಈಗ ಹೇಳಿ ರಸ್ತೆಯಲ್ಲಿ ಕಮಿಷನ್ ತಗೊಂಡಿದ್ದೀರಾ ಇಲ್ವಾ ಹೇಳಿ. ಮೊನ್ನೆಯಿಂದ ಆತ್ಮೀಯ ಸ್ನೇಹಿತ ಅಂದಿದ್ದಾರೆ ಆಗಾಗಿ ನಂಬರ್ ಇಟ್ಟುಕೊಳ್ತೀನಿ ಎಂದರು.
ಫಿಕ್ಸಿಂಗ್ ಲೀ ನಿಸ್ಸಿಮಾ ಸುರೇಶ್ ಗೌಡ. ರಾಜಣ್ಣ ಆಶೀರ್ವಾದ ಇಲ್ಲ ಅಂದ್ರೆ ಎಂಎಲ್ ಎ ಆಗ್ತಾ ಇರಲಿಲ್ಲಪ್ಪಾ. ಯಾರಪ್ಪಾ ಈಗ ಫಿಕ್ಸಿಂಗ್, ಇಲ್ಲಿ ನಿಸ್ಸಿಮಾ ನೀನು. ನಾನು ಮೂರು ಸಲ ಎಂಎಲ್ ಎ ಅಂತಾ ಹೇಳ್ತಾ ಇರ್ತೀರಾ. ನಾನು ಮೂರು ಸಲ ಎಂಎಲ್ ಎ ಕಣಪ್ಪಾ. ನನಗೂ ಕೂಡಾ ಅನುಭವ ಇದೆಯಪ್ಪಾ. ನಾನು ನಂದು ಅಂದವರು ಮಣ್ಣಾಗಿದ್ದಾರೆ ದುರಾಂಕಾರದ ಮಾತು ಬೇಡಣ್ಣ ಎಂದರು.
ನಾನು ಪ್ರಯಾಗ್ ರಾಜ್ ಬಗ್ಗೆ ಚರ್ಚೆ ಮಾಡಿದ್ದೀನಿ. ನಾನು ಒಬ್ಬ ಹಿಂದೂ ಅಂತಾ ಎದೆ ಮುಟ್ಟಿಕೊಂಡು ಹೇಳ್ತೀನಿ. ನಾನು ಆಮೇಲೆ ಹಿಂದೂ ಅಲ್ಲ ನಮ್ಮ ಅಪ್ಪ ಹುಟ್ಟಿದಾಗಲೇ ಹಿಂದೂ ಅಂತಾ ಬರೆಸಿದ್ದಾರೆ. ಪ್ರಯಾಗ್ ರಾಜ್ ಲೀ ಪಾಪ ತೊಳೆದುಕೊಂಡು ಬರೋದು ನಮ್ಮ ಸಂಸ್ಕ್ರತಿ. ಅದನ್ನ ನಾನು ಹೇಳುದ್ದು ಅದಕ್ಕೆ ಧರ್ಮದ ಬಣ್ಣ ಕಟ್ಟುತ್ತಿರಾ. ಮುಸ್ಲಿಂ ಹೆಸರೇಳದೆ ಅವರಿಗೆ ನಿದ್ರೆ ಬರೋಲ್ಲ. ಟಿ.ನರಸೀಪುರಕ್ಕೆ ನನ್ನ ದುಡ್ಡಲಿ ಕರೆದುಕೊಂಡು ಹೋಗ್ತೀನಿ ಅಂದನಾ. ನಾನು ನನ್ನ ಜೊತೆ ಕರೆದುಕೊಂಡು ಹೋಗ್ತೀನಿ ಅಂದೆ. ನಿಮ್ಮಥ್ರ ದುಡ್ಡು ತುಂಬಿ ತುಳುಕ್ತಾ ಇದೆ. ನಿಮ್ಮ ವಿಚಾರಗಳು ಜೇಬಲ್ಲಿ ಇದೆ ಒಂದೊಂದೆ ತಗೀತೀನಿ ಕಾಯಿರಿ ಎಂದರು.
