ಹೆಚ್.ಡಿ.ಕೋಟೆ: ಪಟ್ಟಣದಲ್ಲಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಇತ್ತೀಚೆಗೆ ಅಪರಾಧಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತಿದ್ದು ಇದನ್ನು ತಡೆಯಲು ನಮ್ಮ ಜೊತೆ ಸಹಕರಿಸಿ ಎಂದು ವೃತ್ತ ನಿರೀಕ್ಷಕ ಶಬೀರ್ ಹುಸೇನ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪಟ್ಟಣದ ಪ್ರಮುಖ ವಾರ್ಡ್ ಗಳಿಗೆ ಅಪರಾಧ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಯಾವ ರೀತಿ ನಿರ್ವಹಿಸಬೇಕೆಂಬುದರ ಬಗ್ಗೆ ಮಾಹಿತಿ ನೀಡಲು ಹೆಚ್.ಡಿ.ಕೋಟೆ ಪಟ್ಟಣದಲ್ಲಿ ಆಟೋ ಮೂಲಕ ಮಾಹಿತಿ ನೀಡಲು ಚಾಲನೆ ನೀಡಿದರು.
ಶಬೀರ್ ಹುಸೇನ್ ರವರು ಸಾರ್ವಜನಿಕರಿಗೆ ಕರಪತ್ರವನ್ನು ನೀಡಿ ಅಪರಾಧಗಳು ನಡೆಯದಂತೆ ಕಾಪಾಡಲು ನಮ್ಮ ಇಲಾಖೆಯ ಜೊತೆ ನಿಮ್ಮ ಸಹಕಾರ ಅತೀ ಮುಖ್ಯ ಎಂದು ಹೇಳಿದರು.
ನಿಮ್ಮ ವಾರ್ಡ್ ಗಳಲ್ಲಿ ಮತ್ತು ನಿಮ್ಮ ಗ್ರಾಮದಲ್ಲಿ ಯಾರಾದರು ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದರೆ ನಮ್ಮ ಇಲಾಖೆಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದರು.
ಈ ಸಂಧರ್ಭದಲ್ಲಿ ವೃತ್ತ ನಿರೀಕ್ಷಕ ಶಬೀರ್ ಹುಸೇನ್, ಉಪನಿರೀಕಗಷಕರಾದ ಸುರೇಶ್, ಪ್ರಕಾಶ್, ರಾಮು, ಪೇದೆಗಳಾದ ಯೊಗೇಶ್, ಸುಭಾನ್, ಮೋಹನ್, ಕಬೀರ್, ಶಕೀಲವತಿ, ಭೂಮಿಕ ಹಾಗೂ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.
ವರದಿ: ಮಲಾರ ಮಹದೇವಸ್ವಾಮಿ


