ಪರೀಕ್ಷೆಗೆ ಕಾಪಿ ಚೀಟಿ ತಂದಿದ್ದೀಯ ಅಂತ ಶಿಕ್ಷಕಿ ನಿಂದಿಸಿದ್ದರಿಂದ ನೊಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಒಎಂಬಿಆರ್ ಲೇಔಟ್ನ ದೊಡ್ಡ ಬಾಣಸವಾಡಿಯ ಮರಿಯಂ ನಿಲಯ ಇಂಗ್ಲಿಷ್ ಸ್ಕೂಲ್ ವಿದ್ಯಾರ್ಥಿನಿ ಅಮೃತಾ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ನವೆಂಬರ್ 2ರಂದು ಟೆಸ್ಟ್ ವೇಳೆ ಅಮೃತಾ ಕಾಪಿ ಚೀಟಿ ತಂದಿದ್ದಾಳೆ ಎಂದು 4-5 ದಿನಗಳಿಂದ ಕ್ಲಾಸ್ನಲ್ಲಿ ವಿದ್ಯಾರ್ಥಿಗಳ ಮುಂದೆ ಅಮೃತಾಳನ್ನು ಶಿಕ್ಷಕಿ ಶಾಲಿನಿ ನಿಂದಿಸಿದ್ದಾರೆ. ಶಾಲೆಯಲ್ಲಿ ಶಿಕ್ಷಕಿ ಪದೇಪದೆ ನಿಂದಿಸಿ ಅಪಮಾನ ಮಾಡಿದ್ದಾರೆ ಎಂದು ಅಮೃತಾ ಡೆತ್ ನೋಟ್ ನಲ್ಲಿ ವಿವರಿಸಿದ್ದಾಳೆ.
ಎಲ್ ಕೆಜಿಯಿಂದ ಇದೇ ಶಾಲೆಯಲ್ಲಿ ಓದುತ್ತಿದ್ದ ಅಮೃತಾ ಸಾವಿಗೆ ಶಾಲಾ ಆಡಳಿತ ಮಂಡಳಿ ಕಾರಣ ಎಂದು ಆರೋಪಿಸಿ ಪೋಷಕರು ಪ್ರತಿಭಟನೆ ನಡೆಸಿದರು.ಇದ್ದ ಒಬ್ಬಳೇ ಪುತ್ರಿಯನ್ನು ಕಳೆದುಕೊಂಡು ಪೋಷಕರು ಕಣ್ಣೀರು ಹಾಕಿದ್ದಾರೆ.
ಘಟನಾ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಜಯಪ್ರಕಾಶ್ ಭೇಟಿ ನೀಡಿ ಅಮೃತಾ ತಾಯಿ ಆಶಾ ಅವರನ್ನು ಸಾಂತ್ವನ ಮಾಡಿದರು. ಅಮೃತಾ ಮೃತ ದೇಹಕ್ಕೆ ಅಂತಿಮ ನಮನ ಸಲ್ಲಿಸಿದರು.
ಶಿಕ್ಷಕಿ ಮಕ್ಕಳಿಗೆ ಬೈಯುವವರಲ್ಲ. ನನಗೆ ಇವತ್ತು ಬೆಳಿಗ್ಗೆ ಗೊತ್ತಾಯಿತು ಆತ್ಮಹತ್ಯೆ ಮಾಡಿಕೊಂಡಿರುವುದು. ಕಾಪಿ ಮಾಡಿರುವುದಕ್ಕೆ ನಮ್ಮಲ್ಲಿ ದಾಖಲೆ ಇವೆ. ನಾನು ಪೋಷಕರ ಜೊತೆಗೆ ಮಾತಾಡಿದ್ದೇನೆ. ಕ್ಲಾಸ್ ಟೀಚರ್ ಶಾಲಿನಿ ಕೂಡ ಮೃತ ಅಮೃತ ಜೊತೆಗೆ ಮಾತಾಡಿದ್ದಾರೆ. ಮುಂದೆ ಹೀಗೆ ಮಾಡಬೇಡ ಎಂದು ಬುದ್ದಿ ಹೇಳಿದ್ದಾರೆ ಎಂದು ಪ್ರಿನ್ಸಿಪಲ್ ಐರಿನ್ ಪ್ರತಿಕ್ರಿಯಿಸಿದ್ದಾರೆ.
ಪುಲಿಕೇಶಿ ನಗರದ ಜೀವನಹಳ್ಳಿಯಲ್ಲಿರುವ ಕಲ್ಪಳ್ಳಿ ಸಶ್ಮಾನದಲ್ಲಿ ಅಮೃತ ಅಂತ್ಯಕ್ರಿಯೆ ನಡೆಯಲಿದೆ. ಕೆಲವೇ ಕ್ಷಣದಲ್ಲಿ ಮನೆಯಿಂದ ಸ್ಮಶಾನಕ್ಕೆ ಮೃತದೇಹ ಶಿಫ್ಟ್ ಮಾಡಲಿದ್ದು, ಎಲೆಕ್ಟ್ರಿಕ್ ಬರ್ನಿಂಗ್ ಮೂಲಕ ಅಂತ್ಯಕ್ರಿಯೆ ನಡೆಯಲಿದೆ. ಆ್ಯಂಬುಲೆನ್ಸ್ ಮುಂದೆ ಧಿಕ್ಕಾರ ಕೂಗಿ ಮಹಿಳಾ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