ಟೀಕೆಗಳು ಸಾಯ್ತವೇ ನಾವು ಮಾಡಿರೋ ಕೆಲಸಗಳು ಉಳಿಯುತ್ತವೆ ಅಂತಾ ಅಧ್ಯಕ್ಷರಾದ ಡಿಕೆಶಿ ಅವರು ಹೇಳ್ತಾರೆ. ಆ ತರ ಪರಮೇಶ್ವರ್ ಅವರು ಕೆಲಸ ಮಾಡ್ತಾ ಹೋಗ್ತಾ ಇದ್ದಾರೆ. ನೀವು ಪರಮೇಶ್ವರ್ ಅವರು ಹತ್ತಿರ ಬಂದು ಕಲಿಯಬೇಕು ರೀ. ತಂದೆ ಸಮಾನರು ರೀ ಬನ್ರಿ ನೀವು ಕಲಿತುಕೊಳ್ರೀ. ಕಾಂಗ್ರೆಸ್ ದರಿದ್ರ ಸರ್ಕಾರ ಅಂತಾ ಹೇಳ್ತೀರಾ. ಬಿಜೆಪಿ ಶಾಸಕರಾಗಿ ನೀವು ಹೇಳಬೇಕು ಅಷ್ಟೇ. ಗ್ಯಾರಂಟಿಯಿಂದ 3500 ಕೋಟಿ ಬಡವರಿಗೆ ಸಿಗ್ತಾ ಇದೆ. ಬಡವರು ಎರಡು ಹೊತ್ತು ಊಟ ಮಾಡ್ತಾ ಇರೋದು ಗ್ಯಾರಂಟಿಯಿಂದ ಎಂದರು.
ಆಮೇಲೆ ಗುಬ್ಬಿ ಶಾಸಕರ ಮೇಲೆ ಲವ್ ಆಗಿದೆ. ನಮ್ಮ ಸೀನಣ್ಣನ ಮೇಲೆ ವ್ಯಾಲಟೈನ್ಸ್ ಡೇ ಮೇಲೆ ಲವ್ ಆಗಿರೋ ಆಗಿದೆ. ನಿನಗೆ ಹೇಳಿಕೊಡೋ ಅಂತಾ ಟೈಗರ್ ವಾಸಣ್ಣ. ಮಾನನಷ್ಟ ಮೊಕದ್ದಮೆ ಹಾಕ್ತೀನಿ ಅಂದಿದ್ಯಾ. ಮಾನದ ಅರ್ಥ ಗೊತ್ತಿಲ್ಲದ ಅಜ್ಞಾನಿ ನೀನು. ನ್ಯಾಯಾಲಯದ ಮೂಲಕ ಬಂದ್ರೆ ಅದನ್ನ ಫೇಸ್ ಮಾಡ್ತೀನಿ. ಅಂಬೇಡ್ಕರ್ ಸಂವಿಧಾನದಲ್ಲಿ ಎಲ್ಲರಿಗೂ ಒಂದೇ ಕಾನೂನು. ಅಶ್ವಾಸನೆ ಕೊಟ್ಟಿದ್ದಾರಲ್ಲ ಜನ ಅದನ್ನ ಕೇಸ್ ಮಾಡಿದ್ರೆ ಸಾವಿರಗಟ್ಟಲೇ ಕೇಸ್ ಆಗ್ತಾವೆ. ನಿಮ್ಮ ಪಂತ ಆಹ್ವಾನವನ್ನ ನಾನು ಸ್ವೀಕಾರ ಮಾಡ್ತೀನಿ ಸುರೇಶ್ ಗೌಡ ಎಂದರು.
