ತುಮಕೂರು: ಸ್ಮಶಾನದಲ್ಲಿರೋ ಮಾರುಕಟ್ಟೆಗೆ ನಾನ್ ಹೋಗಲ್ಲ, ನಾನು ಇಲ್ಲಿಯೇ ವ್ಯಾಪಾರ ಮಾಡುತ್ತೇನೆ ಎಂದು ಹೂವಿನ ವ್ಯಾಪಾರ ತರಕಾರಿ ವ್ಯಾಪಾರ ಮಾಡಿಕೊಂಡಿರುವ ವೃದ್ದೆಯೊಬ್ಬರು ಪಟ್ಟು ಹಿಡಿದ ಘಟನೆ ತುಮಕೂರು ವಿವಿ ಬಳಿ ಬಿ.ಎಚ್. ರಸ್ತೆಯಲ್ಲಿ ನಡೆದಿದೆ.
ಬೀದಿ ಬದಿ ವ್ಯಾಪಾರಿಗಳ ತೆರವಿಗೆ ತುಮಕೂರು ಮಹಾನಗರ ಪಾಲಿಕೆ ಸಿಬ್ಬಂದಿ ಆಗಮಿಸಿದ ವೇಳೆ ಸ್ಮಶಾನದಲ್ಲಿರುವ ಮಾರುಕಟ್ಟೆಗೆ ನಾನು ಹೋಗುವುದಿಲ್ಲ ಎಂದು ವೃದ್ಧ ಪಟ್ಟು ಹಿಡಿದಿದ್ದಾರೆ.
ದೋಬಿಘಾಟ್ ಬಳಿ ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಮಾರುಕಟ್ಟೆ ನಿರ್ಮಿಸಲಾಗಿದೆ. ಕೆಲವು ವ್ಯಾಪಾರಿಗಳು ಆ ಮಾರುಕಟ್ಟೆಯಲ್ಲೇ ವ್ಯಾಪಾರ ಮಾಡುತ್ತಿದ್ದಾರೆ. ಈಗಾಗಲೇ ಆರ್.ಟಿ.ಓ ಕಚೇರಿಯಿಂದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದವರೆಗೆ ಬೀದಿ ಬದಿ ವ್ಯಾಪಾರವನ್ನು ಪಾಲಿಕೆ ನಿರ್ಬಂಧಿಸಿದೆ.
ನಿರ್ಬಂಧ ನಡುವೆ ಕೆಲವು ಬೀದಿ ಬದಿ ವ್ಯಾಪಾರಿಗಳು ವಿವಿ ಬಳಿಯ ಫುಟ್ ಪಾತ್ ನಲ್ಲೇ ವ್ಯಾಪಾರ ಮಾಡುತ್ತಿದ್ದಾರೆ. ತುಮಕೂರು ವಿವಿಯ ಸ್ಕೈವಾಕರ್ ಕೆಳಗೆ ವೃದ್ಧೆ ವ್ಯಾಪಾರ ಮಾಡುತ್ತಿದ್ದರು. ಇದೀಗ ಏಕಾಏಕಿ ಸ್ಥಳ ಬದಲಾವಣೆ ಮಾಡಲು ಪಾಲಿಗೆ ಸಿಬ್ಬಂದಿ ಒತ್ತಡ ಹಾಕುತ್ತಿದ್ದಾರೆ. ಆದರೆ ವೃದ್ಧೆ, ನಾನು ಇದೇ ಜಾಗದಲ್ಲಿ ವ್ಯಾಪಾರ ಮಾಡುತ್ತೇನೆ ಎಂದು ಪಟ್ಟು ಹಿಡಿದಿದ್ದಾರೆ.
ಇನ್ನೂ ಸಿಬ್ಬಂದಿ ಸ್ಥಳದಿಂದ ವೃದ್ಧೆಯನ್ನು ಹೋಗಲು ಹೇಳಿದ ವೇಳೆ ಆಕ್ರೋಶಗೊಂಡ ವೃದ್ಧೆ ತುಮಕೂರು ವಿವಿ ಬಳಿ ಬಿ.ಎಚ್. ರಸ್ತೆ ಚಲಿಸುವ ವಾಹನಗಳಿಗೆ ಅಡ್ಡ ನಿಂತು ಪ್ರತಿಭಟಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296