ಗೃಹಸಚಿವರ ಡ್ರೈವಿಂಗ್ ಸೀಟ್ ಲೀ ರಾಜಣ್ಣ, ಯಂತೀಂದ್ರ ಇದ್ದಾರೆ ಅಂದ್ರಿ. ಮುಸ್ಲಿಂ ಕ್ರೈಸ್ತರ ಹೆಸರೇಳದೆ ನಿಮಗೆ ತಿಂದ ಅನ್ನ ಸೇರೋಲ್ಲ. ನಿಮ್ಮ ಸೋಮಣ್ಣ ಅವರೇ ಇಂತಹ ಗೃಹಸಚಿವರು ಒಳ್ಳೆಯವರು ಕಂಡಿಲ್ಲ ಅಂತಾ ಇದ್ದಾರೆ. ರಾತ್ರಿ ಹೊತ್ತು ಹೋಗಿ ಪರಮೇಶ್ವರ್ ಖಾಲಿಗೆ ಬೀಳ್ತೀರಾ. ಅಳಿಯನ್ನ ಕರೆದುಕೊಂಡು ಹೋಗಿ ಏನ್ ಕೇಳಿದ್ರಿ ನೀವು ಹೇಳಬೇಕು ಸುರೇಶ್ ಗೌಡ ಎಂದರು.
ಸುರೇಶ್ ಗೌಡ ನನಗೆ ನಿಮ್ಮ ಮೇಲೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲ. ನಾನು ಕೇಳ್ತಾ ಇರೋದು ಅಶ್ವಾಸನೆ ಈಡೇರಿಸಿ ಅಂತಾ. ಇವತ್ತು ನಾನು ಸೋತಿರಬಹುದು ನಾಳೆ ನೀನು ಸೋಲಬಹುದು. ನಾನೇ, ನಂದು ಅಂತಾ ದುರಂಕಾರದ ಮಾತು ಆಡಿದ್ದಾರೆ. ಡಿಕ್ವಾಲಿಫೈ ವಿಚಾರ ಮಾತನಾಡಿದ್ದೀರಿ. ಕೋರ್ಟ್ ಸ್ಟೇ ಯಾಕ್ ಕಡಲೆಕಾಯಿ ತಿನ್ನೋಕೆ ಕೊಡ್ತಾ. ಕೋಟ್೯ ವಿಚಾರ ಮಾತನಾಡಬಹುದು ಅಂತಾ ತಿಳಿದುಕೊ. ಪರಮೇಶ್ವರ್ ಹೇಳಿಕೊಟ್ಟು ನಾನು ಸುದ್ದಿ ಗೊಷ್ಟಿ ಮಾಡಬೇಕಾ. ಅದೇನೋ ತಲಾಷ್ ಮಾಡಿ ಕಂಡು ಹಿಡಿದಿದ್ದೀರಾ ಅಂತೀರಾ ಎಂದರು.
ನಾನು ಪತ್ರಿಕಾಗೋಷ್ಠಿ ಆದ ಮೇಲೆ ನಮ್ಮ ಸ್ನೇಹಿತರು ಸಜೆಶನ್ ಕೊಟ್ಟಿದ್ದಾರೆ ಅಂತೀರಾ. ದೆಹಲಿಗೆ ಹೋಗಿ ಬಂದ ಮೇಲೆ ಆ ಮಾಹಿತಿ ನಿಮಗೆ ಬಂತಾ. ನಿಮಗೆ ನನ್ನ ಮೇಲೆ ಪ್ರತಿಕಾಗೋಷ್ಟಿ ಮಾಡಿ ಅಂದಿದ್ದು ಯಾರು. ಆಪ್ತ ಸ್ನೇಹಿತ ಸುರೇಶ್ ಗೌಡ ನಮ್ಮ ಪಕ್ಷದ ಮುಖಂಡರ ವಿರುದ್ದ ಮಾತನಾಡಿದ್ರೆ ನಾನು ಟಾಂಗ್ ಕೊಡೋದೆ ಎಂದು ಸುರೇಶ್ ಗೌಡ ವಿರುದ್ದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಕಿಡಿಕಾರಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4